ಚಿರು-ಸುದೀಪ್ ಜೋಡಿಯ ಸೈರಾ ನೋಡಿ ರಾಜಮೌಳಿ ಹೇಳಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2 ರಂದು ಐದು ಭಾಷೆಯಲ್ಲಿ ವರ್ಲ್ಡ್ ವೈಡ್ ತೆರೆಕಂಡಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಚಿರಂಜೀವಿ ಸಿನಿ ಜೀವನದಲ್ಲಿ ಇಂತಹ ಸಿನಿಮಾ ಮಾಡಿಲ್ಲ, ಮುಂದೆ ಮಾಡಲ್ಲ ಎಂಬ ಮಾತುಗಳು ಚಿತ್ರಜಗತ್ತಿನಲ್ಲಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಅವುಕ ರಾಜು ಪಾತ್ರದಲ್ಲಿ ನಟಿಸಿರುವ ಕನ್ನಡ ನಟ ಸುದೀಪ್ ಅವರ ಅಭಿನಯ ಕಂಡು ಸ್ಯಾಂಡಲ್ ವುಡ್ ಪ್ರೇಕ್ಷಕರು ಖುಷಿಯಾಗಿದ್ದಾರೆ.

ಇದೀಗ, ಸೈರಾ ಚಿತ್ರ ನೋಡಿರುವ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿರಂಜೀವಿ ನಟನೆ ಕಂಡ ಮೂಕವಿಸ್ಮಿತವಾಗಿರುವೆ ಎಂದು ಹೇಳಿರುವ ರಾಜಮೌಳಿ, ಸುದೀಪ್ ನಟನೆಗೂ ಸಂತಸ ವ್ಯಕ್ತಪಡಿಸಿದ್ದಾರೆ.

Ss Rajamouli Appreciate Sye Raa Narasimha Reddy Movie

''ಸೈರಾ ನರಸಿಂಹ ರೆಡ್ಡಿ ಪಾತ್ರದಲ್ಲಿ ಚಿರಂಜೀವಿ ಜೀವಿಸಿದ್ದಾರೆ. ಕಳೆದುಹೋಗಿದ್ದ ಇತಿಹಾಸವನ್ನ ಬೆಂಕಿಯಂತೆ ಮತ್ತೆ ಮರುಕಳಿಸಿದ್ದಾರೆ. ಜಗಪತಿಬಾಬು ಅವರು, ನಮ್ಮ ಕಿಚ್ಚ ಸುದೀಪ್ ಅವರು, ವಿಜಯ್ ಸೇತುಪತಿ, ನಯನತಾರ, ತಮನ್ನಾ ಪಾತ್ರಗಳು ಆ ಕಥೆಯ ಒಳಗೆ ಹೆಣೆದುಕೊಂಡಿದ್ದು, ಬಹಳ ಆಸಕ್ತಿಕರವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.

ಹಾಗೆ, ನಿರ್ದೇಶಕ ಸುರೇಂದರ್ ರೆಡ್ಡಿ ಮತ್ತು ನಿರ್ಮಾಪಕ ರಾಮ್ ಚರಣ್ ತೇಜ ಅವರಿಗೂ ಶುಭಾಶಯ ತಿಳಿಸಿದ್ದಾರೆ.

ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನ ಕಥೆಯ ಚಿತ್ರ ಇದಾಗಿದ್ದು, ಮೆಗಾಸ್ಟಾರ್ ಆ ಪಾತ್ರದಲ್ಲಿ ಅಬ್ಬರಿಸಿದ್ದಾರೆ. 'ಖೈದಿ ನಂ 150' ಚಿತ್ರದ ಬಳಿಕ ಈ ಸಿನಿಮಾ ಮಾಡಿದ್ದು, ಬಹುದೊಡ್ಡ ಯಶಸ್ಸು ಕಾಣುವ ಸೂಚನೆ ನೀಡಿದೆ.

More from Filmibeat

English summary
Bahubali Director Ss rajamouli appreciate Megastar chiranjeevi sye raa narasimha reddy movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X