ಹೆಣ್ಣಿಗೆ ಹೆಣ್ಣೇ ಶತ್ರು, ಶ್ರುತಿ ಹರಿಹರನ್‌ಗೆ ಅಪೂರ್ವ ಮಾಡಿದ್ದ 'ಮೆಸೇಜ್' ಏನು..?

ಕೆಲವರು ಇರುತ್ತಾರೆ. ಕಿತಾಪತಿ ಮಾಡದಿದ್ದರೆ ತಿಂದ ಅನ್ನ ಅವರಿಗೆ ಜೀರ್ಣವಾಗುವುದಿಲ್ಲ. ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾವನ್ನು ಸ್ಟಾರ್‌ಗಳು ಬಳಸುವುದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಳ್ಳುವ ಇವರು ಆನ್ಲೈನ್‌ ಅನ್ನೇ ಅಡ್ಡಾ ಮಾಡಿಕೊಂಡಿರುತ್ತಾರೆ. ಹೆಸರೇ ಗೊತ್ತಾಗದಂತೆ ಅಶ್ಲೀಲವಾದ, ಕೆಟಾತಿಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ.

ಇನ್ನು ಕೆಲವೊಮ್ಮೆ ಆಗಾಗ ಯಾವುದೋ ಗಟಾರದಲ್ಲಿ ಬಿದ್ದು ಹೊರಳಾಡಿ ಬಂದು ಹೊಟ್ಟೆ ಸೇರಿದ ಹೊಲಸನ್ನೆಲ್ಲ ಕಮೆಂಟ್ ಮೂಲಕ ಕಾರಿಕೊಳ್ಳುವ ಮಂದಿಯೂ ಕೂಡ ಇಲ್ಲಿ ಕಾಣಿಸುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಕನ್ನಡ ಚಿತ್ರರಂಗದ ಚೆಲುವೆ ಶ್ರುತಿ ಹರಿಹರನ್ ತಮ್ಮ ತಂಟೆಗೆ ಬಂದ ವ್ಯಕ್ತಿಯೊಬ್ಬರ ಗ್ರಹಚಾರ ಬಿಡಿಸಿದ್ದಾರೆ.

Sruthi Hariharan hits back at the person who abused her in a comment on her workout photo on Instag

ಹೌದು, ಶ್ರುತಿ ಹರಿಹರನ್ ಮೊದಲಿಂದ ಫಿಟ್ನೆಸ್ ಫ್ರೀಕ್. ಬಿಡುವಾದಾಗೆಲ್ಲ ಬೆವರು ಸುರಿಸುವ ಶ್ರುತಿ ಹರಿಹರನ್ ತಮ್ಮ ವರ್ಕೌಟ್ ಫೋಟೊಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಹೀಗೆ ಶ್ರುತಿ ಹರಿಹರನ್ ಹಂಚಿಕೊಂಡ ಫೋಟೊವೊಂದಕ್ಕೆ ಅಪೂರ್ವ ಗೌಡ ಹೆಸರಿನಲ್ಲಿ ಯಾರೋ ಕಾಮೆಂಟ್ ಮಾಡಿದ್ದಾರೆ. ಮದ್ವೆಯಾದ ಮೇಲೆ ಮಕ್ಕಳು ಗಂಡ ನೋಡ್ಕೊಂಡು ಇರು ಯಾಕೆ ಈ ತರ ಎಕ್ಸ್‌ಪೋಸ್ ಮಾಡ್ತೀಯಾ ಬಿಟ್ಟಿ ಉಪದೇಶವನ್ನು ನೀಡಿದ್ದಾರೆ.

ಬಹುಶಃ ಎಲ್ಲರಂತೆ ಶ್ರುತಿ ಹರಿಹರನ್ ಕೂಡ ಕಾಮೆಂಟ್ ಓದಿ ಸುಮ್ಮನಾಗುತ್ತಾರೆ ಎಂದುಕೊಂಡು ಈ ವ್ಯಕ್ತಿ ಮಾಡಿದ್ದರೂ ಮಾಡಿರಬಹುದು. ಆದರೆ ಶ್ರುತಿ ಹರಿಹರನ್ ಕಾಮೆಂಟ್ ಓದಿ ಸುಮ್ಮನೆ ಕೂರಲಿಲ್ಲ. ಬದಲಿಗೆ ಚರ್ಚೆಗೆ ಆಹ್ವಾನಿಸಿದ್ದಾರೆ. ಈ ತರಹದ ಕಾಮೆಂಟ್‌ಗಳು ಮಹಿಳೆಯಿಂದಲೇ ಬಂದರೆ ಆ ದೇವರೆ ಕಾಪಾಡಬೇಕು ಎಂದಿರುವ ಶ್ರುತಿ ಹರಿಹರನ್, ಅಪೂರ್ವ ಗೌಡ ನೀವು ಮತ್ತು ನಾನು ನಿಜವಾಹಿಯೂ ಭೇಟಿಯಾಗಬೇಕು, ತುಂಬಾ ವಿಷಯಗಳ ಬಗ್ಗೆ ವ್ಯೆಯಕ್ತಿಕವಾದ ಚರ್ಚೆ ಮಾಡಬೇಕು, ನೀವೇನ್ ಹೇಳ್ತೀರಾ ಎಂದು ಕೇಳಿದ್ದಾರೆ. ಅಪೂರ್ವ ಗೌಡ ಐಡಿಗೆ ಟ್ಯಾಗ್ ಮಾಡಿದ್ದಾರೆ.

ಶ್ರುತಿ ಹರಿಹರನ್ ಅವರಿಂದ ಬಂದ ಈ ಪ್ರತಿಕ್ರಿಯೆಗೆ ಥಂಡಾ ಹೊಡೆದ ಅಪೂರ್ವ ಗೌಡ ಹೆಸರಿನಲ್ಲಿ ಕಾಮೆಂಟ್ ಮಾಡಿದ್ದ ವ್ಯಕ್ತಿ ಇನ್ಸ್ಟಾಗ್ರಾಮ್‌ದಿಂದ ಪೇರಿ ಕಿತ್ತಿದ್ದಾರೆ. ಅಕೌಂಟ್ ಡಿಲೀಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಶ್ರುತಿ ಹರಿಹರನ್ ಆ ನಂತರ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನಡೆದ ಡ್ರಾಮಾವನ್ನು ನೀವೆಲ್ಲ ನೋಡಿರಬಹುದು ಎಂದು ಅಂದುಕೊಳ್ಳುತ್ತೇನೆ. ನಿಮ್ಮಲ್ಲಿ ಕೆಲವರು ಆ ವ್ಯಕ್ತಿಗೆ ಮೆಸೇಜ್ ಕೂಡ ಕಳುಹಿಸಿದ್ದೀರಾ { ಮಾಡೆಲ್ ನ ಫೋ ಟೊ ಮತ್ತು ವಿಡಿಯೋಗಳನ್ನು ಬಳಸಿಕೊಂಡು ಈ ಖಾತೆಯನ್ನು ನಡೆಸುತ್ತಿರುವುದು ವ್ಯಕ್ತಿನಾ ಅಥವಾ ಸ್ವತ: ಹುಡುಗಿನಾ ಎನ್ನುವುದು ಗೊತ್ತಿಲ್ಲ } ಎಂದಿರುವ ಶ್ರುತಿ ಹರಿಹರನ್ ನನಗೂ ಕೂಡ ನೀವು ಮೆಸೇಜ್ ಮಾಡಿದ್ದೀರಾ, ನಿಮ್ಮೆಲ್ಲರಿಗೆ ಧನ್ಯವಾದ ಎಂದಿದ್ದಾರೆ. ಸಾಮಾನ್ಯವಾಗಿ ಪುರುಷರಿಂದ ಈ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತವೆ ಆದರೆ ದುರಾದೃಷ್ಟವಶಾತ್ ಮಹಿಳೆಯರೇ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ ಎಂದು ತಮ್ಮ ಬೇಸರವನ್ನು ಶ್ರುತಿ ಹರಿಹರನ್ ಹೊರ ಹಾಕಿದ್ದಾರೆ.

ಇನ್ನುಳಿದಂತೆ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ನಂತರ ಕೆಲ ಕಾಲ ಚಿತ್ರರಂಗದಿಂದ ದೂರ ಇರುವ ಶ್ರುತಿ ಹರಿಹರನ್, ತಮ್ಮ ಬಹುಕಾಲದ ಗೆಳೆಯ ರಾಮ್ ಜೊತೆ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಮುದ್ದಾದ ಮಗಳಿಗೆ ಜನ್ಮ ನೀಡಿದ್ದಾರೆ. ತಮ್ಮ ಮಗಳಿಗೆ ಜಾನಕಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಈ ವರ್ಷದ ಆರಂಭದಲ್ಲಿ ಶ್ರುತಿ ಹರಿಹರನ್ ಅಭಿನಯದ ಸಾರಾಂಶ ಎಂಬ ಚಿತ್ರ ಬಿಡುಗಡೆಯಾಗಿತ್ತು. ಸದ್ಯ ಶ್ರುತಿ ಹರಿಹರನ್ ಸ್ಟ್ರಾಬೇರಿ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಈ ಚಿತ್ರದ ನಿರ್ಮಾಪಕರು ಅನ್ನುವುದು ವಿಶೇಷ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X