ಎಚ್ಚೆತ್ತುಕೊಂಡ ನಿರ್ದೇಶಕ ಎಸ್. ಎಸ್ ರಾಜಮೌಳಿ; ಕನ್ನಡ ಸಿನಿರಸಿಕರಿಗೆ ಸಿಹಿಸುದ್ದಿ

'ಆರ್‌ಆರ್‌ಆರ್‌' ಬಳಿಕ ಮಹೇಶ್ ಬಾಬು ಜೊತೆ ರಾಜಮೌಳಿ ಕೈ ಜೋಡಿಸಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ SSMB29 ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ತಮ್ಮದೇ 'ಬಾಹುಬಲಿ' ಸರಣಿ ಸಿನಿಮಾಗಳನ್ನು ಒಂದಾಗಿ ಎಡಿಟ್ ಮಾಡಿ ತೆರೆಗೆ ತರ್ತಿದ್ದಾರೆ.

ಸದ್ಯ ಹಳೇ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಈಗಾಗಲೇ ಹಲವು ಸಿನಿಮಾಗಳು ಆ ರೀತಿ ಮತ್ತೆ ತೆರೆಗಪ್ಪಳಿಸಿ ಸದ್ದು ಮಾಡಿವೆ. 'ಬಾಹುಬಲಿ ದಿ ಬಿಗಿನಿಂಗ್' ಹಾಗೂ 'ಬಾಹುಬಲಿ ದಿ ಕನ್‌ಕ್ಲೂಷನ್' ಚಿತ್ರಗಳನ್ನು ಮರುಬಿಡುಗಡೆ ಮಾಡಿದರೂ ಜನ ಯಾವುದನ್ನು ನೋಡುವುದು, ಯಾವುದನ್ನು ಬಿಡುವುದು ಎನ್ನುವ ಗೊಂದಲಕ್ಕೀಡಾಗುತ್ತಿದ್ದರು. ಹಾಗಾಗಿ ಎರಡೂ ಚಿತ್ರಗಳನ್ನು ಎಡಿಟ್ ಮಾಡಿ 3 ಗಂಟೆ 40 ನಿಮಿಷಕ್ಕೆ ಇಳಿಸಿ ಮರು ಬಿಡುಗಡೆ ಮಾಡ್ತಿದ್ದಾರೆ.

SS Rajamouli s Baahubali The Epic Releasing This Friday Kannada Version also Confirmed

ಇದೇ ಶುಕ್ರವಾರ 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪ್ರಭಾಸ್, ರಾಜಮೌಳಿ ಹಾಗೂ ರಾಣ ಪ್ರಚಾರ ಕೂಡ ಆರಂಭಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕರ್ನಾಟಕದಲ್ಲಿ ಸಿನಿಮಾ ವಿತರಣೆ ಮಾಡ್ತಿದೆ. ಬೆಂಗಳೂರಿನಲ್ಲಿ ಕೂಡ ಅಭಿಮಾನಿಗಳು ಮತ್ತೆ ಬಾಹುಬಲಿ ಆರ್ಭಟ ನೋಡಲು ಕಾಯ್ತಿದ್ದು ಟಿಕೆಟ್ ಬುಕ್ ಮಾಡಲು ಮುಗಿಬಿದ್ದಿದ್ದಾರೆ.

2015ರಲ್ಲಿ ಬಾಹುಬಲಿ ಪಾರ್ಟ್-1 ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಎರಡು ವರ್ಷಗಳ ಬಳಿಕ ಪಾರ್ಟ್- 2 ರಿಲೀಸ್ ಆಗಿತ್ತು. ಆಗ ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳನ್ನು ಡಬ್ ಮಾಡುವ ಅವಕಾಶ ಇರಲಿಲ್ಲ. ಹಾಗಾಗಿ ಬಾಹುಬಲಿ ಸರಣಿ ಸಿನಿಮಾಗಳನ್ನು ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ನೋಡುವಂತಾಗಿತ್ತು. ಈಗ ಡಬ್ಬಿಂಗ್ ಮಾಡಲು ಅವಕಾಶ ಇದೆ. ಹಾಗಾಗಿ 'ಬಾಹುಬಲಿ ದಿ ಎಪಿಕ್' ಸಿನಿಮಾ ಕನ್ನಡದಲ್ಲೂ ಬರುತ್ತಾ ಎನ್ನುವ ಗೊಂದಲ ಇತ್ತು. ಆದರೆ ಈಗ ಖಚಿತವಾಗಿದೆ.

SS Rajamouli s Baahubali The Epic Releasing This Friday Kannada Version also Confirmed

ಕನ್ನಡಕ್ಕೂ ಸಿನಿಮಾ ಡಬ್ ಆಗಿ ಬಿಡುಗಡೆ ಆಗಲಿದ್ದು ಈಗಾಗಲೇ ಕನ್ನಡ ವರ್ಷನ್ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಿದೆ. ಪರಭಾಷೆಯ ದೊಡ್ಡ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡಬೇಕು ಎನ್ನುವ ಆಗ್ರಹ ವ್ಯಕ್ತವಾಗುತ್ತದೆ. 'ಬಾಹುಬಲಿ' ಸರಣಿ ಸಿನಿಮಾಗಳನ್ನೆ ಸೇರಿಸಿ ಎಡಿಟ್ ಮಾಡಿ ಬಿಡುಗಡೆ ಮಾಡುತ್ತಿರುವುದರಿಂದ ಕನ್ನಡಕ್ಕೆ ಡಬ್ ಮಾಡಲು ಪ್ರಯತ್ನ ಮಾಡಲ್ಲ ಎಂದು ಕೆಲವರ ಭಾವಿಸಿದ್ದರು. 'ಆರ್‌ಆರ್‌ಆರ್' ಚಿತ್ರ ಕನ್ನಡಕ್ಕೆ ಡಬ್ ಆಗಿದ್ದರೂ ಹೆಚ್ಚು ಶೋ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇದನ್ನೆಲ್ಲಾ ಗಮನಿಸಿ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ.

ಇತ್ತೀಚೆಗೆ 'ಜೈಲರ್', 'ಪುಷ್ಪ- 2', 'ಕೂಲಿ' ಸೇರಿ ಕೆಲ ಚಿತ್ರಗಳ ಕನ್ನಡ ವರ್ಷನ್‌ಗೆ ರಾಜ್ಯದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 'ಬಾಹುಬಲಿ' ರೀತಿಯ ಅದ್ಭುತ ಚತ್ರವನ್ನು ಕನ್ನಡದಲ್ಲೇ ನೋಡಬೇಕು ಎಂದು ಕೆಲವರು ಆಸೆಪಟ್ಟಿದ್ದರು. ಅದು ಈಗ ಈಡೇರುತ್ತಿದೆ. ಹೆಚ್ಚು ಕನ್ನಡ ಶೋಗಳನ್ನು ಕೊಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಿದ್ದಾರೆ.

ಬುಕ್‌ಮೈ ಶೋನಲ್ಲಿ ಮೊದಲ ದಿನವೇ 64 ಸಾವಿರ ಟಿಕೆಟ್ ಬುಕ್ ಆಗಿ 'ಬಾಹುಬಲಿ ದಿ ಎಪಿಕ್' ಸಿನಿಮಾ ಸದ್ದು ಮಾಡಿತ್ತು. ಹಾಗಾಗಿ ದೊಡ್ಡಮಟ್ಟದಲ್ಲೇ ಚಿತ್ರಕ್ಕೆ ಓಪನಿಂಗ್ ಸಿಗುವ ಅಂದಾಜಿದೆ. ರಾಜಮೌಳಿ ಖುದ್ದಾಗಿ ಸಿನಿಮಾ ಎಡಿಟ್ ಮಾಡಿಸಿ ಸಿನಿಮಾ ಪ್ರಚಾರ ಕೂಡ ಮಾಡುತ್ತಿದ್ದಾರೆ. ಅಭಿಮಾನಿಗಳು ಕೂಡ ಹೊಸ ಸಿನಿಮಾ ಬರಮಾಡಿಕೊಳ್ಳುವಂತೆ ಬಾಹುಬಲಿಯನ್ನ ಮತ್ತೆ ಸ್ವಾಗತಿಸಲು ಸಿದ್ಧರಾಗಿದ್ದಾರೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕು.

More from Filmibeat

Read more about: rajamouli baahubali prabhas
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X