'ಬಾಹುಬಲಿ 2' ಬಿಡುಗಡೆ ದಿನಾಂಕ ಯಾವಾಗ ಗೊತ್ತಾಯ್ತ
ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ಭಾಗ 2' ಬಿಡುಗಡೆ ದಿನಾಂಕ ಫಿಕ್ಸ್ ಮಾಡಲಾಗಿದ್ದು, ಈಗಾಗಲೇ ಕೌಂಟ್ ಡೌನ್ ಆರಂಭವಾಗಿದೆ. ಕಳೆದ ವರ್ಷ ತೆರೆ ಕಂಡ 'ಬಾಹುಬಲಿ' ಸಿನಿಮಾ ಕೋಟಿಗಟ್ಟಲೇ ಸಂಪಾದನೆ ಮಾಡಿ ಬಾಕ್ಸಾಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿತ್ತು.[ಶಿವಣ್ಣನ ಮಗಳ ರಿಸೆಪ್ಷನ್ ನಲ್ಲಿ 'ಬಾಹುಬಲಿ' ರಾಜಮೌಳಿ]
ತೆಲುಗು ನಟ ಪ್ರಭಾಸ್, ನಟ ರಾಣಾ ದಗ್ಗುಬಾಟಿ, ತಮನ್ನಾ, ಅನುಷ್ಕಾ ಶೆಟ್ಟಿ, ರಮ್ಯಕೃಷ್ಣ, ಮುಂತಾದವರು ಕಾಣಿಸಿಕೊಂಡಿರುವ 'ಬಾಹುಬಲಿ 2' ಸಿನಿಮಾ ಮುಂದಿನ ವರ್ಷ 2017 ಏಪ್ರೀಲ್ 14 ರಂದು ತೆರೆ ಕಾಣುತ್ತಿದೆ.
ಬಾಹುಬಲಿ ಸಿನಿಮಾ ಇಷ್ಟಪಟ್ಟ ಅಭಿಮಾನಿಗಳು ಮುಂದುವರಿದ ಭಾಗ ನೋಡಲು ಬಹಳ ಕಾತರರಾಗಿದ್ದರು. ಇದೀಗ 'ಬಾಹುಬಲಿ ಭಾಗ 2' ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದ್ದಾರೆ. ಚಿತ್ರ ಬಿಡುಗಡೆ ದಿನಾಂಕವನ್ನು ನಟ ಪ್ರಭಾಸ್ ಅವರು ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.[ಬಾಹುಬಲಿಯನ್ನು ಕಟ್ಟಪ್ಪ ಕೊಂದ ರಹಸ್ಯ ಬಹಿರಂಗ]
ಇನ್ನು ಈ ವರ್ಷದ ಕೊನೆಯ ವಾರದಲ್ಲಿ ಬಿಗ್ ಬಜೆಟ್ ನ ಸಿನಿಮಾ 'ಬಾಹುಬಲಿ 2' ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಂದಹಾಗೆ 'ಬಾಹುಬಲಿ ಭಾಗ 2'ರಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಎಂಬುದನ್ನು ಹೇಳಲಾಗಿದೆ.[ಬಾಹುಬಲಿ ವೀಕ್ಷಿಸಲು ನರೇಂದ್ರ ಮೋದಿಗೆ ಪ್ರಭಾಸ್ ಆಹ್ವಾನ]
'ಮಗಧೀರ' 'ಈಗ' ಮುಂತಾದ ಚಿತ್ರಗಳ ಖ್ಯಾತಿಯ ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಸಿನಿಮಾ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಂಡು ಅದ್ಭುತ ಯಶಸ್ಸು ಕಂಡಂತೆ ಭಾಗ ಎರಡು ಕೂಡ ಯಶಸ್ಸು ಕಾಣಬಹುದೇ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications















