RRR | ಉಕ್ರೇನ್‌ನಲ್ಲಿ RRR ಶೂಟಿಂಗ್, ಅಲ್ಲಿನ ಭಯಾನಕತೆಯನ್ನು ಬಿಚ್ಚಿಟ್ಟ ರಾಜಮೌಳಿ!
ಒಂದು ಸಿನಿಮಾ ಶೂಟಿಂಗ್‌ಗಾಗಿ ಚಿತ್ರತಂಡ ಸಾಕಷ್ಟು ಪರಿಶ್ರಮ ಪಡಬೇಕು. ಅಷ್ಟೇ ಅಲ್ಲದೇ ಸಿನಿಮಾ ಶೂಟಿಂಗ್‌ಗೆ ಉತ್ತಮವಾದ ಲೊಕೇಶನ್ ಕೂಡ ಮುಖ್ಯ. ಒಂದು ಸಿನಿಮಾ ಯಾವತ್ತೂ ಒಂದೇ ಲೊಕೇಶನ್‌ನಲ್ಲಿ ಶೂಟಿಂಗ್ ಮಾಡೋದು ಕಮ್ಮಿ. ಬದಲಾಗಿ ಬೇರೆ ಬೇರೆ ಲೊಕೇಶನ್‌ಗಳಲ್ಲಿ ಬ್ಯೂಟಿಫುಲ್ ಆಗಿ ಸಿನಿಮಾ ತಯಾರಾಗುತ್ತೆ.
Recommended Video

ಅದರಲ್ಲೂ ಬಹು ನಿರೀಕ್ಷೆಯ ಸಿನಿಮಾ, ಹೈ ಬಡ್ಜೆಟ್ ಸಿನಿಮಾ ಅಂದ್ರೆ ಕೇಳಬೇಕಾ? ಲೊಕೇಶನ್ ವಿಚಾರದಲ್ಲಿ ನೋ ಕಾಂಪ್ರಮೈಸ್ ಅಂತಾರೆ. ಸದ್ಯ 'ಆರ್‌ಆರ್‌ಆರ್' ಚಿತ್ರತಂಡ ತಮ್ಮ ಸಿನಿಮಾ ಶೂಟಿಂಗ್ ಬಗ್ಗೆ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.
ಈ ಸಂದರ್ಭ 'ಆರ್‌ಆರ್‌ಆರ್' ಚಿತ್ರದ ಒಂದು ಭಾಗದ ಶೂಟಿಂಗ್ ಅನ್ನು ಉಕ್ರೇನ್‌ನಲ್ಲಿ ಸೆರೆಹಿಡಿದಿರುವ ಬಗ್ಗೆ ನಿರ್ದೇಶಕ ರಾಜಮೌಳಿ ತಿಳಿಸಿದ್ದಾರೆ. ಹೌದು ಈ ಬಗ್ಗೆ ಸ್ವತಃ ರಾಜಮೌಳಿ, ಜೂ ಎನ್‌ಟಿಆರ್, ರಾಮ್ ಚರಣ್ ಮಾತನಾಡಿದ್ದು ಸಾಕಷ್ಟು ಇಂಟ್ರಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ.

ಉಕ್ರೇನ್ ಅನುಭವ ಹಂಚಿಕೊಂಡ ರಾಜಮೌಳಿ
ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್' ಸಿನಿಮಾ ಮಾರ್ಚ್ 25 ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಒಂದು ಭಾಗವನ್ನು ಚಿತ್ರತಂಡ ಉಕ್ರೇನ್‌ನಲ್ಲಿ ಚಿತ್ರೀಕರಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅಚ್ಚರಿ ಎಂದರೆ ಉಕ್ರೇನ್‌ನಲ್ಲಿ ಯುದ್ಧ ಆರಂಭಕ್ಕೂ ಕೆಲವೇ ದಿನಗಳ ಹಿಂದೆಯಷ್ಟೆ 'ಆರ್‌ಆರ್‌ಆರ್' ಪ್ಯಾಕ್ ಅಪ್ ಮಾಡಿಕೊಂಡು ಹೈದರಾಬಾದ್‌ಗೆ ಮರಳಿತ್ತಂತೆ. ಈ ಇಂಟ್ರೆಸ್ಟಿಂಗ್ ವಿಚಾರವನ್ನು ಸ್ವತಃ ರಾಜಮೌಳಿನೇ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ತಂಡಕ್ಕೆ ಉಕ್ರೇನ್‌ನಲ್ಲಿ ಯಾವುದೇ ಸಮಸ್ಯೆ ಆಗಿಲ್ಲಾ ಎಂದು ತಿಳಿಸಿದ್ದಾರೆ.

ಉಕ್ರೇನ್ ಜನರೊಂದಿಗೆ ಈಗಲೂ ಸಂಪರ್ಕದಲ್ಲಿದ್ದಾರೆ ರಾಜಮೌಳಿ
ಯುದ್ಧ ಹಾನಿಗೊಳಗಾಗಿರುವ ಉಕ್ರೇನ್‌ನಲ್ಲಿ 'ಆರ್‌ಆರ್‌ಆರ್' ಚಿತ್ರೀಕರಿಸಲಾಗಿದೆ. ರಾಜಮೌಳಿ, ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಯುಕ್ರೇನ್ ತಂಡದೊಂದಿಗೆ ವಾರ್ ಆರಂಭವಾದ ನಂತರವೂ ಸಂಪರ್ಕದಲ್ಲಿದ್ದಾರಂತೆ. ಹೈದರಾಬಾದ್‌ನಲ್ಲಿ 'ಆರ್‌ಆರ್‌ಆರ್' ಚಿತ್ರದ ಪ್ರಚಾರ ಸಂದರ್ಭ ಮಾಧ್ಯಮ ಸಂವಾದದಲ್ಲಿ ಮಾತನಾಡಿದ 'ಆರ್‌ಆರ್‌ಆರ್' ತಂಡ ಚಿತ್ರೀಕರಣದ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ನಾವು ಚಿತ್ರೀಕರಿಸಿವ ಸಂದರ್ಭದಲ್ಲಿ ಯುದ್ಧದ ಛಾಯೆ ಇತ್ತು. ಆ ಒಂದು ಆತಂಕದಿಂದಲೇ ನಮ್ಮ ತಂಡವನ್ನು ನಾವು ರಕ್ಷಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸೇಫ್ ಆಗಿ ಬಂದಿದ್ದಕ್ಕೆ ಮನೆಯವರು ನಿಟ್ಟುಸಿರು ಬಿಟ್ಟಿದ್ರು
ಈ ಬಗ್ಗೆ ಮಾತನಾಡಿದ ರಾಜಮೌಳಿ "ನಾವು ಭಾರತಕ್ಕೆ ಹಿಂದಿರುಗಿದಾಗ, ನಾವು ಅಲ್ಲಿ ಹೇಗೆ ಚಿತ್ರೀಕರಣ ಮಾಡಿದ್ದೇವೆ ಎಂದು ನನ್ನ ಸ್ನೇಹಿತರು ಕೇಳುತ್ತಲೇ ಇದ್ದರು. ಆಗ ನಮಗೆ ಯಾವುದೇ ತೊಂದರೆ ಆಗಿರಲಿಲ್ಲ" ಎನ್ನುತ್ತಾರೆ ರಾಜಮೌಳಿ. ನಮ್ಮ ತಂಡ ಇನ್ನು ಕೂಡ ಉಕ್ರೇನ್‌ನ ಚಾಲಕರು ಮತ್ತು ಇತರ ಘಟಕದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಕರೆ ಮಾಡಿ ಅವರ ಸುರಕ್ಷತೆ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ. "ಅವರೊಂದಿಗೆ ಮಾತನಾಡುವಾಗ, ಅನುಭವಗಳನ್ನು ಕೇಳಿದಾಗ ಹೃದಯ ವಿದ್ರಾವಕವಾಗಿವೆ. ಆದಷ್ಟು ಬೇಗ ಆ ಸುಂದರ ಜಾಗ ಸಹಜ ಸ್ಥಿತಿಗೆ ಮರಳುವ ವಿಶ್ವಾಸ ಇದೆ" ಎಂದಿದ್ದಾರೆ ರಾಜಮೌಳಿ.

'ನಾಟು ನಾಟು' ಹಾಡಿನಲ್ಲಿದ್ರು ಉಕ್ರೇನ್ ಡ್ಯಾನ್ಸರ್ಸ್
'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡು ಈಗಾಗಲೇ ಸಾಕಷ್ಟು ವೈರಲ್ ಆಗಿದೆ. ಈ ಹಾಡಿನಲ್ಲೂ ಉಕ್ರೇನ್‌ನ ಡ್ಯಾನ್ಸ್‌ರ್ಸ್ ಕೂಡ ಭಾಗಿ ಆಗಿದ್ದಾರಂತೆ. ಈ ಬಗ್ಗೆ ಮಾತನಾಡಿದ ಜೂನಿಯರ್ ಎನ್‌ಟಿಆರ್ " 'ನಾಟು ನಾಟು' ಹಾಡಿಗೆ ಉಕ್ರೇನ್ ಡ್ಯಾನ್ಸರ್‌ಗಳು ಹೆಜ್ಜೆಹಾಕಿದ್ರು. ಅವರ ಡ್ಯಾನ್ಸ್ ಸ್ಕಿಲ್ ನೋಡಿ ನಾನು ವಿಸ್ಮಯಗೊಂಡಿದ್ದೆ. ಅವರಿಂದ ನಾನು ಡ್ಯಾನ್ಸ್ ಕಲಿತ್ತಿದ್ದೇನೆ. ಡ್ಯಾನ್ಸ್ ತಂಡದವರು ಅತ್ಯಂತ ಸ್ನೇಹ ಪ್ರೀಯರು. ಅವರಲ್ಲಿ ವೃತ್ತಿಪರತೆ ಹೆಚ್ಚಾಗಿ ಇತ್ತು" ಎಂದಿದ್ದಾರೆ.

ಅವರ ಆಹಾರ ಪದ್ದತಿಗೆ ಮರುಳಾಗಿದ್ದ ರಾಮ್ ಚರಣ್
ಇನ್ನು ಉಕ್ರೇನ್ ಶೂಟಿಂಗ್ ಬಗ್ಗೆ ಮಾತನಾಡಿದ ರಾಮ್ ಚರಣ್ " ನಾನು ಅವರ ಸಂಸ್ಕೃತಿ, ಮತ್ತು ಆಹಾರ ಪದ್ಧತಿಗೆ ಮನಸೋತಿದ್ದೆ. ಉಕ್ರೇನ್ ಅತ್ಯಂತ ಸುಂದರ ಶೂಟಿಂಗ್ ಸ್ಥಳಗಳಲ್ಲಿ ಒಂದು. ಉಕ್ರೇನ್‌ನಲ್ಲಿ ತಾಂತ್ರಿಕವಾಗಿ ಕಲಿಯುವುದು ತುಂಬಾ ಇದೆ. ಅತ್ಯುತ್ತಮ ದೇಶಗಳಲ್ಲಿ ಉಕ್ರೇನ್ ಕೂಡ ಒಂದು. ಯುದ್ಧ ಪ್ರಾರಂಭವಾದಾಗ ನಾವು ಅಲ್ಲಿನ ಭದ್ರತೆ ಬಗ್ಗೆ ವಿಚಾರಿಸಿದ್ದೇವೆ. ನಾವು ಈಗ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಬೇಕು ಅಷ್ಟೇ. ಬೇರೆನು ಮಾಡಲು ಸಾಧ್ಯ?" ಎಂದಿದ್ದಾರೆ ರಾಮ್ ಚರಣ್.


Click it and Unblock the Notifications