SSE weekend collection: ಭಾನುವಾರ ಡಬಲ್ ಕಲೆಕ್ಷನ್: ಸೋಮವಾರ ಟೆಸ್ಟ್‌ನಲ್ಲಿ ಮನು- ಪ್ರಿಯಾ ಪಾಸಾದ್ರಾ?

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮನು- ಪ್ರಿಯಾ ಪ್ರೇಮ್‌ ಕಹಾನಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪೇಯ್ಡ್ ಪ್ರೀಮಿಯರ್‌ ಶೋಗಳಿಂದಲೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. 4ನೇ ದಿನ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹೇಮಂತ್ ರಾವ್ ಪ್ರಯತ್ನಕ್ಕೆ ಬಹುಪರಾಕ್ ಸಿಗುತ್ತಿದೆ.

ಕರ್ನಾಟಕ ಮಾತ್ರ ದೇಶದ ಆಯ್ದ ನಗರಗಳಲ್ಲಿ ಹಾಗೂ ವಿದೇಶದಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆಯಾಗಿದೆ. ಪ್ರೇಕ್ಷಕರು 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡುತ್ತಾ ಭಾವ ಸಾಗರದಲ್ಲಿ ಮಿಂದೇಳುತ್ತಿದ್ದಾರೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ವರ್ಷ ಮೊದಲ 6 ತಿಂಗಳಲ್ಲಿ ಕನ್ನಡ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ನಿಧಾನವಾಗಿ ಸ್ಯಾಂಡಲ್‌ವುಡ್ ಎದ್ದು ನಿಲ್ಲುತ್ತಿದೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಕೌಸಲ್ಯ ಸುಪ್ರಜಾ ರಾಮ' ಬಳಿಕ ಈಗ 'ಸಪ್ತ ಸಾಗರದಾಚೆ ಎಲ್ಲೋ' ದರ್ಬಾರ್ ನಡೀತಿದೆ.

SSE: Sapta Sagaradaache Ello Day 3 collection: film registers Solid jump on sunday

ಯಾವುದೇ ಸಿನಿಮಾ ಸೋಲು ಗೆಲುವಿನ ನಿರ್ಧಾರದಲ್ಲಿ ಬಾಕ್ಸಾಫೀಸ್‌ ಗಳಿಕೆ ಮುಖ್ಯವಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಕಲೆಕ್ಷನ್ ಮಾಹಿತಿ ನೀಡುವುದು ಕಡಿಮೆ. ಆದರೆ ಬಾಕ್ಸಾಫೀಸ್‌ ಪಂಡಿತರು ಎಲ್ಲಾ ಸಿನಿಮಾಗಳ ಕಲೆಕ್ಷನ್ ಲೆಕ್ಕ ಹಾಕುತ್ತಿರುತ್ತಾರೆ. ಪೇಯ್ಡ್ ಪ್ರೀಮಿಯರ್‌ ಶೋಗಳಿಂದಲೇ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ 40 ಲಕ್ಷಕ್ಕೂ ಅಧಿಕ ಕಲೆಕ್ಷನ್ ಮಾಡಿತ್ತು. ಶುಕ್ರವಾರ, ಶನಿವಾರವೂ ಗಳಿಕೆಯಲ್ಲಿ ಏರಿಕೆ ಕಂಡುಬಂದಿತ್ತು.

ಫಸ್ಟ್ ವೀಕೆಂಡ್ ಕಲೆಕ್ಷನ್

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಫಸ್ಟ್ ವೀಕೆಂಡ್ ಬಾಕ್ಸಾಫೀಸ್ ಕಲೆಕ್ಷನ್ 10 ಕೋಟಿ ರೂ. ಗಡಿ ದಾಟಿದೆ ಎನ್ನಲಾಗ್ತಿದೆ. ಪೇಯ್ಡ್ ಪ್ರೀಮಿಯರ್ ಶೋಗಳ ಕಲೆಕ್ಷನ್ ಸೇರಿ ಶುಕ್ರವಾರ ಹಾಗೂ ಶನಿವಾರ ಸಿನಿಮಾ 7 ಕೋಟಿ ರೂ. ಕಲೆಕ್ಷನ್ ಮಾಡಿತ್ತು ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸಿದ್ದರು. ಭಾನುವಾರ ಬುಕ್ಕಿಂಗ್ ಚೆನ್ನಾಗಿತ್ತು. ಮೊದಲ ಎರಡು ದಿನಗಳಿಗಿಂತ ಹೆಚ್ಚು ದೋಚುವ ಸುಳಿವು ಸಿಕ್ಕಿತ್ತು. ಮೊದಲ 3 ದಿನಗಳಲ್ಲಿ ಒಟ್ಟಾರೆಯಾಗಿ 11 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವ ಅಂದಾಜಿದೆ.

ಸೋಮವಾರ ಬುಕ್ಕಿಂಗ್ ಸೂಪರ್

ಯಾವುದೇ ಸಿನಿಮಾದ ನಿಜವಾದ ತಾಕತ್ತು ಗೊತ್ತಾಗುವುದು ಫಸ್ಟ್ ವೀಕೆಂಡ್ ಕಳೆದ ಬಳಿಕ ಬರುವ ಸೋಮವಾರ. ವಾರದ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಬಹಳ ಮುಖ್ಯವಾಗುತ್ತದೆ. ಅದೇ ಸಿನಿಮಾ ಸೋಲು ಗೆಲುವಿನ ದಿಕ್ಸೂಚಿ ಆಗುತ್ತದೆ. 4 ದಿನವಾದ ಇಂದು (ಸೆಪ್ಟೆಂಬರ್ 4) ಕೂಡ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಚೆನ್ನಾಗಿದೆ. ಮೌತ್‌ ಟಾಕ್‌ನಿಂದಲೇ ಸಿನಿಮಾ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಸೆಳೆಯುತ್ತಿದೆ.

5 ಕೋಟಿ ಶೇರ್?

ಫಸ್ಟ್‌ ವೀಕೆಂಡ್‌ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ 8 ಕೋಟಿ ರೂ. ಗಳಿಕೆ ಕಾಣುವ ನಿರೀಕ್ಷೆ ಇತ್ತು. ಆದರೆ 10 ಕೋಟಿ ರೂ. ಗಡಿ ದಾಟಿ ಅಚ್ಚರಿ ಮೂಡಿಸಿದೆ. ಈಗಾಗಲೇ 5 ಕೋಟಿ ರೂ. ಶೇರ್ ಬಂದಿರುವ ಅಂದಾಜಿದೆ. ಸಿನಿಮಾ ಕೊಂಚ ಸ್ಲೋ ಎನ್ನುವ ಗೊಣಗಾಟದ ನಡವೆಯೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿರುವುದು ಬಾಕ್ಸಾಫೀಸ್‌ ಗಳಿಕೆಗೆ ಪ್ಲಸ್ ಆಗಿದೆ.

ಚಿತ್ರತಂಡ ಥಿಯೇಟರ್ ಭೇಟಿ

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್‌ಗೆ ಚಿತ್ರತಂಡ ಖುಷಿಯಾಗಿದೆ. ಈ ಖುಷಿಯನ್ನು ಪ್ರೇಕ್ಷಕರ ಜೊತೆ ಹಂಚಿಕೊಳ್ಳು ತೀರ್ಮಾನಿಸಿದೆ. ರಾಜ್ಯಾದ್ಯಂತ ಥಿಯೇಟರ್‌ ಮಂದಿರಗಳಿಗೆ ಭೇಟಿ ನೀಡಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಮುಂದಾಗಿದೆ. ನಿನ್ನೆ(ಸೆಪ್ಟೆಂಬರ್ 3) ನಗರದ ಕೆಲ ಚಿತ್ರಮಂದಿರಗಳಿಗೆ ತಂಡ ಎಂಟ್ರಿ ಕೊಟ್ಟಿದ್ದಾರೆ. ಅಭಿಮಾನಿಗಳು ತಮ್ಮ ಊರಿಗೆ ತಂಡವನ್ನು ಸ್ವಾಗತಿಸುತ್ತಿದ್ದಾರೆ.

More from Filmibeat

English summary
Rakshit Shetty Starrer Sapta Sagaradaache Ello first weekend collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X