ಅಂದು ಬಂದಿದ್ದು ಸುಳ್ಳು, ಇಂದು ಹೇಳ್ತಿರೋದು ನಿಜ: ರಾಜಮೌಳಿ ಜೊತೆ ಯಶ್.!
Recommended Video

'ಕೆಜಿಎಫ್' ಟ್ರೈಲರ್ ಬಂದ್ಮೇಲೆ ರಾಕಿಂಗ್ ಸ್ಟಾರ್ ಯಶ್ ಅವರ ಹೆಸರು ದೇಶಾದ್ಯಂತ ಸದ್ದು ಮಾಡುತ್ತಿದೆ. ಬರಿ ಟ್ರೈಲರ್ ನೋಡಿಯೇ ಪರಭಾಷಾ ನಿರ್ದೇಶಕರು, ನಿರ್ಮಾಪಕರು ಯಶ್ ಮೇಲೆ ಒಂದು ಕಣ್ಣಿಟ್ಟಿರುವುದಂತೂ ಸುಳ್ಳಲ್ಲ.
ಈ ಮಧ್ಯೆ ಕೆಜಿಎಫ್ ಟ್ರೈಲರ್ ನೋಡಿದ್ಮೇಲೆ ರಾಜಮೌಳಿ ಫಿದಾ ಆಗಿದ್ದು, ಯಶ್ ಅವರಿಗೆ ತಮ್ಮ ಚಿತ್ರದಲ್ಲಿ ನಟಿಸುವ ಆಫರ್ ಮಾಡಿದ್ದಾರೆ ಎನ್ನಲಾಗಿತ್ತು. ಆರ್.ಆರ್.ಆರ್ (RRR) ರಾಮ್ ಚರಣ್ ತೇಜ, ಎನ್.ಟಿ.ಆರ್ ಹಾಗೂ ರಾಜಮೌಳಿ ಜೋಡಿಯಲ್ಲಿ ಬರ್ತಿರುವ ಸಿನಿಮಾದಲ್ಲಿ ಯಶ್ ವಿಲನ್ ಆಗಿ ನಟಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಯ್ತು.
ಆದ್ರೆ, ಈ ಸುದ್ದಿಯನ್ನ ಸ್ವತಃ ಯಶ್ ತಳ್ಳಿ ಹಾಕಿದ್ರು. ಇಂತಹ ಬೆಳವಣಿಗೆ ಆಗಿಲ್ಲ, ರಾಜಮೌಳಿಯನ್ನ ನಾನು ಭೇಟಿನೂ ಮಾಡಿಲ್ಲ, ಅವರ ಸಿನಿಮಾದಲ್ಲಿ ಆಕ್ಟ್ ಮಾಡಿ ಎಂಬ ಆಫರ್ ಕೂಡ ಬಂದಿಲ್ಲ ಎಂದಿದ್ದರು. ಆದ್ರೀಗ, ರಾಜಮೌಳಿ ಜೊತೆ ಯಶ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ಬಹುಶಃ ಇಲ್ಲಿಂದ ಏನಾದರೂ ಬೆಳವಣಿಗೆ ಆದ್ರೂ ಅಚ್ಚರಿಯಿಲ್ಲ. ಎಲ್ಲಿ, ಯಾವಾಗ.? ಮುಂದೆ ಓದಿ...

ಕೆಜಿಎಫ್ ಕಾರ್ಯಕ್ರಮಕ್ಕೆ ರಾಜಮೌಳಿ ಅತಿಥಿ
'ಕೆಜಿಎಫ್' ಸಿನಿಮಾದ ಎರಡನೇ ಟ್ರೈಲರ್ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಈ ಮಧ್ಯೆ ತೆಲುಗಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 9 ರಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ 'ಬಾಹುಬಲಿ' ಖ್ಯಾತಿಯ ರಾಜಮೌಳಿ ಮುಖ್ಯ ಅತಿಥಿಯಾಗಿ ಬರಲಿದ್ದಾರೆ, ಇದನ್ನ ಸ್ವತಃ ನಿರ್ಮಾಪಕರೇ ಖಚಿತಪಡಿಸಿದ್ದಾರೆ.

ರಾಜಮೌಳಿ ಏನು ಹೇಳಬಹುದು
ಇದುವರೆಗೂ ಕೆಜಿಎಫ್ ಚಿತ್ರದ ಬಗ್ಗೆ ರಾಜಮೌಳಿ ಮಾತನಾಡಿಲ್ಲ. ಸದ್ಯ, ಬಾಹುಬಲಿ ಚಿತ್ರದಂತೆ ಹವಾ ಮಾಡ್ತಿರುವ ಈ ಸಿನಿಮಾ ಮೇಕಿಂಗ್ ವಿಷ್ಯಕ್ಕೆ ಗಮನ ಸೆಳೆಯುತ್ತಿದೆ. ಹೀಗಾಗಿ, ಸ್ಟಾರ್ ಡೈರೆಕ್ಟರ್ ರಾಜಮೌಳಿ, ಕೆಜಿಎಫ್ ಚಿತ್ರಕ್ಕೆ ಎಷ್ಟು ಮಾರ್ಕ್ಸ್ ಕೊಡ್ತಾರೆ, ಏನ್ ಹೇಳ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಯಶ್-ರಾಜಮೌಳಿ ನಡುವೆ ಮಾತುಕತೆ.!
ಯಶ್ ಅವರ ಲುಕ್, ಅವರ ಡೆಡಿಕೇಷನ್ ಬಗ್ಗೆ ರಾಜಮೌಳಿ ಗಮನಿಸಿರ್ತಾರೆ. ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಇಬ್ಬರು ಮುಖಾಮುಖಿ ಆಗಲಿದ್ದು, ಈ ವೇಳೆ ಏನಾದರೂ ಹೊಸ ಸಿನಿಮಾ ಮಾಡುವ ಬಗ್ಗೆ ಅಥವಾ ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆಯಾಗಬಹುದು ಎಂಬ ಕುತೂಹಲವೂ ಇದೆ. ಬಟ್, ಕಾದುನೋಡಬೇಕು.

ಟಾಲಿವುಡ್ ನಲ್ಲಿ ಬಿಗ್ ರಿಲೀಸ್
ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗಿನಲ್ಲಿ ರಿಲೀಸ್ ಆಗುತ್ತಿರುವ ಕೆಜಿಎಫ್, ಟಾಲಿವುಡ್ ನಲ್ಲಿ ಭಾರಿ ಕ್ರೇಜ್ ಹುಟ್ಟುಹಾಕಿದೆ. ಕೆಜಿಎಫ್ ತೆಲುಗು ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿತ್ತು. ಈಗ ಎರಡನೇ ಟ್ರೈಲರ್ ಕೂಡ ಕಮಾಲ್ ಮಾಡ್ತಿದೆ. ಇನ್ನು ಬಿಡುಗಡೆಯೂ ಕೂಡ ಅಷ್ಟೇ ದೊಡ್ಡದಾಗಿ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.


Click it and Unblock the Notifications











