»   » ಚಿತ್ರ ನಿರ್ಮಾಣಕ್ಕೆ ಕೈಹಾಕಿದ ನಿರ್ದೇಶಕ ರಾಜಮೌಳಿ

ಚಿತ್ರ ನಿರ್ಮಾಣಕ್ಕೆ ಕೈಹಾಕಿದ ನಿರ್ದೇಶಕ ರಾಜಮೌಳಿ

Posted By:
Subscribe to Filmibeat Kannada
ಚಿತ್ರ ನಿರ್ದೇಶನದಲ್ಲಿ ಈಗಾಗಲೆ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ ಈಗ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದ ಮೂಲಕ ಹನು ರಾಘವಪುಡಿ ಎಂಬುವವರಿಗೆ ನಿರ್ದೇಶನದ ಜವಾಬ್ದಾರಿಯನ್ನು ನೀಡುತ್ತಿದ್ದಾರೆ. ಪರಿಚಯಿಸುತ್ತಿದ್ದಾರೆ.

ಈ ಚಿತ್ರದ ಮೂಲಕ ಲಾವಣ್ಯ ಹಾಗೂ ನವೀನ್ ಚಂದ್ರ ಎಂಬ ತಾರೆಗಳನ್ನೂ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. "AIDS ಎಂಬ ಶಾರ್ಟ್ ಫಿಲಂ ನೋಡಿದ್ದೇನೆ. ಹನು ನಿರ್ದೇಶನ ತುಂಬ ಇಷ್ಟವಾಯಿತು. ಹಾಗಾಗಿ ತಮ್ಮ ನಿರ್ಮಾಣದ ಚಿತ್ರಕ್ಕೆ ಆತನನ್ನು ಆಯ್ಕೆ ಮಾಡಿಕೊಂಡಿದ್ದೇನೆ" ಎಂದಿದ್ದಾರೆ ರಾಜಮೌಳಿ.

ಈ ಚಿತ್ರದಲ್ಲಿ ತಮ್ಮದೇನಿದ್ದರೂ ನಿರ್ಮಾಣದ ಜವಾಬ್ದಾರಿ ಅಷ್ಟೇ. ಮೊಟ್ಟ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ಮಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎನ್ನುತ್ತಾರೆ ರಾಜಮೌಳಿ. ಈ ಅಪೂರ್ವ ಅವಕಾಶವನ್ನು ನೀಡಿರುವುದಕ್ಕೆ ನಿರ್ದೇಶಕ ಹನು ರಾಘವಪುಡಿ ಕೂಡ ಅಷ್ಟೇ ಸಂತಸ ವ್ಯಕ್ತಪಡಿಸಿದ್ದಾರೆ.

ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಹಾಗೂ ರಾಜಮೌಳಿ ನಿರ್ದೇಶನದ 'ಈಗ' ಚಿತ್ರ ಬಾಕ್ಸಾಫೀಸರಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಇತ್ತೀಚೆಗೆ ರಾಜಮೌಳಿ ಮಾತನಾಡುತ್ತಾ ಕನ್ನಡ ಚಿತ್ರವೊಂದನ್ನೂ ನಿರ್ದೇಶಿಸುವುದಾಗಿ ಹೇಳಿದ್ದರು.

'ಈಗ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ರಾಜಮೌಳಿ ಹೀಗೆಂದಿದ್ದರು. ಶ್ರೀಕೃಷ್ಣ ದೇವರಾಯ ಹೆಸರಿನಲ್ಲಿ ವಿಜಯನಗರ ಸಾಮ್ರಾಜ್ಯದ ಕಥೆಯನ್ನು ಆ ಚಿತ್ರ ಹೊಂದಿದೆಯಂತೆ. "ನನ್ನ ಈ ಹಿಂದಿನ ಎಲ್ಲಾ ಎಂಟು ಚಿತ್ರಗಳನ್ನೂ ಕರ್ನಾಟಕದ ಪ್ರೇಕ್ಷಕರು ಸ್ವೀಕರಿಸಿದ್ದಾರೆ.

ತಾಯಿ ಭುವನೇಶ್ವರಿಯ ಆಶೀರ್ವಾದ ನನ್ನ ಮೇಲಿರುವುದರಿಂದ ಸದ್ಯದಲ್ಲಿಯೇ ಕನ್ನಡ ಚಿತ್ರವೊಂದನ್ನು ನಿರ್ದೇಶಿಸಲು ನಾನು ಯೋಚಿಸಿದ್ದೇನೆ. ಇದು ನನ್ನ ಬಹುದಿನದ ಕನಸು ಹಾಗೂ ಮಹತ್ವಾಕಾಂಕ್ಷೆ" ಎಂದಿದ್ದಾರೆ ಕರ್ನಾಟಕ ಮೂಲದ ತೆಲುಗು ನಿರ್ದೇಶಕ ರಾಜಮೌಳಿ.

"ಶ್ರೀಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯವನ್ನು ಆಳುವಾಗಿನ ಕಥೆ ನನ್ನ ತಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸುತ್ತುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನರಿಗೆ ತುಂಬಾ ಹತ್ತಿರವಾದ ಕಥೆ ಇದು. ಹೀಗಾಗಿ, ಕನ್ನಡ ಮತ್ತು ತೆಲುಗಿನಲ್ಲಿ ಇದನ್ನು ಏಕಕಾಲದಲ್ಲಿ ನಿರ್ದೇಶಿಸುವ ಯೋಚನೆ ನನ್ನದು. ಕನ್ನಡದಲ್ಲಿ ಮೊದಲ ಬಾರಿ ಮಾಡುತ್ತಿರುವುದರಿಂದ ಅದು ವಿಶೇಷವಾಗಿರಬೇಕು" ಎಂದಿದ್ದಾರೆ. (ಏಜೆನ್ಸೀಸ್)

English summary
Sensational director SS Rajamouli is all set to produce a film and the young debutant Hanu Raghavapudi is the director. The movie will star new faces Lawanya and Naveen Chandra.
Please Wait while comments are loading...