ಸರ್ಜಾ ವಿರುದ್ಧ ಶ್ರುತಿ ದೂರು: ಯುಬಿ ಸಿಟಿ ಘಟನೆ ಬಿಚ್ಚಿಟ್ಟ ನಟಿ
ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀಟೂ ಆರೋಪಕ್ಕೆ ಶ್ರುತಿ ಹರಿಹರನ್ ಟ್ವಿಸ್ಟ್ ನೀಡಿದ್ದಾರೆ. ಇಷ್ಟು ದಿನ ಸರ್ಜಾ ವಿರುದ್ಧ ಎಲ್ಲಿಯೂ ದೂರು ದಾಖಲಿಸಿರಲಿಲ್ಲ. ಆದ್ರೀಗ, ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
'ವಿಸ್ಮಯ' ಚಿತ್ರದ ಚಿತ್ರೀಕರಣ ವೇಳೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಹೇಳುತ್ತಿದ್ದ ಶ್ರುತಿ, ಈಗ ಮತ್ತಷ್ಟು ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಯುಬಿ ಸಿಟಿಯಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ನನಗೆ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ.
ಇದು ಸಹಜವಾಗಿ ಇಡೀ ಪ್ರಕರಣದ ಸ್ವರೂಪವನ್ನೇ ಬದಲಿಸಿದೆ. ಹಾಗಿದ್ರೆ, ಶ್ರುತಿ ಹರಿಹರನ್ ಮಾಡಿರುವ ಆರೋಪದಲ್ಲಿ ಉಲ್ಲೇಖಿಸಿರುವ ಅಂಶಗಳೇನು.? ಮುಂದೆ ಓದಿ....

ಯುಬಿ ಸಿಟಿಯಲ್ಲಿ ದೌರ್ಜನ್ಯ.?
ಯುಬಿ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನನ್ನ ತೊಡೆ ಮತ್ತು ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೆಬ್ಬಾಳದ ಶೂಟಿಂಗ್ ನಲ್ಲೂ ಕಿರುಕುಳ
ಹೆಬ್ಬಾಳದ ಪ್ರೆಸಿಡೆನ್ಸ್ ಕಾಲೇಜಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ನಿರ್ದೇಶಕರ ಸೂಚನೆಯಂತೆ ಒಂದು ದೃಶ್ಯದ ರಿಹರ್ಸಲ್ ಮಾಡಬೇಕಿತ್ತು. ಒಂದು ಡೈಲಾಗ್ ನಂತರ ತಬ್ಬಿಕೊಳ್ಳುವ ದೃಶ್ಯವಿತ್ತು. ಆದ್ರೆ, ಆ ಸಮಯದಲ್ಲಿ ಅರ್ಜುನ್ ಸರ್ಜಾ ನನ್ನನ್ನು ಅಸಭ್ಯವಾಗಿ ಮುಟ್ಟಿದರು ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

ಸರ್ಜಾ ವಿರುದ್ಧ ಎಫ್ ಐ ಆರ್
ಶ್ರುತಿ ಹರಿಹರನ್ ಅವರು ನೀಡಿದ ವಿಚಾರಣೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪ್ರಕಾರ ಎಫ್ ಐ ಆರ್ ದಾಖಲಿಸಿದ್ದಾರೆ. 354, 354A, 509ರ ಅನ್ವಯ ಸರ್ಜಾ ವಿರುದ್ಧ ಎಫ್.ಐ.ಆರ್ ದಾಖಲಾಸಿಕೊಂಡಿದ್ದಾರೆ. ಈ ದೂರಿನ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಮುಂದಾಗಿದ್ದಾರೆ.

ಶ್ರುತಿ ಮಾನಸಿಕವಾಗಿ ನೊಂದಿದ್ದರಂತೆ
'ಮಾನಸಿಕವಾಗಿ ನಾನು ನರುಳಿದ್ದೆ. ನನಗೆ ನನ್ನ ಭಾವನೆಗಳನ್ನ ಹೊರಗೆ ಹೇಳಿಕೊಳ್ಳುವ ಧೈರ್ಯ ಇರಲಿಲ್ಲ. ಸರ್ಜಾ ಒಬ್ಬ ಹೆಸರಾಂತ ನಟ ಆಗಿದ್ದರು. ಚಿತ್ರರಂಗದ ಹೊರಗಡೆಯೂ ಪ್ರಭಾವಿ ವ್ಯಕ್ತಿಯಾಗಿದ್ದರು. ಹಾಗಾಗಿ, ನಾನು ಎಲ್ಲಿಯೂ ಹೇಳಲು ಸಾಧ್ಯವಾಗಲಿಲ್ಲ' ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಮೀಟೂ ಆರೋಪವೇ ಬೇರೆಯಾಗಿತ್ತು
ಇಷ್ಟು ದಿನ ಮೀಟೂ ಅಭಿಯಾನದಲ್ಲಿ ಶ್ರುತಿ ಮಾಡಿದ್ದ ಆರೋಪವೇ ಬೇರಯಾಗಿತ್ತು. ಶೂಟಿಂಗ್ ಸೆಟ್ ನಲ್ಲಿ ತಬ್ಬಿಕೊಂಡಿದ್ದರು. ಡನ್ನಿರ್ ಗೆ ಹೋಗೋಣ ಬಾ ಎಂದಿದ್ದರು, ರೆಸಾರ್ಟ್ ಗೆ ಹೋಗೋಣ ಬಾ ಎಂದಿದ್ದರು ಎಂದು ದೂರಿದ್ದರು. ಆದ್ರೀಗ, ಮತ್ತಷ್ಟು ಗಂಭೀರ ಆರೋಪ ಮಾಡಿರುವುದು ನಿಜಕ್ಕೂ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.


Click it and Unblock the Notifications











