'ಸೇಂಟ್ ಮಾರ್ಕ್ಸ್ ರಸ್ತೆ'ಯಲ್ಲಿ ಪ್ರಿಯಾಂಕಾ ಉಪೇಂದ್ರ
ನಟಿ ಪ್ರಿಯಾಂಕಾ ಉಪೇಂದ್ರ ಇಂದು (ನವೆಂಬರ್ 12) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಬರ್ತ್ ಡೇ ವಿಶೇಷವಾಗಿ ಹೊಸ ಸಿನಿಮಾವೊಂದರ ಪೋಸ್ಟರ್ ಲಾಂಚ್ ಆಗಿದೆ.
'ಸೇಂಟ್ ಮಾರ್ಕ್ಸ್ ರಸ್ತೆ' ಪ್ರಿಯಾಂಕಾ ಉಪೇಂದ್ರ ನಟನೆಯ ಹೊಸ ಸಿನಿಮಾ. ಈ ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದೆ. ನಟ ಉಪೇಂದ್ರ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಇದೊಂದು ಹಾರರ್ ಸಿನಿಮಾವಾಗಿದೆ. ಈ ಹಿಂದೆ ಹಾರರ್ ಸಿನಿಮಾ 'ಮಮ್ಮಿ'ಯಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದರು.
ಈ ಸಿನಿಮಾವನ್ನು ಇಬ್ಬರು ನಿರ್ದೇಶಕರು ಸೇರಿ ಮಾಡುತ್ತಿದ್ದಾರೆ. ಇಬ್ಬರ ಹೆಸರನ್ನು ಸೇರಿಸಿ ಮ್ಯಾಗ್ವೇನ್ ಎಂದು ಸ್ಕ್ರೀನ್ ನೇಮ್ ನೀಡಲಾಗಿದೆ. ಈ ಸಿನಿಮಾದ ಶೂಟಿಂಗ್ ಮುಗಿದಿದೆ. ತಮಿಳು ಮತ್ತು ಕನ್ನಡದಲ್ಲಿ ಸಿನಿಮಾ ತೆರೆಗೆ ಬರಲಿದೆ.

ಆರು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆ ನಡೆದ ಕತೆ ಸಿನಿಮಾದಲ್ಲಿ ಇರಲಿದೆ. ಆರ್ ವಿ ಭರತನ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಿನಿಮಾಗೆ ಮ್ಯೂಸಿಕ್ ನೀಡುತ್ತಿದ್ದಾರೆ.

ಈ ಸಿನಿಮಾದ ಜೊತೆಗೆ 'ಉಗ್ರಾವತಾರ' ಎಂಬ ಸಿನಿಮಾದಲ್ಲಿಯೂ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ಪ್ರಿಯಾಂಕ ಆಕ್ಷನ್ ಮಾಡಿದ್ದಾರೆ.


Click it and Unblock the Notifications











