For Quick Alerts
  ALLOW NOTIFICATIONS  
  For Daily Alerts

  ತಿಂಗಳುಗಳ ಬಳಿಕ ಟ್ವಿಟ್ಟರ್ ನಲ್ಲಿ ಶ್ರುತಿ ಹರಿಹರನ್ ದರ್ಶನ

  |

  ನಟಿ ಶ್ರುತಿ ಹರಿಹರನ್ ಎಂದ ತಕ್ಷಣ ಅವರ ಸಿನಿಮಾಗಳಿಗಿಂತ ಹೆಚ್ಚು ವಿವಾದವೇ ನೆನಪಿಗೆ ಬರುತ್ತದೆ. ನಟ ಅರ್ಜುನ್ ಸರ್ಜಾ ವಿರುದ್ಧ ವೀಟೂ ಆರೋಪ ಮಾಡಿದ್ದ ಶ್ರುತಿ ದಕ್ಷಿಣ ಭಾರತದ ತುಂಬ ಸುದ್ದಿಯಾಗಿದ್ದರು.

  ವೀಟೂ ವಿವಾದದ ಬಳಿಕ ಇದ್ದಕ್ಕಿದ್ದ ಹಾಗೆ ಶ್ರುತಿ ಹರಿಹರನ್ ಕಾಣೆಯಾದರು. ಅವರು ಎಲ್ಲಿ ಇದ್ದಾರೆ..? ಏನು ಮಾಡುತ್ತಿದ್ದಾರೆ..? ಯಾವುದಕ್ಕೂ ಉತ್ತರ ಇಲ್ಲ. ತಮ್ಮ 'ನಾತಿಚರಾಮಿ' ಸಿನಿಮಾದ ಬಗ್ಗೆ ಹಾಗೂ ಕೆಲ ಸಣ್ಣ ಪುಟ್ಟ ವಿಚಾರ ಬಿಟ್ಟರೆ ಯಾವುದರ ಬಳಿಯೂ ಸೋಷಿಯಲ್ ಮೀಡಿಯಾದಲ್ಲಿ ಅವರು ಪ್ರತಿಕ್ರಿಯೆ ಕೊಡುತ್ತಿರಲಿಲ್ಲ.

  ತಮ್ಮ ಕೊನೆಯ ನಾಟಕದಲ್ಲಿ ನಟಿಸಲು ಅನಂತ್ ನಾಗ್ ರಿಗೆ ಆಫರ್ ನೀಡಿದ್ರು ಕಾರ್ನಾಡ್ ತಮ್ಮ ಕೊನೆಯ ನಾಟಕದಲ್ಲಿ ನಟಿಸಲು ಅನಂತ್ ನಾಗ್ ರಿಗೆ ಆಫರ್ ನೀಡಿದ್ರು ಕಾರ್ನಾಡ್

  ಆದರೆ, ಇದೀಗ ತಿಂಗಳುಗಳ ಬಳಿಕ ಮತ್ತೆ ಟ್ವಿಟ್ಟರ್ ನಲ್ಲಿ ಶ್ರುತಿ ಹರಿಹರನ್ ಪ್ರತ್ಯಕ್ಷ ಆಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ನಿಧನರಾಗಿದ್ದು, ಶ್ರುತಿ ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ...

  ಟ್ವೀಟ್ ಮೂಲಕ ಶ್ರುತಿ ಸಂತಾಪ

  ಟ್ವೀಟ್ ಮೂಲಕ ಶ್ರುತಿ ಸಂತಾಪ

  ಗಿರೀಶ್ ಕಾರ್ನಾಡ್ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಶ್ರುತಿ ''ಒಬ್ಬ ಲೆಜೆಂಡ್ ರನ್ನು ಕಳೆದುಕೊಂಡ ನೋವನ್ನು ಹಂಚಿಕೊಳ್ಳಲು ಬಹಳ ಕಾಲದ ಬಳಿಕ ಸೋಷಿಯಲ್ ಮೀಡಿಯಾಗೆ ಬರುತ್ತಿದ್ದೇನೆ. ಇಂತಹ ಅದ್ಭುತ ವ್ಯಕ್ತಿಯ ಜೊತೆಗೆ ಕೆಲಸ ಮಾಡುವ ಅವಕಾಶ ಒಮ್ಮೆ ಸಿಕ್ಕಿತ್ತು. ಅವರ ಸರಳತೆ ಹಾಗೂ ಜ್ಞಾನ ವಿಸ್ಮಯವಾದದ್ದು. ಅವರು ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ.'' ಎಂದು ನೆನೆದಿದ್ದಾರೆ.

  'ಸವಾರಿ 2' ಸಿನಿಮಾದಲ್ಲಿ ನಟನೆ

  'ಸವಾರಿ 2' ಸಿನಿಮಾದಲ್ಲಿ ನಟನೆ

  ಕನ್ನಡದ ಇಂದಿನ ಯುವ ನಟಿಯರಿಗೆ ಗಿರೀಶ್ ಕಾರ್ನಾಡ್ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ತೀರಾ ಕಡಿಮೆ. ಹೀಗಿರುವಾಗ, ಗಿರೀಶ್ ಕಾರ್ನಾಡ್ ಜೊತೆಗೆ ಶ್ರುತಿ ಹರಿಹರನ್ ಒಮ್ಮೆ ನಟಿಸುವ ಭಾಗ್ಯ ಪಡೆದಿದ್ದರು. 'ಸವಾರಿ 2' ಸಿನಿಮಾದಲ್ಲಿ ಕಾರ್ನಾಡರ ಜೊತೆಗೆ ಶ್ರುತಿ ತೆರೆ ಹಂಚಿಕೊಂಡರು. ಇದು ಜಾಕಬ್ ವರ್ಗಿಸ್ ನಿರ್ದೇಶನದ ಸಿನಿಮಾವಾಗಿತ್ತು.

  ಗಿರೀಶ್ ಕಾರ್ನಾಡ್ ನಿಧನಕ್ಕೆ ಕಂಬನಿ ಮಿಡಿದ ಕನ್ನಡ ಚಿತ್ರರಂಗಗಿರೀಶ್ ಕಾರ್ನಾಡ್ ನಿಧನಕ್ಕೆ ಕಂಬನಿ ಮಿಡಿದ ಕನ್ನಡ ಚಿತ್ರರಂಗ

  ಟ್ವಿಟ್ಟರ್ ಗೆ ಶ್ರುತಿ ಕಮ್ ಬ್ಯಾಕ್

  ಟ್ವಿಟ್ಟರ್ ಗೆ ಶ್ರುತಿ ಕಮ್ ಬ್ಯಾಕ್

  ಟ್ವಿಟ್ಟರ್ ನಲ್ಲಿ ಸಾದಾ ಸಕ್ರೀಯರಾಗಿದ್ದ ಶ್ರುತಿ ಹರಿಹರನ್ ಮಿಟೂ ಆರೋಪದ ಬಳಿಕ ಸುಮ್ಮನಾದರು. ಬಳಿಕ ಆಗಾಗ ಒಂದೊಂದು ಟ್ವೀಟ್ ಮಾಡುತ್ತಿದ್ದರು. ಕೊನೆಯದಾಗಿ ಫೆಬ್ರವರಿ ತಿಂಗಳಿನಲ್ಲಿ ಮಿಟೂ ಬಗ್ಗೆಯೇ ಒಂದು ಟ್ವೀಟ್ ಮಾಡಿದ್ದ ಶ್ರುತಿ ಅದರ ನಂತರ ಈಗ ಮತ್ತೆ ಬಂದಿದ್ದಾರೆ. ಗಿರೀಶ್ ಕಾರ್ನಾಡ್ ಟ್ವೀಟ್ ಮೂಲಕ ಟ್ವಿಟ್ಟರ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ.

  ಕನ್ನಡ ಚಿತ್ರರಂಗದಿಂದ ಸಂತಾಪ

  ಕನ್ನಡ ಚಿತ್ರರಂಗದಿಂದ ಸಂತಾಪ

  ಕನ್ನಡ ಚಿತ್ರರಂಗದ ಬಹುತೇಕರು ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸಿದ್ದಾರೆ. ನಟ ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಸುಮಲತಾ ಅಂಬರೀಶ್, ಕಾಲಿವುಡ್ ನಟ ಕಮಲ್ ಹಾಸನ್ ಹೀಗೆ ಸಾಕಷ್ಟು ಕಲಾವಿದರು ಕಾರ್ನಾಡರಿಗೆ ನಮನ ಸಲ್ಲಿಸಿದ್ದಾರೆ.

  English summary
  Kannada actress Sruthi Hariharan condolence for writer girish karnad death Kannada popular writer, Jnanpith award winner Girish Karnad passes away Today (June 10th) in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X