For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಮನೆಯಲ್ಲಿ ಮಹತ್ವದ ಸಭೆ: ಯಾವೆಲ್ಲಾ ನಟರು ಹಾಜರಿದ್ದರು?

  |

  ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಾಯಕ ನಟರು ಇಂದು ಶಿವರಾಜ್ ಕುಮಾರ್ ಮನೆಯಲ್ಲಿ ಒಗ್ಗೂಡಿದ್ದರು.

  Madagaja ಚತ್ರೀಕರಣ ನಡೆದಿದ್ದು ಹೇಗೆ , ನಿರ್ದೇಶಕ Mahesh ಹೇಳ್ತಾರೆ ಕೇಳಿ | Filmibeat Kannada

  ಶಿವರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದ ನಾಯಕತ್ವವನ್ನು ಕೆಲವು ದಿನಗಳ ಹಿಂದಷ್ಟೆ ವಹಿಸಿಕೊಡಲಾಗಿದೆ. ಅದರ ಬೆನ್ನಲ್ಲೆ ಸ್ಟಾರ್ ನಟರು ಹಮ್ಮು ಬಿಟ್ಟು ಶಿವಣ್ಣ ಮನೆಯಲ್ಲಿ ಸೇರಿ 'ನಾವೆಲ್ಲರೂ ಶಿವಣ್ಣನ ಜೊತೆಗಿದ್ದೇವೆ' ಎಂಬುದನ್ನು ಸಾರಿ ಹೇಳಿದ್ದಾರೆ.

  ಸಾವಿರ ಜನರನ್ನು ಹಿಂದೆ ಇಟ್ಟುಕೊಂಡವನು ಲೀಡರ್ ಅಲ್ಲ: ಶಿವರಾಜ್ ಕುಮಾರ್ಸಾವಿರ ಜನರನ್ನು ಹಿಂದೆ ಇಟ್ಟುಕೊಂಡವನು ಲೀಡರ್ ಅಲ್ಲ: ಶಿವರಾಜ್ ಕುಮಾರ್

  ಇಂದು ಶಿವರಾಜ್ ಕುಮಾರ್ ನಿವಾಸದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರನ್ನು ಆಹ್ವಾನಿಸಿ ಚಿತ್ರರಂಗದ ಪ್ರಸ್ತುತ ಸಮಸ್ಯೆಗಳು ಹಾಗೂ ಎದುರಿಸಲಿರುವ ಸವಾಲುಗಳು ಇನ್ನಿತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

  ಯಾವ-ಯಾವ ನಾಯಕರು ಭಾಗವಹಿಸಿದ್ದರು?

  ಯಾವ-ಯಾವ ನಾಯಕರು ಭಾಗವಹಿಸಿದ್ದರು?

  ಶಿವರಾಜ್‌ ಕುಮಾರ್ ಮನೆಯಲ್ಲಿ ತಾರೆಯರ ದಂಡೇ ಇಂದು ಸೇರಿತ್ತು. ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಪುನೀತ್ ರಾಜ್‌ಕುಮಾರ್, ಯಶ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಗಣೇಶ್, ದುನಿಯಾ ವಿಜಯ್ ಇನ್ನೂ ಹತ್ತು ಹಲವು ನಟ-ನಿರ್ಮಾಪಕರು ಭಾಗವಹಿಸಿದ್ದರು.

  ಚಿತ್ರಕಾರ್ಮಿಕರಿಗೆ ಪ್ಯಾಕೇಜ್ ಕೊಡುವಂತೆ ಒತ್ತಾಯ

  ಚಿತ್ರಕಾರ್ಮಿಕರಿಗೆ ಪ್ಯಾಕೇಜ್ ಕೊಡುವಂತೆ ಒತ್ತಾಯ

  ಸಚಿವ ಸಿಟಿ.ರವಿ ಅವರೊಂದಿಗೆ ನಡೆದ ಸಭೆಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ಹಾಗು ಚಲನಚಿತ್ರರಂಗದ ಪುನಶ್ಚೇತನದ ನೆರವಿಗಾಗಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ಮಂದಿರ ತೆರೆಯಲು ಹಾಗು ದರ ನಿಗದಿ, ತೆರಿಗೆ ವಿನಾಯಿತಿ ಬಗ್ಗೆ ಚರ್ಚೆ ನಡೆಸಲಾಗಿದೆ.

  ನಾವೆಲ್ಲರೂ ಜತೆಯಾಗಿದ್ದೇವೆ, ಶೀಘ್ರವೇ ಚಿತ್ರೀಕರಣ ಆರಂಭಿಸುತ್ತೇವೆ: ಶಿವರಾಜ್ ಕುಮಾರ್ ಭರವಸೆನಾವೆಲ್ಲರೂ ಜತೆಯಾಗಿದ್ದೇವೆ, ಶೀಘ್ರವೇ ಚಿತ್ರೀಕರಣ ಆರಂಭಿಸುತ್ತೇವೆ: ಶಿವರಾಜ್ ಕುಮಾರ್ ಭರವಸೆ

  ಸಿಎಂ ಜೊತೆ ಚರ್ಚೆಯ ಭರವಸೆ

  ಸಿಎಂ ಜೊತೆ ಚರ್ಚೆಯ ಭರವಸೆ

  ಸಭೆಯಲ್ಲಿ ನಡೆದ ಮಾತುಕತೆ, ಚಿತ್ರರಂಗದ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅವರೊಟ್ಟಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂಬ ಭರವಸೆಯನ್ನು ಸಚಿವ ಸಿ.ಟಿ.ರವಿ ಚಿತ್ರರಂಗದ ಗಣ್ಯರಿಗೆ ತಿಳಿಸಿದ್ದಾರೆ.

  ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ತಾರಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್?ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ತಾರಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್?

  ದರ್ಶನ್, ಸುದೀಪ್ ಭಾಗವಹಿಸಿಲ್ಲ

  ದರ್ಶನ್, ಸುದೀಪ್ ಭಾಗವಹಿಸಿಲ್ಲ

  ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದರ್ಶನ್, ಸುದೀಪ್ ಸೇರಿ ಇನ್ನೂ ಕೆಲವು ಪ್ರಮುಖರು ಭಾಗವಹಿಸಿಲ್ಲ. ಶಿವರಾಜ್ ಕುಮಾರ್ ಅವರಿಗೆ ನಾಯಕತ್ವ ವಹಿಸಿದ್ದರ ಬಗ್ಗೆ ಆ ಇಬ್ಬರೂ ನಟರ ಸಹಮತ ಇದೆ ಎನ್ನಲಾಗಿದೆ.

  English summary
  Star actors attend meeting in Shivaraj Kumar's house. Minister CT Ravi also present in the meeting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X