ಶ್ರುತಿ ಈಗ 'ವೈಫ್ ಆಫ್ ರಾಮ್ ಕುಮಾರ್', ಯಾವಾಗ ಮದ್ವೆ ಆಯ್ತು.?

Recommended Video

ಶ್ರುತಿ ಹರಿಹರನ್ ವೈಫ್ ಆಫ್ ರಾಮ್ ಕುಮಾರ್ ಅಂತ ಬರೆದಿದ್ಯಾಕೆ? ನಿಜಕ್ಕೂ ಮದುವೆಯಾಗಿದ್ಯಾ? | FILMIBEAT KANNADA

ಶ್ರುತಿ ಹರಿಹರನ್ ಸುಮಾರು ಐದು ವರ್ಷದಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಇದುವರೆಗೂ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಶ್ರುತಿ ಯಾವುದೇ ವಿವಾದಗಳಲ್ಲಿ, ಗಾಸಿಪ್ ಗಳಲ್ಲಿ ಸಿಕ್ಕಿಹಾಕಿಕೊಂಡಿರಲಿಲ್ಲ.

ಇನ್ನು ಶ್ರುತಿ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೇ ಇನ್ನೂ ಮದುವೆ ಆಗಿರಲಿಲ್ಲ ಎನ್ನಲಾಗಿಯತ್ತು. ಆದ್ರೀಗ, ಶ್ರುತಿ ಪರ್ಸನಲ್ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದೇ ಇದ್ದ ಅಂಶವೊಂದು ಬಹಿರಂಗವಾಗಿದೆ. ಅದು ಅರ್ಜುನ್ ಸರ್ಜಾ ವಿರುದ್ಧ ದೂರು ನೀಡುವ ಸಂದರ್ಭದಲ್ಲಿ.

ಹೌದು, ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ದೂರಿನಲ್ಲಿ ಶ್ರುತಿ ಹರಿಹರನ್ ವೈಫ್ ಆಫ್ ರಾಮ್ ಕುಮಾರ್ ಎಂದು ನಮೂದಿಸಿದ್ದಾರೆ. ಹಾಗಿದ್ರೆ, ರಾಮ್ ಕುಮಾರ್ ಯಾರು.? ಯಾವಾಗ ಮದ್ವೆ ಆಯ್ತು.? ಮುಂದೆ ಓದಿ.....

ಶ್ರುತಿ ವೈಫ್ ಆಫ್ ರಾಮ್ ಕುಮಾರ್

ಶ್ರುತಿ ವೈಫ್ ಆಫ್ ರಾಮ್ ಕುಮಾರ್

ಅರ್ಜುನ್ ಸರ್ಜಾ ವಿರುದ್ಧ ನೀಡಿರುವ ದೂರಿನ ಪ್ರತಿಯಲ್ಲಿ ಇಂದು (from) ವಿಳಾಸ ನಮೂದಿಸಲಾಗಿದೆ. ಈ ಜಾಗದಲ್ಲಿ ಶ್ರೀಮತಿ ಶ್ರುತಿ ಹರಿಹರನ್ (ವೈಫ್ ಆಫ್ ರಾಮ್ ಕುಮಾರ್). ವಯಸ್ಸು 29 ವರ್ಷ. ಜಿ ಎಂ ಪಾಳ್ಯದಲ್ಲಿ ನೆಲೆಸಿರುವುದಾಗಿ ಬರೆದಿದ್ದಾರೆ. ಹಾಗಿದ್ರೆ, ಶ್ರುತಿಗೆ ಮದ್ವೆ ಆಗೋಗಿದೆ.

ಯಾರು ಈ ರಾಮ್ ಕುಮಾರ್.?

ಯಾರು ಈ ರಾಮ್ ಕುಮಾರ್.?

ಸದ್ಯದ ಮಟ್ಟಿಗೆ ರಾಮ್ ಕುಮಾರ್ ಎಂಬುಬರು ಶ್ರುತಿ ಹರಿಹರನ್ ಅವರ ಸ್ನೇಹಿತ ಎಂದು ಹೇಳಲಾಗಿತ್ತು. ಅರ್ಜುನ್ ಸರ್ಜಾ ಪ್ರಕರಣದಲ್ಲಿ ಸರ್ಜಾ ಆಪ್ತ ಪ್ರಶಾಂತ್ ಸಾಂಬರ್ಗಿ ಆರೋಪ ಮಾಡಿದ್ದು ಇದೆ ರಾಮ್ ಕುರಿತು. ಶ್ರುತಿ ಸುಮ್ಮನಿರಬೇಕು ಅಂದ್ರೆ 2 ಕೋಟಿ ಹಣ ನೀಡಬೇಕು ಎಂದು ರಾಮ್ ಫೋನ್ ಮಾಡಿದ್ದರು ಎಂದು ಆರೋಪ ಮಾಡಿದ್ದರು. ಈ ಆರೋಪವನ್ನ ಶ್ರುತಿ ನಿರಾಕರಿಸಿದ್ದರು.

ರಾಮ್ ಕುಮಾರ್ ಕಲರಿಪೈಟು ಆರ್ಟಿಸ್ಟ್

ರಾಮ್ ಕುಮಾರ್ ಕಲರಿಪೈಟು ಆರ್ಟಿಸ್ಟ್

ಶ್ರುತಿ ಹರಿಹರನ್ ಅವರಿಗೆ ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿರುವ ರಾಮ್ ಕುಮಾರ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಅದು ಖಚಿತವಾಗಿರಲಿಲ್ಲ. ಸುಮಾರು ಏಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದು ಡ್ಯಾನ್ಸ್ ಕ್ಲಾಸ್ ಹೋಗುವಾಗಲೇ ಶ್ರುತಿ ಪ್ರೀತಿ ಮಾಡುತ್ತಿದ್ದರಂತೆ. ರಾಮ್ ಕುಮಾರ್ ಕೂಡ ನೃತ್ಯ ಕಲಾವಿದ ಹಾಗೂ ಅಂತರಾಷ್ಟ್ರಿಯ ಮಟ್ಟದಲ್ಲಿ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವವರು. ಇಂದು ಶ್ರುತಿ ಈ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ರಾಮ್ ಕುಮಾರ್ ಅವರ ಸಹಕಾರ ಹೆಚ್ಚಿದೆಯಂತೆ.

ಮನಸ್ಸಿನಲ್ಲಿ ಮದುವೆ ಆಗಿದ್ದ ಶ್ರುತಿ

ಮನಸ್ಸಿನಲ್ಲಿ ಮದುವೆ ಆಗಿದ್ದ ಶ್ರುತಿ

ಮನಸ್ಸಿನಲ್ಲೇ ನಾನು ಮದುವೆ ಆಗಿರುವ ಹಾಗೆ ನಿರ್ಧಾರ ಮಾಡಿರುವೆ ಎಂದು ಶ್ರುತಿ ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದರು. ಆದ್ರೆ, ಅಧಿಕೃತವಾಗಿ ಮದುವೆ ಆಗುವುದು ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು. ಬಟ್, ಇದೀಗ, ಕಂಪ್ಲೆಂಟ್ ಪ್ರತಿಯಲ್ಲಿ ವೈಪ್ ಆಫ್ ಎಂದು ನಮೂದಿಸಿರುವುದು ತೀರಾ ಗೊಂದಲ ಉಂಟು ಮಾಡಿದೆ.

ಮದುವೆ ಆಗೋಗಿದೆ.!

ಮದುವೆ ಆಗೋಗಿದೆ.!

ಹಾಗಿದ್ರೆ, ಶ್ರುತಿ ಹರಿಹರನ್ ಮತ್ತು ರಾಮ್ ಕುಮಾರ್ ಇಬ್ಬರು ಮದುವೆ ಆಗಿದ್ದಾರೆ. ಅದನ್ನ ಇಷ್ಟು ದಿನ ಗೌಪ್ಯವಾಗಿಟ್ಟಿದ್ದರು ಎನ್ನುವುದು ಇದರಿಂದ ಬಹಿರಂಗವಾಗಿದೆ. ಒಟ್ನಲ್ಲಿ, ಅರ್ಜುನ್ ಸರ್ಜಾ ವಿರುದ್ಧ ಕಾನೂನು ಹೋರಾಟ ಮಾಡುತ್ತಿರುವ ಶ್ರುತಿ, ತನ್ನ ಮದುವೆ ವಿಷ್ಯವನ್ನ ಗೊತ್ತಿದ್ದೋ ಗೊತ್ತಿಲ್ಲದೇನೋ ಬಹರಂಗಿಪಡಿಸಿದ್ದಾರೆ.

More from Filmibeat

English summary
Actress sruthi hariharan writes her husband name in complaint copy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X