ಶ್ರುತಿ ಹರಿಹರನ್ ಮುದ್ದಿನ ಮಗಳು ಜಾನಕಿಯ ಮುದ್ದಾದ ಫೋಟೋಗಳಿವು
'ಬ್ಯೂಟಿಫುಲ್ ಮನಸ್ಸುಗಳು', 'ತಾರಕ್', 'ಉಪೇಂದ್ರ ಮತ್ತೆ ಬಾ', 'ಅಂಬಿ ನಿಂಗ್ ವಯಸ್ಸಾಯ್ತೋ'.. ಹೀಗೆ ಬ್ಯಾಕ್ ಟು ಬ್ಯಾಕ್ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ನಟಿ ಶ್ರುತಿ ಹರಿಹರನ್. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದ ಶ್ರುತಿ ಹರಿಹರನ್, ಕೋರ್ಟ್ ಮೆಟ್ಟಿಲೇರಿದ್ಮೇಲೆಯೇ ಆಕೆ ಮದುವೆ ಆಗಿರುವ ಸುದ್ದಿ ಬಹಿರಂಗವಾಗಿದ್ದು.
ಕೇರಳ ಮೂಲದ ಡ್ಯಾನ್ಸರ್, ಮಾರ್ಷಲ್ ಆರ್ಟ್ಸ್ ಪಟು ಆಗಿರುವ ರಾಮ್ ಕುಮಾರ್ ಎಂಬುವರನ್ನು 2017 ರಲ್ಲಿಯೇ ಶ್ರುತಿ ಹರಿಹರನ್ ವಿವಾಹ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ದಂಪತಿಗೆ ಕಳೆದ ವರ್ಷ ಹೆಣ್ಣು ಮಗು ಜನಿಸಿತು.
ಮಗಳಿಗೆ 'ಜಾನಕಿ' ಅಂತ ಶ್ರುತಿ ಹರಿಹರನ್ ಮತ್ತು ರಾಮ್ ಕುಮಾರ್ ದಂಪತಿ ನಾಮಕರಣ ಮಾಡಿದ್ದಾರೆ. ಮುದ್ದಿನ ಮಗಳು ಜಾನಕಿಯ ಫೋಟೋ ಶೂಟ್ ಮಾಡಿಸಿರುವ ಶ್ರುತಿ ಹರಿಹರನ್, ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನೋಡಿರಿ...

ಎಷ್ಟು ಮುದ್ಮುದ್ದಾಗಿದ್ದಾಳೆ ನೋಡಿ ಜಾನಕಿ
ನಟಿ ಶ್ರುತಿ ಹರಿಹರನ್ ಮತ್ತು ರಾಮ್ ಕುಮಾರ್ ದಂಪತಿಯ ಪುತ್ರಿ ಜಾನಕಿ ಎಷ್ಟು ಮುದ್ಮುದ್ದಾಗಿದ್ದಾಳೆ ನೋಡಿ.. ಜಾನಕಿಯನ್ನ ಪುಟ್ಟ ಪ್ರಿನ್ಸೆಸ್ ನಂತೆ ಸಿಂಗರಿಸಿ ಕ್ಲಿಕ್ ಮಾಡಿರುವ ಫೋಟೋ ಇದು.

ಮೊಟ್ಟ ಮೊದಲ ಫೋಟೋ ಶೂಟ್
ಶ್ರುತಿ ಹರಿಹರನ್ ಮಗಳ ಮೊಟ್ಟ ಮೊದಲ ಫೋಟೋ ಶೂಟ್ ಇದಾಗಿದೆ. ಪುಟಾಣಿ ಜಾನಕಿಗೆ 16 ದಿನಗಳು ತುಂಬಿದ್ದಾಗ ಈ ಫೋಟೋ ಶೂಟ್ ಮಾಡಲಾಗಿದೆ.

ಕ್ಯೂಟೆಸ್ಟ್ ಫೋಟೋಶೂಟ್
''ನಾನು ಭಾಗಿಯಾದ ಕ್ಯೂಟೆಸ್ಟ್ ಫೋಟೋ ಶೂಟ್ ಇದು'' ಎಂದು ನಟಿ ಶ್ರುತಿ ಹರಿಹರನ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಮಗಳ ಫೋಟೋಶೂಟ್ ಮಾಡುವಾಗ ತಮಗಾದ ಅನುಭವವನ್ನು ಬಣ್ಣಿಸಿದ್ದಾರೆ.

ಜಾನಕಿಗೆ ಈಗ ಐದು ತಿಂಗಳು
ಅಂದ್ಹಾಗೆ, ಜಾನಕಿಗೆ ಈಗ ಐದು ತಿಂಗಳು ತುಂಬಿದ್ದು, ಮಗಳ ಆರೈಕೆಯಲ್ಲಿ ಶ್ರುತಿ ಹರಿಹರನ್ ತೊಡಗಿದ್ದಾರೆ. ಇತ್ತೀಚೆಗಷ್ಟೇ ಸಿಟಿಜನ್ಸ್ ಫಾರ್ ಬೆಂಗಳೂರು ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪತಿ ರಾಮ್ ಮತ್ತು ಮಗಳು ಜಾನಕಿ ಜೊತೆಗೆ ಶ್ರುತಿ ಹರಿಹರನ್ ಪಾಲ್ಗೊಂಡಿದ್ದರು. ಆ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.


Click it and Unblock the Notifications











