For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ನಿಜವಾದ ಸಂಭ್ರಮ ಶುರುವಾಗೋದೆ ಆಗಸ್ಟ್‌ನಲ್ಲಿ!

  |

  ಕೊರೊನಾ ವೈರಸ್ ಒಂಥರಾ ಹಾವು ಏಣಿ ಆಟ ಆಗೋಗಿದೆ. ಮೊದಲನೇ ಅಲೆ, ಎರಡನೇ ಅಲೆ ಮುಗಿತು ಈಗ ಮೂರನೇ ಅಲೆ ಶುರುವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ಕೊಡ್ತಿದ್ದಾರೆ. ಮೂರನೇ ಅಲೆಯ ಭೀತಿಯಿದ್ದರೂ ಎಲ್ಲಾ ಕ್ಷೇತ್ರಗಳಲ್ಲಿಯೂ ಮೊದಲಿನಂತೆ ಚಟುವಟಿಕೆಗಳು ಆರಂಭಗೊಂಡಿದೆ. ಅದರಂತೆ ಚಿತ್ರರಂಗವೂ ಸಕ್ರಿಯವಾಗಿದೆ. ಈಗಾಗಲೇ ಶೂಟಿಂಗ್‌ಗೆ ಅನುಮತಿ ಸಿಕ್ಕಿದೆ, ಜುಲೈ 19 ರಿಂದ ಚಿತ್ರ ಪ್ರದರ್ಶನಕ್ಕೂ ರಾಜ್ಯ ಸರ್ಕಾರದಿಂದ ಸಮ್ಮತಿ ಸಿಕ್ಕಿದೆ.

  ಥಿಯೇಟರ್‌ ಪ್ರದರ್ಶನಕ್ಕೆ ಅನುಮತಿ ಸಿಕ್ಕಿ ನಾಲ್ಕು ದಿನ ಕಳೆದರೂ ರಾಜ್ಯದ ಹಲವು ಚಿತ್ರಮಂದಿರಗಳು ಬಾಗಿಲು ತೆರೆದಿಲ್ಲ ಎಂಬ ಮಾಹಿತಿ ಇದೆ. ಯಾವ ಸಿನಿಮಾ ಪ್ರದರ್ಶನ ಮಾಡೋದು, ಜನರು ಬರ್ತಾರಾ ಎಂಬ ಗೊಂದಲದಲ್ಲಿ ಥಿಯೇಟರ್ ಮಾಲೀಕರಿದ್ದಾರೆ. ಮೊದಲಿನಂತೆ ಚಿತ್ರಮಂದಿರಗಳು ಹೌಸ್‌ಫುಲ್ ಆಗೋಕೆ ಇನ್ನು ಎಷ್ಟು ದಿನ ಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ಯಾಂಡಲ್‌ವುಡ್ ನಿಜವಾದ ಸಂಭ್ರಮಕ್ಕೆ ಮತ್ತಷ್ಟು ದಿನ ಕಾಯಲೇಬೇಕು. ಮುಂದೆ ಓದಿ...

  ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಸುದ್ದಿ; 'ಭಜರಂಗಿ-2' ಬಿಡುಗಡೆ ದಿನಾಂಕ ಘೋಷಣೆಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಸುದ್ದಿ; 'ಭಜರಂಗಿ-2' ಬಿಡುಗಡೆ ದಿನಾಂಕ ಘೋಷಣೆ

  ಆಗಸ್ಟ್‌ನಿಂದ ಅಸಲಿ ಸಂಭ್ರಮ ಆರಂಭ

  ಆಗಸ್ಟ್‌ನಿಂದ ಅಸಲಿ ಸಂಭ್ರಮ ಆರಂಭ

  ಶೂಟಿಂಗ್ ಆರಂಭವಾಗಿದೆ, ಚಿತ್ರಮಂದಿರಗಳಿಗೆ ಅನುಮತಿ ಸಿಕ್ಕಿದೆ. ಆದರೆ ಮೊದಲಿನಂತೆ ಸಂಭ್ರಮ, ಸಡಗರ, ಹೌಸ್‌ಫುಲ್ ಬೋರ್ಡ್‌ ಇದೆಲ್ಲಾ ಶುರುವಾಗೋಕೆ ಎರಡ್ಮೂರು ವಾರ ಬೇಕು ಎಂದು ಹೇಳಬಹುದು. ಏಕಂದ್ರೆ, ಸ್ಟಾರ್ ನಟರ ನಿರೀಕ್ಷೆಯ ಸಿನಿಮಾಗಳು ಥಿಯೇಟರ್‌ಗೆ ಬಂದ್ರೆ ಈ ಸಂಭ್ರಮ, ವೈಭವ ಸಾಧ್ಯ ಎಂಬ ಅಭಿಪ್ರಾಯ ಇದೆ. ಬಹುಶಃ ಆಗಸ್ಟ್ ತಿಂಗಳಲ್ಲಿ ಇದು ಸಾಧ್ಯವಾಗಲಿದೆ.

  ನಿರೀಕ್ಷೆಯ ಚಿತ್ರಗಳು ರಿಲೀಸ್‌ಗೆ ರೆಡಿ

  ನಿರೀಕ್ಷೆಯ ಚಿತ್ರಗಳು ರಿಲೀಸ್‌ಗೆ ರೆಡಿ

  ಥಿಯೇಟರ್ ಓಪನ್ ಆಗಲಿ ರಿಲೀಸ್ ಮಾಡುತ್ತೇವೆ ಎಂದು ಹೇಳುತ್ತಿದ್ದ ಸ್ಟಾರ್ಸ್ ಸಿನಿಮಾಗಳು ನಿರ್ಮಾಪಕರು, ಈಗ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಆಗಸ್ಟ್ ತಿಂಗಳಿನಿಂದ ಸ್ಟಾರ್ ನಟರ ಚಿತ್ರಗಳು ಪ್ರೇಕ್ಷಕರೆದುರು ಬರಲಿದೆ. ಸದ್ಯದ ವರದಿಗಳ ಪ್ರಕಾರ, ದುನಿಯಾ ವಿಜಯ್ ನಟನೆಯ 'ಸಲಗ' ಹಾಗೂ ಶಿವಣ್ಣ ನಟನೆಯ 'ಭಜರಂಗಿ-2' ಚಿತ್ರಗಳು ಮೊದಲು ಬರಬಹುದು.

  ದುನಿಯಾ ವಿಜಯ್ 'ಸಲಗ' ಬಿಡುಗಡೆಗೆ ಮುಹೂರ್ತ ನಿಗದಿದುನಿಯಾ ವಿಜಯ್ 'ಸಲಗ' ಬಿಡುಗಡೆಗೆ ಮುಹೂರ್ತ ನಿಗದಿ

  ರಿಲೀಸ್ ದಿನಾಂಕ ಪ್ರಕಟ

  ರಿಲೀಸ್ ದಿನಾಂಕ ಪ್ರಕಟ

  ಅದಾಗಲೇ ಶಿವಣ್ಣ ಮತ್ತು ದುನಿಯಾ ವಿಜಯ್ ಚಿತ್ರಗಳು ಬಿಡುಗಡೆ ದಿನಾಂಕ ಪ್ರಕಟಿಸಿದೆ. 'ಭಜರಂಗಿ-2' ಸಿನಿಮಾ ಆಗಸ್ಟ್ 10 ರಂದು ಚಿತ್ರಮಂದಿರಕ್ಕೆ ಬರಲಿದೆ. 'ಸಲಗ' ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಥಿಯೇಟರ್‌ಗೆ ಎಂಟ್ರಿ ಕೊಡಲಿದೆ. ಈ ಎರಡು ಚಿತ್ರಗಳ ನಂತರ ಸುದೀಪ್ ಸಿನಿಮಾನೂ ಬಿಡುಗಡೆಯಾಗಲು ಸಜ್ಜಾಗಿದೆ.

  100 ಪರ್ಸೆಂಟ್ ಅವಕಾಶ ಬೇಕಿದೆ

  100 ಪರ್ಸೆಂಟ್ ಅವಕಾಶ ಬೇಕಿದೆ

  ಕೊರೊನಾ ಭೀತಿ, 50 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ಇರುವುದರಿಂದ ಈ ಸಮಯದಲ್ಲಿ ಜನರು ಸಿನಿಮಾ ನೋಡೋಕೆ ಬರ್ತಾರಾ ಎಂಬ ಗೊಂದಲದಲ್ಲಿದ್ದಾರೆ ನಿರ್ಮಾಪಕರು. ಇನ್ನೆರಡು ವಾರ ಕಾದರೆ 100 ಪರ್ಸೆಂಟ್ ಅವಕಾಶ ಸಿಗಬಹುದು. ಅದಕ್ಕಾಗಿ ಸ್ಟಾರ್ ನಟರ ಸಿನಿಮಾಗಳು ಆಗಸ್ಟ್‌ವರೆಗೂ ಸಮಯ ತೆಗೆದುಕೊಂಡಿದ್ದಾರೆ.

  English summary
  Duniya Vijay starrer Salaga, Shiva rajkumar starrer Bhajarangi 2 and other some big movies to be released from August 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X