#metoo ಬಗ್ಗೆ ಶ್ರುತಿ ಮೆಚ್ಚುಗೆ: ಧ್ವನಿ ಎತ್ತಲಿದ್ದಾರಂತೆ ಕನ್ನಡ ನಟಿಯರು

ಬಾಲಿವುಡ್ ನಲ್ಲಿ #metoo ಅಭಿಯಾನದಿಂದ ಆಗುತ್ತಿರುವ ಬೆಳವಣಿಗೆಯನ್ನ ಗಮನಿಸಿದ್ರೆ, ಈ ಕಡೆ ಸೌತ್ ನಲ್ಲಿ #metoo ಸದ್ದು ಮಾಡುತ್ತಾ ಎಂಬ ಆತಂಕ ಕೆಲವರನ್ನ ಕಾಡುತ್ತಿರಬಹುದು.

ಇದುವರೆಗೂ ಕನ್ನಡದ ಹಲವು ತಾರೆಯರು #metoo ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಹೊರತು, ಯಾವ ಆರೋಪವನ್ನ ಕೂಡ ಇಲ್ಲಿ ಮಾಡಿಲ್ಲ. ಇದೀಗ, ನಟಿ ಶ್ರುತಿ ಹರಿಹರನ್ ಮೀಟೂ ಅಭಿಯಾನದ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆ 'ಕಾಸ್ಟಿಂಗ್ ಕೌಚ್' ಕುರಿತು ಧೈರ್ಯವಾಗಿ ಮಾತನಾಡಿದ್ದ ನಟಿ ಶ್ರುತಿ ಹರಿಹರನ್ ಈಗ #metoo ಅಭಿಯಾನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಜ್ಯುವೆಲರಿ ಶಾಪ್ ವೊಂದನ್ನ ಉದ್ಘಾಟನೆ ಮಾಡಿದ ಶ್ರುತಿ ಮಾಧ್ಯಮದವರ ಜೊತೆ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶ್ರುತಿ ಹರಿಹರನ್ ಏನಂದ್ರು.? ಮುಂದೆ ಓದಿ.....

#metoo ಖುಷಿ ನೀಡಿದೆ

#metoo ಖುಷಿ ನೀಡಿದೆ

'ನನಗೆ ನಿಜವಾಗಲೂ ಖುಷಿಯಾಗ್ತಿದೆ. ಪ್ರಭಾವಿ ವ್ಯಕ್ತಿಗಳನ್ನ ಪ್ರಶ್ನಿಸುವಂತಹ ಮಾರ್ಗವಿದು. ನಮ್ಮ ದೇಶ ಹಾಗೂ ಜಗತ್ತಿನಲ್ಲಿ ಅತಿ ದೊಡ್ಡ ಸಮಸ್ಯಯಾಗಿರುವುದು ಲೈಂಗಿಕ ಕಿರುಕುಳ. ತುಂಬಾ ದೊಡ್ಡ ವ್ಯಕ್ತಿಗಳ ಹೆಸರು ಹೊರಗೆ ಬರ್ತಿದೆ. ನಿಜಕ್ಕೂ ಸಂತೋಷ ಆಗ್ತಿದೆ'

ಎಲ್ಲರೂ ಆತಂಕ ಪಡುತ್ತಿದ್ದಾರೆ

ಎಲ್ಲರೂ ಆತಂಕ ಪಡುತ್ತಿದ್ದಾರೆ

'ನನಗೆ ಗೊತ್ತಿರುವ ಕೆಲ ವ್ಯಕ್ತಿಗಳು ಕೂಡ ಭಯ ಪಟ್ಟಿದ್ದಾರೆ. ಯಾವಾಗ ಯಾರಾ ಹೆಸರು ಬಹಿರಂಗವಾಗುತ್ತೋ ಎಂಬ ಆತಂಕ ಕಾಡುತ್ತಿದೆ. ಬಹುಶಃ ಗೇಮ್ ಚೇಂಜರ್, ಈಗ ಧೈರ್ಯದಿಂದ ಮಾತನಾಡುತ್ತಿರುವ ಪ್ರತಿಯೊಬ್ಬ ಮಹಿಳೆಗೂ ನಾನು ಬೆಂಬಲ ನೀಡುತ್ತೇನೆ' ಎಂದು ನಟಿ ಶೃತಿ ಹರಿಹರನ್ ಅಭಿಪ್ರಾಯಪಟ್ಟಿದ್ದಾರೆ.

ಸತ್ಯ ಯಾವಾತ್ತಿದ್ರೂ ಸತ್ಯಾನೇ

ಸತ್ಯ ಯಾವಾತ್ತಿದ್ರೂ ಸತ್ಯಾನೇ

'ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕು ಅಂದ್ರೆ ಅದಕ್ಕೆ ಸಾಕ್ಷಿ ಬೇಕು. ನನ್ನ ಪ್ರಕಾರ ನೋವು ಅನುಭವಿಸಿದ ಹೆಣ್ಣು ಮಕ್ಕಳು ಧೈರ್ಯವಾಗಿ ಬಂದು ಹೇಳುವುದು ಬೇರೆಯವರಿಗೆ ರಕ್ಷಣೆ ನೀಡುತ್ತೆ. ಒಬ್ಬ ಮಹಿಳೆಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವುದು ಕಷ್ಟಕರ ಸಂಗತಿ. ಸತ್ಯ ಯಾವಾಗ ಹೇಳಿದರೂ ಅದು ಸತ್ಯವೇ ಆಗಿರುತ್ತದೆ'

ನಾವು ಧ್ವನಿ ಎತ್ತಲಿದ್ದೇವೆ

ನಾವು ಧ್ವನಿ ಎತ್ತಲಿದ್ದೇವೆ

ಲೈಂಗಿಕ ದೌರ್ಜನ್ಯದಲ್ಲಿ ಗಂಡು ಮತ್ತು ಹೆಣ್ಣಿನ ಪ್ರಶ್ನೆ ಬರಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ. ನಾವು #MeToo ಅಭಿಯಾನದಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಶ್ರುತಿ ಹರಿಹರನ್ ತಿಳಿಸಿದ್ದಾರೆ.

More from Filmibeat

English summary
Kannada actress sruthi hariharan reaction on metoo movement at hubli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X