ಗುರುಪ್ರಸಾದ್‌ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
''ಶ್ರುತಿ ಹರಿಹರನ್'' ನೆನಪಿರಬೇಕಲ್ಲ..! ''ಮೀಟೂ'' ಅಭಿಯಾನದ ರೂವಾರಿ. ಹೆಚ್ಚು ಕಡಿಮೆ ''ಆರು ವರ್ಷ''ದ ಹಿಂದೆ ''ಅರ್ಜುನ್ ಸರ್ಜಾ'' ಮೇಲೆ ''ಮೀಟೂ'' ಆರೋಪವನ್ನ ಮಾಡಿ ಸಂಚಲನ ಸೃಷ್ಟಿಸಿದ್ದ ''ಶ್ರುತಿ ಹರಿಹರನ್'' ಅವರನ್ನ ತೀರಾ ಇತ್ತೀಚೆಗೆ ಕನ್ನಡ ಚಿತ್ರರಂಗದ ''ಸರಸ್ವತಿ ಪುತ್ರ'' ಗುರುಪ್ರಸಾದ್ ಆಡಿಕೊಂಡಿದ್ದರು. ತಮ್ಮ ''ಗಾಳಿ ತಂಗಾಳಿ'' ಹಾಡಿನಲ್ಲಿ ''ಮೀಟೂ ಶ್ರುತಿ'' ಹೆಸರನ್ನ ಪ್ರಸ್ತಾಪಿಸಿದ್ದರು.
ಇದು ಸಾಲದು ಎಂಬಂತೆ "ಶ್ರುತಿ ಹರಿಹರನ್ ಮೂಲ ಕನ್ನಡ ಅಲ್ಲ. ಎಲ್ಲಿಂದಲೋ ಬಂದು ಕನ್ನಡದಲ್ಲಿ ರಾಡಿ ಎಬ್ಬಿಸಿದರು. ಆ ಘಟನೆಗಳ ಸಂಪೂರ್ಣ ಮಾಹಿತಿ ನನಗೆ ಗೊತ್ತು. ಸೀಕ್ರೆಟ್ ಗೊತ್ತಿತ್ತು. ಹಾಗಾಗಿ ನನಗೆ ಕೋಪ ಇತ್ತು. ತೀರಿಸಿಕೊಳ್ಳಲು ಒಂದು ಅವಕಾಶ ಬೇಕಿತ್ತು. ನನ್ನ ಮಾಧ್ಯಮ ಸಿನಿಮಾ. ಹೇಳಬೇಕಿತ್ತು. ಆಕೆಯ ಧೋರಣೆಗೆ ಧಿಕ್ಕಾರ ಕೂಗಬೇಕಿತ್ತು. ಹಾಗಾಗಿ ಮೀಟೂ ಶ್ರುತಿ ಅಂತ ಬೇಕು ಅಂತಲೇ ಹಾಡಿನಲ್ಲಿ ತಂದಿರೋದು"ಎಂದು ಎದೆ ತಟ್ಟಿ ಹೇಳಿಕೊಂಡಿದ್ದರು.

ಆ ನಂತರ ''ರಂಗನಾಯಕ''ನ ''ಕಥೆ'' ಏನಾಯಿತು ಅನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇರಲಿ ವಿಷಯ ಅದಲ್ಲ. ಸದ್ಯದ ''ಬ್ರೇಕಿಂಗ್ ನ್ಯೂಸ್'' ಏನೆಂದರೆ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ''ಹಾಸ್ಯ''ದ ಮೂಲಕ ತಿವಿಯುತ್ತಿದ್ದ ''ಗುರುಪ್ರಸಾದ್'' ಅವರನ್ನೇ ಈಗ ತಮ್ಮ ಮಾತುಗಳ ಮೂಲಕ ''ಶ್ರುತಿ ಹರಿಹರನ್'' ತಿವಿದಿದ್ದಾರೆ. ''ವ್ಯಂಗ್ಯ'' ಮಾಡಿದ್ದಾರೆ.
ಹೌದು, 'ಮಿರರ್ ಕನ್ನಡ' ಯುಟ್ಯೂಬ್ ಚಾನೆಲ್ ಗೆ ಶ್ರುತಿ ಹರಿಹರನ್ ''ಸಂದರ್ಶನ''ವೊಂದನ್ನ ನೀಡಿದ್ದಾರೆ. ಇದೇ ಸಂದರ್ಶನದಲ್ಲಿ ಮಾತನಾಡಿರುವ ಶ್ರುತಿ ಹರಿಹರನ್ ''ಕೆಲವೊಂದು ವಿಚಾರಗಳನ್ನ ಹಾಗೂ ಕೆಲವರನ್ನ ಹಾಗೇ ಸುಮ್ಮನೆ ಬಿಟ್ಟು ಬಿಡಬೇಕು'' ಎಂದಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡಲು ನನಗೆ ಮನಸಿಲ್ಲ ಅಂದಿದ್ದಾರೆ.

ಹಾಗಂಥ ಶ್ರುತಿ ಹರಿಹರನ್ ಗೆ ಗುರು ಪ್ರಸಾದ್ ಮಾತನಾಡಿರುವ ''ವಿಚಾರ'' ಗೊತ್ತಿಲ್ಲ, ಅವರ ಬಳಿ ''ಮಾಹಿತಿ'' ಇಲ್ಲ ಅಂತಲ್ಲ. ಬದಲಿಗೆ ಶ್ರುತಿ ಹರಿಹರನ್ ಅವರಿಗೆ ''ಎಲ್ಲವೂ ಗೊತ್ತು''. ಇಷ್ಟೇ ಯಾಕೆ ''ಶಾರದಾಸುತ''ನ ಲೇಖನಿಯಲ್ಲಿ ಹೊರ ಬಂದ ''ಗಾಳಿ ತಂಗಾಳಿ'' ಹಾಡನ್ನ ''ಶ್ರುತಿ ಹರಿಹರನ್'' ನೋಡಿದ್ದಾರೆ . ''ಉಳ್ಳಾಡಿ ಉಳ್ಳಾಡಿ ನಕ್ಕಿದ್ದಾರೆ''. ಈ ಮಾತನ್ನ ಇದೇ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಅವರೇ ಹೇಳಿದ್ದಾರೆ.
ಇನ್ನೂ ''ಅರ್ಜುನ್ ಸರ್ಜಾ'' ವಿರುದ್ಧದ ''ಮೀಟೂ'' ಪ್ರಕರಣದಲ್ಲಿ ಶ್ರುತಿ ಹರಿಹರನ್ ಅವರಿಗೆ ''ಹಿನ್ನಡೆ''ಯಾಗಿದೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ''ತಪ್ಪು''. ಯಾಕೆಂದರೆ ಖುದ್ದು ಶ್ರುತಿ ಹರಿಹರನ್ ಅವರೇ ಹೇಳಿರುವಂತೆ ಪ್ರಕರಣ ಇನ್ನೂ ''ನ್ಯಾಯಾಲಯ''ದಲ್ಲಿಯೇ ಇದೆ.

ಇಂತಹ ಪ್ರಕರಣಗಳಲ್ಲಿ ''ತೀರ್ಮಾನ'', ''ತೀರ್ಪು'' ಕೊಡುವುದು ಸುಲಭ ಅಲ್ಲ ಎಂದಿರುವ ಶ್ರುತಿ ''ನ್ಯಾಯ'' ಸಿಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ನಾನು ''ಮೀಟೂ'' ಅಭಿಯಾನದಡಿ ''ಧ್ವನಿ'' ಎತ್ತಿದಾಗಲೇ ನಾನು ಗೆದ್ದಾಗಿತ್ತು ಅಂದಿದ್ದಾರೆ. ಅನೇಕ ಜನ ಅನೇಕ ರೀತಿ ಮಾತನಾಡಿದರು ಆದರೆ ಅದೆಲ್ಲದರಾಚೆ ನನ್ನ ಹೇಳಿಕೆಯ ನಂತರ ''ಬದಲಾವಣೆಯ ಕ್ರಾಂತಿ''ಯಾಯಿತು ಅಂದಿದ್ದಾರೆ. ಈಗ ''ಹೆಣ್ಣು ಮಕ್ಕಳ'' ಜೊತೆ ''ಅಸಭ್ಯ ವರ್ತನೆ'' ಮಾಡುವ ಮೊದಲು ಗಂಡಸರು ''ಒಂದೆರಡು ಸಲ'' ಆದರೂ ಯೋಚನೆ ಮಾಡ್ತಾರೆ ನನಗೆ ಅಷ್ಟೇ ಸಾಕು, ಅದೇ ಮುಖ್ಯವೆಂದಿದ್ದಾರೆ.
ಇದೇ ಸಮಯದಲ್ಲಿ ''ಬದುಕಿನ ಅತ್ಯಂತ ಕಠಿಣ ಹಂತ''ದಲ್ಲಿ, ತಮ್ಮ ಕುಟುಂಬ ನೀಡಿದ ''ಸಹಕಾರ'', ಮನೆಯವರು ಅವತ್ತು ತುಂಬಿದ ''ಆತ್ಮಸ್ಥೈರ್ಯ''ವನ್ನೂ ನೆನಪಿಸಿಕೊಂಡಿರುವ ಶ್ರುತಿ ಹರಿಹರನ್, ಮನೆಯಲ್ಲಿ ಎಲ್ಲರು ಹೆದರಿದ್ದರು ಎಂದು ಹೇಳಿದ್ದಾರೆ. ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನನಗೆ ಮನೆಯಿಂದ ಬೆಂಬಲ ಸಿಗಲಿಲ್ಲ ಆದರೆ ಆ ನಂತರ ನನ್ನ ಹಿಂದೆ ಬಂಡೆಗಲ್ಲಿನಂತೆ ನನ್ನ ಕುಟುಂಬ ನಿಂತುಕೊಂಡಿತು ಎಂದು ಹೇಳಿದ್ದಾರೆ ಶ್ರುತಿ ಹರಿಹರನ್

ಅಂದ್ಹಾಗೇ ಮೀಟೂ ಪ್ರಕರಣದ ನಂತರ ಶ್ರುತಿ ಹರಿಹರನ್ ಅವರಿಗೆ ''ಅವಕಾಶಗಳಿಗೂ ತತ್ವಾರ''ವಾಗಿದೆ ಅನ್ನೋ ಮಾತೂ ಇದೆ. ಒಂದು ಹಂತಕ್ಕೆ ಇದು ''ನಿಜಾ'' ಕೂಡ ಎಂದು ಒಪ್ಪಿಕೊಂಡಿರುವ ಶ್ರುತಿ ಹರಿಹರನ್ ,ಚಿತ್ರರಂಗದಿಂದ ''ದೂರ'' ಇರಲು ''ಕೊರೊನಾ'' ಹಾಗೂ ''ವ್ಯೆಯಕ್ತಿಕ ಜೀವನದ ಸಂಭ್ರಮ ಹಾಗೂ ಸಂತಸದ ಕ್ಷಣ''ಗಳು ಕೂಡ ಕಾರಣ ಅಂದಿದ್ದಾರೆ. ಇಂಥ ಶ್ರುತಿ ಹರಿಹರನ್ ಸದ್ಯದಲ್ಲಿಯೇ ''ಚಿತ್ರವೊಂದನ್ನ ನಿರ್ದೇಶಿಸಲಿದ್ದಾರೆ''. ತಮ್ಮ ಬಹುದಿನಗಳ ಕನಸನ್ನ ನನಸು ಮಾಡಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಗುರುಪ್ರಸಾದ್ ಅವರಿಗೆ ''ವ್ಯಂಗ್ಯ''ದ ಮೂಲಕ ಉತ್ತರವನ್ನ ಕೊಟ್ಟಿರುವ ಶ್ರುತಿ ಹರಿಹರನ್, ಮೀಟೂ ಪ್ರಕರಣ ಹಾಗೂ ಅದರ ಸುತ್ತ ಮುತ್ತ ಅನೇಕ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಶ್ರುತಿ ಹರಿಹರನ್ ಅವರ ಈ ಮಾತುಗಳು ಇನ್ಯಾವ ''ಬ್ರೇಕಿಂಗ್ ನ್ಯೂಸ್'' ಗೆ ಕಾರಣವಾಗುತ್ತೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications











