twitter
    For Quick Alerts
    ALLOW NOTIFICATIONS  
    For Daily Alerts

    'ರಾಜಮೌಳಿ ಬಳಿ ಸಲಹೆ ಪಡೆಯಿರಿ': ಟ್ರಂಪ್ ಕಾಲೆಳೆದ ಆರ್ ಜಿ ವಿ

    |

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಫೆಬ್ರವರಿ 24 ರಂದು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಟ್ರಂಪ್ ದಂಪತಿಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದರು.

    ನಂತರ ಮೊಟೆರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ ಕೇಂದ್ರ ಸರ್ಕಾರ ಟ್ರಂಪ್ ದಂಪತಿಗೆ ಭರ್ಜರಿ ಸ್ವಾಗತ ನೀಡಿತ್ತು. ಸುಮಾರು 1 ಲಕ್ಷಕ್ಕೂ ಅಧಿಕ ಜನರು ಟ್ರಂಪ್ ಸ್ವಾಗತಿಸಲು ಕಾರ್ಯಕ್ರಮಕ್ಕೆ ಬಂದಿದ್ದರು.

    ಶಾರೂಖ್ ಖಾನ್ ಸಿನಿಮಾ ಹೆಸರು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್ಶಾರೂಖ್ ಖಾನ್ ಸಿನಿಮಾ ಹೆಸರು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್

    ಇದೀಗ, ಟ್ರಂಪ್ ಸ್ವಾಗತಿಸಲು ಬಂದಿದ್ದ ಜನಸಂಖ್ಯೆ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು, ಟ್ರಂಪ್ ಕಾಲೆಳೆದಿದ್ದಾರೆ. ಎಸ್ ಎಸ್ ರಾಜಮೌಳಿ ಬಳಿ ಸಲಹೆ ಪಡೆಯಿರಿ ಎಂದು ವ್ಯಂಗ್ಯ ಮಾಡಿದ್ದಾರೆ. ಅಷ್ಟಕ್ಕೂ, ಆರ್ ಜಿ ವಿ ಹೀಗೆ ಹೇಳಲು ಕಾರಣವೇನು? ಟ್ರಂಪ್ ಯಾವ ಕಾರಣಕ್ಕಾಗಿ ರಾಜಮೌಳಿ ಸಲಹೆ ತೆಗೆದುಕೊಳ್ಳಬೇಕು? ಮುಂದೆ ಓದಿ....

    ರಾಜಮೌಳಿ ಬಳಿ ಸಲಹೆ ಪಡೆಯಿರಿ

    ರಾಜಮೌಳಿ ಬಳಿ ಸಲಹೆ ಪಡೆಯಿರಿ

    ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಸುಮಾರು 6 ಲಕ್ಷಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಮಾಡಲಾಗಿತ್ತಂತೆ. ಆದರೆ, ಮೊಟೆರಾ ಸ್ಟೇಡಿಯಂನಲ್ಲಿ ಭಾಗಿಯಾಗಿದ್ದು ಸುಮಾರು 1 ಲಕ್ಷ ಜನರು. ನಿರೀಕ್ಷೆ ಮಾಡಿದ್ದಕ್ಕಿಂತ ಕಮ್ಮಿ ಬಂದ ಕಾರಣ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಈ ಕುರಿತು ಆರ್ ಜಿ ವಿ ಕೂಡ ಟ್ವೀಟ್ ಮಾಡಿ ಟ್ರಂಪ್ ಗೆ ರಾಜಮೌಳಿ ಬಳಿ ಸಲಹೆ ಪಡೆಯುವಂತೆ ಹೇಳಿದ್ದಾರೆ.

    ಡೊನಾಲ್ಡ್‌ ಟ್ರಂಪ್ ಬಳಿ ಇತ್ತು ಐಶಾರಾಮಿ ಖಾಸಗಿ ತಾಜ್‌ ಮಹಲ್!

    ಟ್ರಂಪ್ ಗೆ ಉಡುಗೊರೆಯಾಗಿ ನೀಡಿ

    ಟ್ರಂಪ್ ಗೆ ಉಡುಗೊರೆಯಾಗಿ ನೀಡಿ

    ''ಒಂದು ಲಕ್ಷ ಜನರನ್ನು ಒಂದು ಕೋಟಿ ಜನರಂತೆ ಕಾಣಿಸಲು ರಾಜಮೌಳಿ ಬಳಿ ಮನವಿ ಮಾಡಿಕೊಳ್ಳಿ. ಅವರು ಮಲ್ಟಿ ಟೆಕ್ನಿಕ್ ಬಳಸಿ ಗ್ರಾಫಿಕ್ಸ್ ಮಾಡಿ ಜನಸಂಖ್ಯೆ ಹೆಚ್ಚು ಕಾಣಿಸುವಂತೆ ಮಾಡುತ್ತಾರೆ. ಆ ವಿಡಿಯೋವನ್ನು ಟ್ರಂಪ್ ಗೆ ಉಡುಗೊರೆಯಾಗಿ ನೀಡಿ'' ಎಂದು ಆರ್ ಜಿ ವಿ ಟ್ವೀಟ್ ಮಾಡಿದ್ದಾರೆ.

    ಟ್ರಂಪ್ ಜೊತೆ ಮೋದಿ ಆಟವಾಡಿದ್ದಾರೆ

    ಟ್ರಂಪ್ ಜೊತೆ ಮೋದಿ ಆಟವಾಡಿದ್ದಾರೆ

    ''ಟ್ರಂಪ್ ಸ್ವಾಗತಿಸಲು ಒಂದು ಕೋಟಿ ಜನ ಸೇರುತ್ತಾರೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಟ್ರಂಪ್ ಜೊತೆ ಆಟವಾಡಿದ್ದಾರೆ. ಒಂದು ಕೋಟಿಯ ಬದಲು ಒಂದು ಲಕ್ಷ ಜನರು ಮಾತ್ರ ಬಂದಿದ್ದರು. ಇದರಿಂದ ಬೇಸರಗೊಂಡು ಭಾರತದ ಜೊತೆಗಿನ ಒಪ್ಪಂದಗಳನ್ನು ರದ್ದು ಮಾಡುವುದಿಲ್ಲ ಎಂದು ಭಾವಿಸುತ್ತಿದ್ದೇಣೆ'' ಎಂದು ಮೋದಿ ಅವರನ್ನು ವರ್ಮಾ ಟ್ರೋಲ್ ಮಾಡಿದ್ದಾರೆ.

    ಊಹಿಸಿಕೊಳ್ಳುವುದು ಉತ್ತಮ

    ಊಹಿಸಿಕೊಳ್ಳುವುದು ಉತ್ತಮ

    ''ನನ್ನನ್ನು ಸ್ವಾಗತಿಸಲು ಒಂದು ಕೋಟಿ ಜನರು ಬಂದಿದ್ದಾರಾ ಎಂದು ಟ್ರಂಪ್ ಲೆಕ್ಕ ಹಾಕಲು ಸಾಧ್ಯವಾಗಲ್ಲ. ಅದೇ ನಮಗೆ ವರ್ಕೌಟ್ ಆಗುತ್ತೆ'' ಎಂದು ಹೇಳುವ ಮೂಲಕ ಈ ವಿಚಾರವನ್ನು ಕೆದಕಿ ಮತ್ತಷ್ಟು ಟೀಕಿಸಿದ್ದಾರೆ ವರ್ಮಾ.

    English summary
    Controversial director Ram gopal varma trolled us president donald trump in twitter.
    Tuesday, February 25, 2020, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X