ಭವಿಷ್ಯದ ಸ್ಯಾಂಡಲ್ ವುಡ್ ಆಳುವ ಸ್ಟಾರ್ ನಟಿಯರ ಮಕ್ಕಳು ಇವರೇ.!

Recommended Video

ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾದ ನಟಿಯರ ಮಕ್ಕಳು

ಸ್ಯಾಂಡಲ್ ವುಡ್ ಚಿತ್ರ ಪ್ರಪಂಚಕ್ಕೆ ಸಾಕಷ್ಟು ಮಂದಿ ನಾಯಕಿಯರು ಬರ್ತಾರೆ, ಹೋಗ್ತಾರೆ. ಕೆಲವರು ಮಾತ್ರ ಅಭಿಮಾನಿಗಳ ಮನದಲ್ಲಿ ಗಟ್ಟಿಯಾಗಿ ನಿಲ್ತಾರೆ ಹಾಗೂ ದೀರ್ಘಕಾಲ ಚಿತ್ರರಂಗವನ್ನು ಆಳ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅನೇಕ ಯುವನಟಿಯರು ಚಂದನವನಕ್ಕೆ ಎಂಟ್ರಿಯಾಗಿದ್ದಾರೆ.

ಸಾಮಾನ್ಯ ನಟಿಯರ ಮಧ್ಯೆ ಸೆಲೆಬ್ರಿಟಿಗಳ ಮಕ್ಕಳು ಇಂಡಸ್ಟ್ರಿಗೆ ಬರ್ತಿರುವುದು ವಿಶೇಷ. ಈಗಷ್ಟೇ ಪ್ರಿಯಾಂಕಾ ಉಪೇಂದ್ರ ಅವರ ಮಗಳು ಸ್ಯಾಂಡಲ್ ವುಡ್ ಗೆ ಬಾಲನಟಿಯಾಗಿ ಎಂಟ್ರಿಯಾಗಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಅಮ್ಮನ ಜೊತೆ ತೆರೆಹಂಚಿಕೊಂಡಿರುವ ಪ್ರಿಯಾಂಕಾ ಮಗಳು, ಭವಿಷ್ಯದ ತಾರೆಯಾಗುವ ಸೂಚನೆ ಕೊಟ್ಟಿದ್ದಾರೆ.

ಕೇವಲ ಪ್ರಿಯಾಂಕ ಪುತ್ರಿಯಲ್ಲ ಅವರ ಜೊತೆಗೆ ಮತ್ತಷ್ಟು ನಟಿಯರ ಮಕ್ಕಳು ಇಂಡಸ್ಟ್ರಿಗೆ ಎಂಟ್ರಿ ಕೊಡುವ ಹಾದಿಯಲ್ಲಿದ್ದಾರೆ. ಹಾಗ್ನೋಡಿದ್ರೆ, ಸುಧಾರಾಣಿ, ಮಾಲಾಶ್ರೀ ಮಕ್ಕಳು ಕೂಡ ರೇಸ್ ನಲ್ಲಿದ್ದಾರೆ. ಇವರ ಜೊತೆ ಮತ್ಯಾವ ಸ್ಟಾರ್ ನಟಿಯರ ಮಕ್ಕಳು ಬೆಳ್ಳಿತೆರೆಗೆ ಬರುವ ಸಾಧ್ಯತೆ ಇದೆ ಎಂದು ತಿಳಿಯಲು ಮುಂದೆ ಓದಿ.....

ಬಾಲನಟಿಯಾಗಿ ಐಶ್ವರ್ಯ ಉಪೇಂದ್ರ ಎಂಟ್ರಿ

ಬಾಲನಟಿಯಾಗಿ ಐಶ್ವರ್ಯ ಉಪೇಂದ್ರ ಎಂಟ್ರಿ

ಪ್ರಿಯಾಂಕಾ ಉಪೇಂದ್ರ ಅವರ ಮಗಳು ಯಾವಾಗ ಬಣ್ಣ ಹಚ್ಚಬಹುದು ಅಂತ ಚಿತ್ರಾಭಿಮಾನಿಗಳು ಕಾಯುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದ್ದು, ಬಾಲನಟಿಯಾಗಿ ಪ್ರಿಯಾಂಕಾ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಿಯಾಂಕಾ ಅಭಿನಯದ 'ದೇವಕಿ' ಚಿತ್ರದ ಮೂಲಕ ಐಶ್ವರ್ಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಚೊಚ್ಚಲ ಚಿತ್ರದಲ್ಲೇ ಐಶ್ವರ್ಯ ಅಭಿಮಾನಿಗಳ ಮನಗೆದ್ದಿದ್ದಾರೆ.

ಸುಧಾರಾಣಿ ಮಗಳ ಸಿನಿ ಪಯಣದ ಬಗ್ಗೆ ಗೊತ್ತಾ?

ಸುಧಾರಾಣಿ ಮಗಳ ಸಿನಿ ಪಯಣದ ಬಗ್ಗೆ ಗೊತ್ತಾ?

ಒಂದು ಕಾಲದ ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಸುಧಾರಾಣಿ ಮಗಳು ನಿಧಿ ಸಹ ಚಿತ್ರರಂಗಕ್ಕೆ ಬರಲು ತಯಾರಾಗುತ್ತಿದ್ದಾರೆ ಎನ್ನಲಾಗಿದೆ. ಅಮ್ಮನ ಜೊತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ನಿಧಿ ಭವಿಷ್ಯ ತಾರೆಯಾಗುವ ಹಾದಿಯಲ್ಲಿದ್ದಾರೆ ಎನ್ನಬಹುದು. ಸದ್ಯದ ಮಾಹಿತಿ ಪ್ರಕಾರ ಜೋಗಿ ಪ್ರೇಮ್ ಅವರನ್ನ ಸುಧಾರಾಣಿ ಮಗಳನ್ನ ಪರಿಚಯ ಮಾಡಿಸಲಿದ್ದಾರೆ ಎನ್ನಲಾಗುತ್ತಿದೆ.

ರಕ್ಷಿತಾ ಸಹೋದರನ ಚಿತ್ರದಲ್ಲಿ ನಿಧಿ

ರಕ್ಷಿತಾ ಸಹೋದರನ ಚಿತ್ರದಲ್ಲಿ ನಿಧಿ

ನಟಿ ರಕ್ಷಿತಾ ಸಹೋದರ ಅಭಿಷೇಕ್ ಅವರನ್ನು ಚಿತ್ರರಂಗಕ್ಕೆ ಲಾಂಚ್ ಮಾಡುತ್ತಿರುವ ಪ್ರೇಮ್ ಅದೇ ಸಿನಿಮಾದಲ್ಲಿ ಅಭಿಷೇಕ್ ಗೆ ನಾಯಕಿಯಾಗಿ ನಿಧಿ ಅವರನ್ನ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇೆಳೆ ನಿಧಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಆದರೇ ಕನ್ನಡಕ್ಕೆ ಮತ್ತೋರ್ವ ನಾಯಕಿ ಸಿಕ್ಕಂತಾಗುತ್ತೆ.

ಗಾಯನದಲ್ಲಿ ಗಮನ ಸೆಳೆಯುತ್ತಿರುವ ಶ್ರುತಿ ಪುತ್ರಿ

ಗಾಯನದಲ್ಲಿ ಗಮನ ಸೆಳೆಯುತ್ತಿರುವ ಶ್ರುತಿ ಪುತ್ರಿ

ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಪುತ್ರಿ ಗೌರಿ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಗೌರಿ ಬಹುಶಃ ಗಾಯಕರಾಗಿ ಎಂಟ್ರಿಯಾಗಬಹುದು ಅಥವಾ ನಟಿಯಾಗಿ ಬರಬಹುದು.ಇತ್ತೀಚಿಗೆ ಹಾಡೊಂದನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಗೌರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಮಾಲಾಶ್ರೀ ಮಗಳ ಸಿನಿ ಪಯಣ ಯಾವಾಗ ?

ಮಾಲಾಶ್ರೀ ಮಗಳ ಸಿನಿ ಪಯಣ ಯಾವಾಗ ?

ನಟಿ ಮಾಲಾಶ್ರಿ ಅವರು ಪುತ್ರಿ ಅಷ್ಟಾಗಿ ಯಾರಿಗೂ ಪರಿಚಯವಿಲ್ಲ. ನಾಯಕಿಯಾಗುವಷ್ಟು ದೊಡ್ಡ ಮಗಳು ಮಾಲಾಶ್ರಿ ಅವರಿಗೆ ಇದ್ದಾರಾ ಎನ್ನುವುದೇ ಅನೇಕರಿಗೆ ಅಚ್ಚರಿ ಸಂಗತಿ. ಹೌದು, ಮಲಾಶ್ರೀ ಮಗಳು ಅನನ್ಯ ಕೂಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು ಕೊಡಬಹುದು. ಇದುವರೆಗೂ ಕೂಡ ಮಾಲಾಶ್ರೀ ತಮ್ಮ ಮಗಳ ಸಿನಿ ಎಂಟ್ರಿಯ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅನನ್ಯ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಅಚ್ಚರಿ ಇಲ್ಲ.

More from Filmibeat

English summary
Kannada star actress shruti daughter gowri, sudharani daughter nidhi, malashri daughter ananya will enter film industry in future?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X