ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ ನಟಿ ಶ್ರುತಿ ಹರಿಹರನ್
Recommended Video

ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಹರಿಹರನ್ ಸ್ಯಾಂಡಲ್ ವುಡ್ ನ್ನ ಬೆಚ್ಚಿಬೀಳಿಸುವ ಸುದ್ದಿಯೊಂದನ್ನ ಹೊರಹಾಕಿದ್ದಾರೆ. ಹೈದರಬಾದ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಸಿನಿಮಾರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಸಿನಿಮಾ ನಟಿಯರನ್ನ ನಿರ್ಮಾಪಕರು ಅಥವಾ ನಿರ್ದೇಶಕರು ಮಂಚಕ್ಕೆ ಕರೆಯುವ ಸಂಸ್ಕೃತಿ ಇನ್ನು ಇಂಡಸ್ಟ್ರಿಯಲ್ಲಿದೆ ಎಂದು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರುವ ಮುಂಚೆಯೆ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ, ನನಗೂ ಕೆಟ್ಟ ಅನುಭವ ಆಗಿತ್ತು. ಆದ್ರೆ, ಅದಕ್ಕೆ ನಾನು ಸಿಲುಕಲಿಲ್ಲ ಎಂದು ನಟಿ ಶ್ರುತಿ ಹರಿಹರನ್ ತಿಳಿಸಿದ್ದಾರೆ.
ಮೊದಲು ನೃತ್ಯಗಾರ್ತಿಯಾಗಿದ್ದ ಶ್ರುತಿ ನಂತರ ನಟಿಯಾಗಿದ್ದರು. ಈಗ ಕನ್ನಡದ ಯಶಸ್ಸಿನ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ಸಿನಿಮಾ ಮಾಡ್ತಿದ್ದಾರೆ. ಇಷ್ಟೆಲ್ಲಾ ಯಶಸ್ಸಿನ ಹಿಂದೆ ನೋವು ಕೊಡುವ ಸಂಗತಿಯೂ ಇದೆ ಎಂದು ಶ್ರುತಿ ಬಹಿರಂಗಪಡಿಸಿದ್ದಾರೆ. ಈ ವಿಷ್ಯಗಳು ಈಗ ಸಿನಿಮಾರಂಗವನ್ನ ಅನುಮಾನದಿಂದ ನೋಡುವಂತಾಗಿದೆ. ಹಾಗಿದ್ರೆ, ಶ್ರುತಿ ಹೇಳಿದ್ದೇನು? ಆ ನಿರ್ಮಾಪಕ ಯಾರು? ಮುಂದೆ ಓದಿ....

ಪರೋಕ್ಷವಾಗಿ ಮಂಚಕ್ಕೆ ಕರೆದ ನಿರ್ಮಾಪಕ
''ತಮಿಳು ಚಿತ್ರದ ನಿರ್ಮಾಪಕನೊಬ್ಬ ನನಗೆ ಫೋನ್ ಮಾಡಿ, ನಮ್ಮ ಚಿತ್ರದಲ್ಲಿ ನಟಿಸಲು ಅವಕಾಶ ಕೊಡುತ್ತೇನೆ. ಆದ್ರೆ, ನಾವು 5 ಜನ ನಿರ್ಮಾಪಕರಿದ್ದೇವೆ. ನಿನ್ನನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತೇವೆ ಎಂದು ಅಸಭ್ಯವಾಗಿ ಮಾತನಾಡಿದ್ದರು'' ಎಂದು ಕನ್ನಡದ ನಟಿ ಹೇಳಿಕೊಂಡಿದ್ದಾರೆ.

ದಿಟ್ಟ ಉತ್ತರ ಕೊಟ್ಟಿದ್ದ ಶ್ರುತಿ
ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ನಾನು, ''ನೀವು ಇಲ್ಲಿಗೆ ಬನ್ನಿ ಕಾಲಲ್ಲಿರುವ ಚಪ್ಪಲಿಯನ್ನ ಕೈಯಲ್ಲಿ ತಗೆದುಕೊಳ್ಳಬೇಕಾಗುತ್ತೆ ಎಂದು ಖಾರವಾಗಿ ಹೇಳಿದ್ದೇ'' ಎಂದು ಖಾಸಗಿ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

ಕನ್ನಡದಲ್ಲೂ ಅನುಭವ ಆಗಿದೆ
ಅಷ್ಟೇ ಅಲ್ಲ, ಕನ್ನಡದ ನಿರ್ಮಾಪಕರೊಬ್ಬರು ಕೂಡ ನನ್ನ ಬಳಿ ಮಾತನಾಡುವಾಗ, 'ಹೆಣ್ಣು ಅಂದ್ರೆ ವಾಹ್ ಎನ್ನಿಸುವಂತಿರಬೇಕು' ಎಂದು ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ತಮಗಾದ ಅನುಭವನ್ನ ಹಂಚಿಕೊಂಡಿದ್ದಾರೆ.

ಈ ಹಿಂದೆನೂ ಹೇಳಿದ್ದರು
ಅಂದ್ಹಾಗೆ, ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ ಎಂದು ಈ ಹಿಂದೆ ಹಲವು ಬಾರಿ ನಟಿ ಶ್ರುತಿ ಹರಿಹರನ್ ಹೇಳಿಕೊಂಡಿದ್ದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಸೂಪರ್ ಟಾಕ್ ಟೈಮ್'ನಲ್ಲಿ ಈ ಬಗ್ಗೆ ಶ್ರುತಿ ಮಾತನಾಡಿದ್ದರು.


Click it and Unblock the Notifications











