ಕಿಚ್ಚ ಸುದೀಪ್ ನಟನೆಯನ್ನು ಅಮೇರಿಕದಲ್ಲಿ ಹಾಡಿ ಹೊಗಳಿದ ರಾಜಮೌಳಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ತಮ್ಮ ಅಮೋಘ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ತಲುಪಿರುವ ಮಹಾನ್ ಕಲಾವಿದ. ವಿಲನ್-ಹೀರೋ ಯಾವ ಪಾತ್ರಕಕ್ಕಾದರೂ ಸುದೀಪ್ ತಮಗೆ ತಾವೇ ಸರಿಸಾಟಿ ಎಂಬಂತೆ ನಟಿಸುತ್ತಾರೆ. ಎಂತಹ ಪಾತ್ರವನ್ನಾದರೂ ತೆರೆ ಮೇಲೆ ಅದ್ಭುತವಾಗಿ ತರುವ ಚಾಕಚಕ್ಯತೆ ಕಿಚ್ಚ ಸುದೀಪ್ ಅವರಿಗಿದೆ.
ಕೇವಲ ನಟನೆಯಲ್ಲ, ನಿರೂಪಣೆಯಲ್ಲೂ ಸುದೀಪ್ ಎತ್ತಿದ ಕೈ. ಕನ್ನಡ ಬಿಗ್ ಬಾಸ್‌ನ ನಿರೂಪಕರಾಗಿರುವ ಅವರು ಕಳೆದ ೮ ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ ಬಿಗ್ ಬಸ್ ಸೀಸನ್ 9 ಅನ್ನು ನಡೆಸಿಕೊಡುತ್ತಿದ್ದಾರೆ. ಸುದೀಪ್ ಅವರಿಗಾಗಿಯೇ ಪ್ರೇಕ್ಷಕರು ಬಿಗ್ ಬಾಸ್ ವಾರಂತ್ಯಕ್ಕಾಗಿ ಕಾಯುತ್ತಿರುತ್ತಾರೆ.
ಸುದೀಪ್ ಎಂತಹ ನಟ ಎನ್ನುವುದು ಕನ್ನಡ ಚಿತ್ರರಂಗ ಮಾತ್ರವಲ್ಲ ಇತರ ಭಾಷೆಯ ನಟರು, ನಿರ್ದೇಶಕರಿಗೂ ಗೊತ್ತು. ಯಾಕೆಂದರೆ ಸುದೀಪ್ ಇತರ ಭಾಷೆಗಳನ್ನೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಿಚ್ಚ ಅಭಿನಯದ ಬಗ್ಗೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಮಾತನಾಡಿದ್ದು, ಕನ್ನಡ ಚಿತ್ರರಂಗದ ನಟನನ್ನು ವಿದೇಶದಲ್ಲಿ ಹಾಡಿ ಹೊಗಳಿದ್ದಾರೆ.

ಕಿಚ್ಚ ಸುದೀಪ್ ಹಾಡಿದ ಹೊಗಳಿದ ರಾಜಮೌಳಿ
ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ಭಾರತದಾದ್ಯಂತ ಉತ್ತಮ ಪ್ರದರ್ಶನ ಕಂಡು ಇದೀಗ ವಿದೇಶದಲ್ಲಿ ಪ್ರದರ್ಶನ ಕಾಣುತ್ತಿದೆ. ಆರ್‌ಆರ್ಆರ್ ಚಿತ್ರ ಇತ್ತೀಚಿಗೆ ಅಮೇರಿಕಾದಲ್ಲಿ ಪ್ರದರ್ಶನಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜಮೌಳಿ ಸಹ ಅಮೇರಿಕಾ ಪ್ರವಾಸದಲ್ಲಿದ್ದು, ಅಲ್ಲಿನ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಮೇರಿಕಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ತಮ್ಮ ಚಿತ್ರಗಳ ಬಗ್ಗೆ ಮಾತನಾಡಿದ ರಾಜಮೌಳಿ ಈ ವೇಳೆ ನಟ ಕಿಚ್ಚ ಸುದೀಪ್ ಅವರನ್ನು ಹೊಗಳಿದ್ದಾರೆ.

ಈಗ ಚಿತ್ರದ ಬಗ್ಗೆ ರಾಜಮೌಳಿ ಮಾತು
ಕಾರ್ಯಕ್ರಮದ ಸಂದರ್ಶಕ ಈಗ ಚಿತ್ರದ ಬಗ್ಗೆ ರಾಜಮೌಳಿ ಅವರನ್ನು ಪ್ರಶ್ನಿಸಿದ್ದು, ಚಿತ್ರದ ಚಿತ್ರೀಕರಣದ ಅನುಭವದ ಬಗ್ಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ರಾಜಮೌಳಿ, ಸಾಮಾನ್ಯವಾಗಿ ಚಿತ್ರೀಕರಣದ ವೇಳೆ ನಟರು ಎದುರುಗಡೆ ಯಾರೂ ಇಲ್ಲದೆ ಇದ್ದರೂ, ಇದ್ದಾರೆ ಎಂದು ಭಾವಿಸಿ ಅಭಿನಯಿಸುತ್ತಾರೆ. ನಮ್ಮ ಜೊತೆ ಬೇರೊಬ್ಬ ವ್ಯಕ್ತಿ ನಟಿಸುತ್ತಿದ್ದಾನೆ ಎಂದುಕೊಂಡು ನಟನೆ ಮಾಡುತ್ತಿರುತ್ತೇವೆ. ಬಹುಶಃ ಎಲ್ಲ ಕಲಾವಿದರು ಹಾಗೇ ಮಾಡುತ್ತಾರೆ ಎನ್ನುವುದು ನನ್ನ ಅನಿಸಿಕೆ ಎಂದರು.

ನಾನು ಊಹಿಸಿ ನೊಣದ ಜೊತೆ ನೀವು ನಟಿಸುವುದು ಕಷ್ಟ
ಆದರೆ 'ಈಗ' ಸಿನಿಮಾ ಹಾಗಲ್ಲ. ಬೇರೆ ಎಲ್ಲಾ ಚಿತ್ರದ ಚಿತ್ರೀಕರಣಕ್ಕಿಂತ ಈಗ ಶೂಟಿಂಗ್ ವಿಭಿನ್ನವಾಗಿದೆ. ಯಾಕೆಂದರೆ ಅಲ್ಲಿ ವಿಲನ್ ಎದುರು ಮತ್ತೊಬ್ಬ ನಟ ಇರುವುದಿಲ್ಲ. ಬರೀ ಒಂದು ನೊಣ ಇರುತ್ತದೆ. ಆದರೆ ಆ ನೊಣ ಕೂಡ ಶೂಟಿಂಗ್ ಮಾಡುವಾಗ ಇರುವುದಿಲ್ಲ. ಹೀಗಾಗಿ ಒಬ್ಬ ನಟ ನೊಣ ಇದೆ ಎಂದು ಭಾವಿಸಿ ನಟಿಸಬೇಕಾಗುತ್ತದೆ.
ಸಂದರ್ಶಕನಿಗೆ ಸುದೀಪ್ ಪಾತ್ರವನ್ನು ನೀವೇಂದು ಊಹಿಸಿಕೊಳ್ಳಿ ಎಂದಿರುವ ರಾಜಮೌಳಿ ಅವರಿಗೆ ದೃಶ್ಯವನ್ನು ವಿವರಿಸಿದ್ದಾರೆ. ಆ ನೊಣ ಏನೆಲ್ಲ ಮಾಡುತ್ತದೆ ಎಂಬುದನ್ನು ನಾನು ನಿಮಗೆ ವಿವರಿಸುತ್ತೇನೆ. ನೀವು ಕಲ್ಪಿಸಿಕೊಳ್ಳಿ, ನಿಮ್ಮ ಸುತ್ತ ಒಂದು ನೋಣ ತೊಂದರೆ ಮಾಡುತ್ತಿದೆ. ಆದರೆ ನಿಮಗೆ ಅದು ಕಾಣಿಸೋಲ್ಲ. ನಾನು ಊಹಿಸಿದಂತೆ ಇರುವ ನೊಣದ ಜೊತೆಗೆ ನೀವು ನಟಿಸಬೇಕೆಂಬುದು ಕಷ್ಟಕರವಾದ ವಿಚಾರ ಎಂದು ರಾಜಮೌಳಿ ವಿವರಿಸಿದ್ದಾರೆ.

ಸುದೀಪ್ ನಿರ್ದೇಶಕರನ್ನು ಅರ್ಥ ಮಾಡಿಕೊಂಡಿದ್ದರು
'ಈಗ'ದಲ್ಲಿ ಈ ರೀತಿಯ ಪಾತ್ರವನ್ನು ಕಿಚ್ಚ ಸುದೀಪ್ ಅದ್ಭುತವಾಗಿ ನಿಭಾಯಿಸಿ ಯಶಸ್ವಿಯಾಗಿದ್ದಾರೆ. ಬಹುಶಃ ಒಬ್ಬ ನಿರ್ದೇಶಕನಾಗಿ ನನ್ನ ತಲೆಯಲ್ಲಿ ಏನಿದೆ ಎನ್ನುವುದನ್ನು ಸುದೀಪ್ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದರು ಎನಿಸುತ್ತದೆ. ಆ ರೀತಿ ಕೆಲಸ ಮಾಡುವ ಶಕ್ತಿಯನ್ನು ಸುದೀಪ್ ಹೊಂದಿದ್ದಾರೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ರಾಜಮೌಳಿ ಹೊಗಳಿದ್ದಾರೆ.
2012ರಲ್ಲಿ ತೆರೆಕಂಡ ರಾಜಮೌಳಿ ನಿರ್ದೇಶನದ ಈಗ ಚಿತ್ರ ಟಾಲಿವುಡ್‌ನಲ್ಲಿ ಧೂಳೆಬ್ಬಿಸಿತ್ತು. ರಾಜಮೌಳಿ ಕಥೆ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಟಾಲಿವುಡ್ ನಟ ನಾನಿ ಹಾಗೂ ನಟಿ ಸಮಂತಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











