ಡ್ರೈವರ್ ಮಗನ ಸಾಧನೆ ಕಂಡು ರಾಜಮೌಳಿ ಮುತ್ತಿನಂಥ ಮಾತು

Recommended Video

KGF Kannada Movie : ಡ್ರೈವರ್ ಮಗನ ಸಾಧನೆ ಕಂಡು ರಾಜಮೌಳಿ ಮುತ್ತಿನಂಥ ಮಾತು | FILMIBEAT KANNADA

'ಕೆಜಿಎಫ್' ಸಿನಿಮಾದ ಬಗ್ಗೆ ಕನ್ನಡಗರು ಮಾತನಾಡಿದ್ದು ಸಾಕು. ಈಗ ಈ ಸಿನಿಮಾದ ಬಗ್ಗೆ ಬೇರೆ ಬೇರೆ ಚಿತ್ರರಂಗದ ದಿಗ್ಗಜರು ಮಾತನಾಡುವ ಸಮಯ ಬಂದಿದೆ.

'ಬಾಹುಬಲಿ' ಸಿನಿಮಾದ ಮೂಲಕ ಇಡೀ ಭಾರತವನ್ನು ಬೆರಗುಗೊಳಿಸಿದ್ದ .ನಿರ್ದೇಶಕ ರಾಜಮೌಳಿ ಈಗ 'ಕೆಜಿಎಫ್' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಿನ್ನೆ ಹೈದರಾಬಾದ್ ನಲ್ಲಿ ನಡೆದ 'ಕೆಜಿಎಫ್' ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಈ ಮಹಾ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರು ಸೇರಿದಂತೆ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ, ಜೊತೆಗೆ ಯಾವುದೇ ದೊಡ್ಡ ಬ್ಯಾಗ್ರೌಂಡ್ ಇಲ್ಲದೆ ಬಂದ ಯಶ್ ಅವರ ಶ್ರಮವನ್ನು ನೆನೆದಿದ್ದಾರೆ.

ಅಂದಹಾಗೆ, ಇಡೀ ಕಾರ್ಯಕ್ರಮದಲ್ಲಿ ರಾಜಮೌಳಿ ಅವರ ಮಾತುಗಳ ಹೈಲೆಟ್ ಆಗಿದ್ದು, ಅವರ ಮುತ್ತಿನಂಥ ಮಾತುಗಳು ಮುಂದಿವೆ ಓದಿ..

ನಾಲ್ಕೈದು ವರ್ಷಗಳ ಹಿಂದೆ

ನಾಲ್ಕೈದು ವರ್ಷಗಳ ಹಿಂದೆ

''ನಾಲ್ಕೈದು ವರ್ಷಗಳ ಹಿಂದೆ ಸಾಯಿ ಅವರ ಜೊತೆಗೆ ಸುಮ್ಮನೆ ಮಾತನಾಡುವಾಗ ಕರ್ನಾಟಕದಲ್ಲಿ ಈಗ ಏನ್ ಆಗುತ್ತಿದೆ. ಅಲ್ಲಿ ಈಗ ಯಾರು ಟಾಪ್ ಹೀರೋ ಅಂತ ಕೇಳಿದೆ. ಅದಕ್ಕೆ ಅವರು ಟಾಪ್ ಸ್ಟಾರ್ ಗಳನ್ನು ಬಿಟ್ಟು, ಒಬ್ಬ ಹೊಸ ಹುಡುಗ ಬಂದಿದ್ದಾನೆ. ಅವನು ಎಲ್ಲ ಸ್ಟಾರ್ ಗಳನ್ನು ಮೀರಿಸುತ್ತಿದ್ದಾನೆ. ಹಿಟ್ ಮೇಲೆ ಹಿಟ್ ನೀಡುತ್ತಿದ್ದಾನೆ. ಅವನ ಹೆಸರು ಯಶ್ ಎಂದು ಹೇಳಿದರು.'' - ರಾಜಮೌಳಿ, ನಿರ್ದೇಶಕ.

ಒಬ್ಬ ಬಸ್ ಡ್ರೈವರ್ ಮಗ

ಒಬ್ಬ ಬಸ್ ಡ್ರೈವರ್ ಮಗ

''ಯಶ್ ಎನ್ನುವ ಹೆಸರು ಕೇಳಿದಾಗ, ಯಾರು ಈ ಯಶ್, ನಾನು ಈ ಹೆಸರನ್ನು ಕೇಳಿಲ್ಲವಲ್ಲ, ಅವರು ಯಾವ ಬ್ಯಾಗ್ರಾಂಡ್ ನಿಂದ ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದೆ. ಆಗ ಅವರು ಯಶ್ ಒಬ್ಬ ಬಸ್ ಡ್ರೈವರ್ ಮಗ ಎಂದು ಹೇಳಿದರು. ಇನ್ನೊಂದು ವಿಷಯ ಹೇಳಿ ನನಗೆ ನಿಜವಾಗಿಯೂ ಆನಂದ ಆಯ್ತು. ಅದೇನೂ ಅಂದರೆ, ತನ್ನ ಮಗ ಸೂಪರ್ ಸ್ಟಾರ್ ಆದರೂ ಕೂಡ ಅವರ ತಂದೆ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರಂತೆ.''- ರಾಜಮೌಳಿ, ನಿರ್ದೇಶಕ.

ಯಶ್ ಗಿಂತ ಅವರ ತಂದೆ ದೊಡ್ಡ ಸ್ಟಾರ್

ಯಶ್ ಗಿಂತ ಅವರ ತಂದೆ ದೊಡ್ಡ ಸ್ಟಾರ್

''ಈಗ ನಾನು ಹೀರೋ ಆಗಿದ್ದೇನೆ. ಹಣ ಹೆಸರು ಇದೆ, ನೀನು ಈಗಲೂ ಏಕೆ ಕಷ್ಟ ಪಡಬೇಕು ಎಂದು ಯಶ್ ಅವರ ತಂದೆಯನ್ನ ಕೇಳಿದರೆ ಅವರ ತಂದೆ, ನಾನು ಬಸ್ ಡ್ರೈವರ್ ಆದ ಮೇಲೆ ನೀನು ಸೂಪರ್ ಸ್ಟಾರ್ ಆಗಿದ್ದು. ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡುತ್ತೇನೆ ಎಂದರಂತೆ. ಆ ಸಮಯಕ್ಕೆ ನನಗೆ ಅನಿಸಿದ್ದು, ಯಶ್ ಗಿಂತ ಅವರ ತಂದೆ ದೊಡ್ಡ ಸ್ಟಾರ್ ಅಂತ. ಹ್ಯಾಟ್ಸ್ ಆಫ್ ಟು ಯುವರ್ ಫಾದರ್.'' - ರಾಜಮೌಳಿ, ನಿರ್ದೇಶಕ.

'ಕೆಜಿಎಫ್' ವಿಡಿಯೋ ನೋಡಿ ದಿಗ್ಬ್ರಮೆ ಆಯ್ತು

'ಕೆಜಿಎಫ್' ವಿಡಿಯೋ ನೋಡಿ ದಿಗ್ಬ್ರಮೆ ಆಯ್ತು

''ಒಮ್ಮೆ ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಇದ್ದಾಗ ಯಶ್ ಕೂಡ ಅದೇ ಹೋಟೆಲ್ ನಲ್ಲಿ ಇದ್ದರು. ಆಗ ನನ್ನನ್ನು ಭೇಟಿ ಮಾಡಿ ನನಗೆ 'ಕೆಜಿಎಫ್' ಸಿನಿಮಾದ ವಿಡಿಯೋವನ್ನು ತೋರಿಸಿದರು. ನಾನು ಮೊದಲ ಬಾರಿಗೆ ನೋಡಿದಾಗ ದಿಗ್ಬ್ರಮೆ ಆಯ್ತು. ಅವರ ಒರಿಜಿನಲಿಟಿ ನೋಡಿ ಅದ್ಬುತ ಅನಿಸಿತು. ಮೂರು ನಿಮಿಷದ ವಿಡಿಯೋ ನೋಡಿ ತುಂಬ ಖುಷಿ ಆಯ್ತು. - ರಾಜಮೌಳಿ, ನಿರ್ದೇಶಕ.

ಬಜೆಟ್ ಇದ್ರೆ ಇಂಡಿಯಾದ ಸಿನಿಮಾ ಆಗೋದಿಲ್ಲ

ಬಜೆಟ್ ಇದ್ರೆ ಇಂಡಿಯಾದ ಸಿನಿಮಾ ಆಗೋದಿಲ್ಲ

''ದೊಡ್ಡ ಬಜೆಟ್ ಇರುವ ಪ್ರತಿ ಸಿನಿಮಾ ಇಡೀ ಇಂಡಿಯಾದ ಸಿನಿಮಾ ಆಗುವುದಿಲ್ಲ. ಎಲ್ಲರಿಗೂ ತಲುಪುವ ಕಥೆ ಹಾಗೂ ಆ ಮಟ್ಟಿಗೆ ತಂಡದ ಶ್ರಮ ಇದ್ದರೆ ಮಾತ್ರ ಅದು ಇಡೀ ಇಂಡಿಯಾದ ಸಿನಿಮಾ ಆಗುತ್ತದೆ. ಮೊದಲ ಬಾರಿಗೆ 'ಕೆಜಿಎಫ್' ದೃಶ್ಯ ನೋಡಿದಾಗಲೇ ನನಗೆ ಇದು ಇಡೀ ಇಂಡಿಯಾದ ಸಿನಿಮಾ ಆಗುತ್ತದೆ ಎನಿಸಿತು.'' - ರಾಜಮೌಳಿ, ನಿರ್ದೇಶಕ.

ಅದ್ಬುತ ದೃಶ್ಯಗಳು ದುಡ್ಡು ಹಾಗೂ ಹೀರೋ ಡೇಟ್ ನಿಂದ ಬರುವುದಿಲ್ಲ

ಅದ್ಬುತ ದೃಶ್ಯಗಳು ದುಡ್ಡು ಹಾಗೂ ಹೀರೋ ಡೇಟ್ ನಿಂದ ಬರುವುದಿಲ್ಲ

''ಆ ದೃಶ್ಯಗಳನ್ನು ನೋಡಿದ ತಕ್ಷಣ ಬಾಂಬೆಯಲ್ಲಿ ಅನಿಲ್ ಗೆ ಹಾಗೂ ಸಾಯಿ ಮತ್ತು ಶೋಬು ಪೋನ್ ಮಾಡಿ ಇದನ್ನು ಏನಾದರೂ ಮಾಡಬಹುದು ಎಂದೇ. ಇಂದು 'ಕೆಜಿಎಫ್' ಬರೀ ಕನ್ನಡ ಸಿನಿಮಾ ಆಗದೆ, ಇಡೀ ಇಂಡಿಯಾದ ಸಿನಿಮಾ ಆಗಿರುವುದು ತುಂಬ ಸಂತಸ ನೀಡಿದೆ. ಇಂತಹ ಅದ್ಬುತ ದೃಶ್ಯಗಳು ದುಡ್ಡು ಹಾಗೂ ಹೀರೋ ಡೇಟ್ ನಿಂದ ಬರುವುದಿಲ್ಲ. ಆ ತಂಡದ ಪ್ರತಿಯೊಬ್ಬರು ಅದಕ್ಕಾಗಿ ಕೆಲಸ ಮಾಡಬೇಕು.- ರಾಜಮೌಳಿ, ನಿರ್ದೇಶಕ.

ಇಂಡಿಯಾದಲ್ಲಿ ದೊಡ್ಡ ಹಿಟ್ ಆಗಲಿ

ಇಂಡಿಯಾದಲ್ಲಿ ದೊಡ್ಡ ಹಿಟ್ ಆಗಲಿ

''ತೆಲುಗು ನಾಡಿನಲ್ಲಿ ಸಿನಿಮಾ ಚೆನ್ನಾಗಿದ್ದರೆ, ಅದು ಯಾವ ಭಾಷೆಯ ಸಿನಿಮಾ ಆಗಿರಲಿ, ಯಾರೇ ಮಾಡಿರಲಿ ಅದನ್ನು ಗಮನಿಸದೆ ನೋಡುತ್ತಾರೆ. 'ಕೆಜಿಎಫ್' ಸಿನಿಮಾವನ್ನು ಕೂಡ ಅದೇ ರೀತಿ ನೋಡುತ್ತೀರಿ ಎಂಬ ನಂಬಿಕೆ ಇದೆ. ಈ ಸಿನಿಮಾ ಇಡೀ ಇಂಡಿಯಾದಲ್ಲಿ ದೊಡ್ಡ ಹಿಟ್ ಆಗಲಿ. - ರಾಜಮೌಳಿ, ನಿರ್ದೇಶಕ.

More from Filmibeat

English summary
Director Ss Rajamouli spoke about KGF kannada movie on Pre release event held in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X