ಫಿಲ್ಮ್ ಚೇಂಬರ್ ಗೆ ಬಂದ ಅರ್ಜುನ್ ಸರ್ಜಾ, ಶ್ರುತಿ
ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ವಿವಾದದ ಕುರಿತಾಗಿ ಇದೀಗ ಫಿಲ್ಮ್ ಚೇಂಬರ್ ನಲ್ಲಿ ಸಭೆ ಶುರುವಾಗುತ್ತಿದೆ. ಇದೊಂದು ವಿಚಾರಣೆಯ ಪ್ರಕ್ರಿಯೆಯಾಗಿದ್ದು, ಇದು ಸಂಧಾನ ಸಭೆ ಅಲ್ಲ ಎಂದು ನಿರ್ಮಾಪಕ ಕೆ ಮಂಜು ಸ್ಪಷ್ಟ ಪಡಿಸಿದ್ದಾರೆ.
ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಗೆ ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಆಗಮಿಸಿದ್ದಾರೆ. ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರ ದೂರಿನ ಹಿನ್ನಲೆ ಇಂದಿನ ಸಭೆ ನಡೆಯುತ್ತಿದೆ.

ಉಳಿದಂತೆ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್, ನಟಿ ಪೂಜಾ ಗಾಂಧಿ, ರೂಪ ಅಯ್ಯರ್, ಕವಿತಾ ಲಂಕೇಶ್, ಹಿರಿಯನ ನಟ ಲೋಕ್ ನಾಥ್, ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೆ ಗೌಡ, ಮಾಜಿ ಅಧ್ಯಕ್ಷ ಸಾರಾ ಗೋವಿಂದು, ನಿರ್ಮಾಪಕ ಕೆ ಮಂಜು, ಮುನಿರತ್ನ ಹಾಗೂ ಹಿರಿಯ ಕಲಾವಿದರು ಸಭೆಯಲ್ಲಿ ಇರಲಿದ್ದಾರೆ.
ಕೆಲ ದಿನಗಳ ಹಿಂದೆ ನಟ ಅರ್ಜುನ್ ಸರ್ಜಾ ಅವರ ಮೇಲೆ ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪ ಮಾಡಿದ್ದರು. 'ವಿಸ್ಮಯ' ಸಿನಿಮಾದ ವೇಳೆ ತಮ್ಮ ಮೇಲೆ ಕೆಟ್ಟ ಅನುಭವ ಆಗಿದೆ ಎಂದು ಶ್ರುತಿ ಆರೋಪ ಮಾಡಿದ್ದರು.


Click it and Unblock the Notifications











