ಚಿರು ಸರ್ಜಾ ನಿಧನಕ್ಕೆ ನಟಿ ಶ್ರುತಿ ಹರಿಹರನ್ ಸಂತಾಪ
ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಚಿರು ಸರ್ಜಾ ದಿಢೀರ್ ಸಾವು ಇಡೀ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಚಿಕ್ಕ ವಯಸ್ಸಿನಲ್ಲಿಯೆ ಜೀವನದ ಪಯಣ ನಿಲ್ಲಿಸಿ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಚಿರು ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.
Recommended Video
ಸ್ಯಾಂಡಲ್ ವುಡ್ ಮಾತ್ರವಲ್ಲ ಪರಭಾಷೆ ಚಿತ್ರರಂಗದವರು ಚಿರು ಸರ್ಜಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪೃಥ್ವಿರಾಜ್, ಅಲ್ಲು ಸಿರೀಶ್, ಖುಷ್ಬೂ, ನಾಜರಿಯಾ ಸೇರಿದ್ದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಜೂನ್ 7 ಮಧ್ಯಾಹ್ನ ಹೃದಯಾಘಾತದಿಂದ ಚಿರು ಕೊನೆಯುಸಿರೆಳೆದಿದ್ದಾರೆ. ಚಿರು ಸಾವಿಗೆ ನಟಿ ಶ್ರುತಿ ಹರಿಹರನ್ ಸಹ ಕಂಬನಿ ಮಿಡಿದಿದ್ದಾರೆ. ಮುಂದೆ ಓದಿ..

ಸಂತಾಪ ಸೂಚಿಸಿ ಶ್ರುತಿ ಪೋಸ್ಟ್
ನಟಿ ಶ್ರುತಿ ಹರಿಹರನ್, ಚಿರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರುತಿ "ಈ ಸುದ್ದಿ ಕೇಳಿ ನಿಜಕ್ಕು ಹೃದಯಛಿದ್ರವಾಯಿತು. ಶಾಕ್ ಅಲ್ಲಿದ್ದೀನಿ. ಆತ್ಮಕ್ಕೆ ಶಾಂತಿ ಸಿಗಲಿ. ಮೇಘನಾ ರಾಜ್ ಗೆ ದುಃಖಭರಿಸುವ ಶಕ್ತಿ ದೇವರು ನೀಡಲಿ" ಎಂದು ಬರೆದುಕೊಂಡಿದ್ದಾರೆ.

ಆದ್ಯಾ ಸಿನಿಮಾದಲ್ಲಿ ಒಟ್ಟಿಗೆ ನಟನೆ
ನಟಿ ಶ್ರುತಿ ಹರಿಹರನ್, ಚಿರು ಸರ್ಜಾ ಜೊತೆ ಆದ್ಯಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಚಿರು ಜೊತೆ ಶ್ರುತಿ ಹರಿಹರನ್ ಸ್ಕ್ರೀನ್ ಶೇರ್ ಮಾಡಿದ್ದರು. ಈ ಸಿನಿಮಾ ಇದೆ ವರ್ಷ ಪ್ರಾರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿ ರಿಲೀಸ್ ಆಗಿದೆ.

ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ
ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪ ಮಾಡಿದ್ದರು. ಈ ಘಟನೆ ನಂತರ ಸರ್ಜಾ ಕುಟುಂಬದ ಜೊತೆ ವೈಮನಸ್ಸು ಹೆಚ್ಚಾಗಿತ್ತು. ಆ ಸಮಯದಲ್ಲಿ ಸಹೋದರರಾದ ಚಿರು ಸರ್ಜಾ ಮತ್ತು ಧ್ರುವ ಸರ್ಜಾ ಇಬ್ಬರು ಮಾವ ಅರ್ಜುನ್ ಸರ್ಜಾ ಪರ ನಿಂತಿದ್ದರು. ಆದರೆ ಇದನ್ನೆಲ್ಲ ಮರೆತು ಶ್ರುತಿ, ಚಿರು ಸಾವಿಗೆ ಸಂತಾಪ ಸೂಚಿಸಿ, ಮೇಘನಾ ರಾಜ್ ಗೆ ಸಾಂತ್ವನ ಹೇಳಿದ್ದಾರೆ.
ಚಿರು ಜೊತೆಗಿನ ನೆನಪು ಮೆಲುಕು ಹಾಕಿ ಅರ್ಜುನ್ ಸರ್ಜಾ ಕುಟುಂಬಕ್ಕೆ ಸಾಂತ್ವನ ಹೇಳಿದ ಚೇತನ್

ನಟ ಚೇತನ್ ಟ್ವೀಟ್
ನಟ ಚೇತನ್ ಸಹ ಸಂತಾಪ ಸೂಚಿಸಿದ್ದಾರೆ. "ನನ್ನ ಸ್ನೇಹಿತ ಮತ್ತು ಸಹ ನಟ ಚಿರು ನಿಧನ ನಿಜಕ್ಕು ದುಃಖ ತಂದಿದೆ. ನಾವಿಬ್ಬರು ಸಿನಿಮಾ ಮಾಡುವ ಮೊದಲೆ ತಿಳಿದಿದ್ದವರು. ಯಾವಾಗಲು ಖುಷಿ ಮತ್ತು ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು. ಇನ್ನೂ ರಿಲೀಸ್ ಆಗದ ರಣಂ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದೆವು. ಅತೀ ಶೀಘ್ರದಲ್ಲಿಯೇ ಹೊರಟು ಹೋದ್ರಿ ಗೆಳೆಯ. ಮೇಘನಾ, ಧ್ರುವ, ಅರ್ಜುನ್ ಸರ್ ಮತ್ತು ಸರ್ಜಾ ಫ್ಯಾಮಿಲಿಗೆ ನನ್ನ ಸಾಂತ್ವನ" ಎಂದು ಹೇಳಿದ್ದಾರೆ.


Click it and Unblock the Notifications











