Don't Miss!
- News
KCET2022ಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ
- Sports
IPL 2022: ಮುಕ್ತಾಯವಾದ ನಂತರ ತಂಡಗಳು ಮತ್ತು ಆಟಗಾರರಿಗೆ ಸಿಗಲಿರುವ ಪ್ರಶಸ್ತಿ ಮತ್ತು ಹಣವೆಷ್ಟು?
- Finance
Masked ಆಧಾರ್ ಕಾರ್ಡ್ ಎಂದರೇನು? Download ಮಾಡುವುದು ಹೇಗೆ?
- Automobiles
ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು
- Technology
ಪ್ರಸ್ತುತ ನೀವು ಖರೀದಿಸಬಹುದಾದ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
- Lifestyle
ಮೇ 29 ರಿಂದ ಜೂನ್ 4ರ ವಾರ ಭವಿಷ್ಯ: ಮಿಥುನ, ಸಿಂಹ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೂದಿ ಮುಚ್ಚಿದ ಕೆಂಡದಂತಿದೆ ಸ್ಟಾರ್‌ವಾರ್: ದರ್ಶನ್,ಸುದೀಪ್,ಯಶ್ ಒಂದಾಗೋದ್ಯಾವಾಗ?
ಕನ್ನಡ ಚಿತ್ರ ರಂಗದಲ್ಲಿ ಸ್ಟಾರ್ ನಟರು ಅಂತ ಬಂದಾಗ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದಾರೆ. ಹೀಗಿರೋವಾಗ ನಮ್ಮ ಹೀರೋಗಳ ನಡುವೆ ಸಾಕಷ್ಟು ಹೊಂದಾಣಿಕೆ ಇರುವುದು ಅನುಮಾನವೇನಲ್ಲ. ಆದರೆ ಹೊಂದಾಣಿಕೆ ಅಥವಾ ಎಲ್ಲರೂ ಒಂದೇ ಎನ್ನುದಕ್ಕಿಂದ ಹೆಚ್ಚಾಗಿ ಸ್ಟಾರ್ ವಾರ್ ಸದಾ ಸದ್ದು ಮಾಡುತ್ತದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ವಾರ್ ಕಣ್ಣಿಗೆ ಕಂಡರು, ಕಾಣದಂತೆ ಇದೆಯಾ ಎನ್ನುವ ಅನುಮಾನ ಮೂಡಿದೆ.
ಸ್ಟಾರ್‌ವಾರ್ ಬಗ್ಗೆ ಈಗ ಮಾತನಾಡಲು ಕಾರಣ ನಟ ರಾಕಿಂಗ್ ಸ್ಟಾರ್ ಯಶ್. ಯಶ್ ಅವರ ಹುಟ್ಟುಹಬ್ಬ ಮತ್ತು ಕೆಜಿಎಫ್2 ಚಿತ್ರ. ಹೌದು ನೀವು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತೆ. ಯಶ್ ಅವರು ಜನವರಿ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರಿಗೆ ಕನ್ನಡದ ಹಲವು ತಾರೆಯರು, ನಟ, ನಟಿಯರು ಶುಭಕೋರಿದ್ದಾರೆ. ಅಲ್ಲಿ ಮಿಸ್ ಆಗಿದ್ದು ಮಾತ್ರ ಸ್ಟಾರ್ ನಟರ ಶುಭಾಶಯಗಳು.
ಹೌದು ಯಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬಕ್ಕೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಆದರೆ ನಟ ಕಿಚ್ಚ ಸುದೀಪ್, ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಯಶ್‌ಗಾಗಲಿ, ಕೆಜಿಎಫ್ ಚಿತ್ರಕ್ಕಾಗಲಿ ಶುಭ ಕೋರಿಲ್ಲ.

ಜೊತೆಯಾಗಿ ಇಲ್ಲವಾ ಜೋಡೆತ್ತುಗಳು!
ನಟ ದರ್ಶನ್ ಮತ್ತು ಯಶ್ ಕನ್ನಡದಲ್ಲಿ ಜೋಡೆತ್ತುಗಳು ಎಂದೆ ಫೇಮಸ್. ಅವರಿಬ್ಬರು ಜೊತೆಯಾಗಿ ಕಣಕ್ಕಿಳಿದರೆ ಸೋಲಿಲ್ಲ ಎನ್ನುವುದನ್ನು ಮಂಡ್ಯ ಎಲೆಕ್ಷನ್‌ನಲ್ಲಿ ತೋರಿಸಿ ಕೊಟ್ಟಿದ್ದಾರೆ. ಆದರೆ ಆ ಬಳಿಕ ಇವರು ಜೋಡೆತ್ತುಗಳಾಗಿ ಜೊತೆಯಲ್ಲೇ ಇದ್ದಾರೆ ಎನ್ನಲಾಗಿತ್ತು. ಆದರೆ ಅದು ಸತ್ಯಕ್ಕೆ ದೂರವಾದದ್ದು ಎನ್ನುವುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ನಟ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಆದರೆ ಯಶ್ ಹುಟ್ಟು ಹಬ್ಬಕ್ಕೆ ಅವರ ಕಡೆಯಿಂದ ಯಾವುದೇ ಸಂದೇಶ ರವಾನೆ ಆಗಿಲ್ಲ ಎನ್ನುವುದು ಗಮನಾರ್ಹ.

ಯಶ್ ದರ್ಶನ್, ಯಶ್ ಸುದೀಪ್, ದರ್ಶನ್ ಸುದೀಪ್ ನಡುವೆ ಎಲ್ಲವೂ ಸರಿ ಇಲ್ವಾ?
ಇನ್ನು ನಟ ಸುದೀಪ್ ಮತ್ತು ಯಶ್ ನಡುವೆ ಇರುವ ಸ್ಟಾರ್ ವಾರ್ ಬಹಿರಂಗ ಆಗಿದೆ. ಈ ಹಿಂದೆ ಯಶ್ ವರ್ಕೌಟ್ ಚಾಲೆಂಗ್ ವಿಡಿಯೋದಲ್ಲಿ ಸುದೀಪ್ ಅವರಿಗೆ ಏಕವಚನದಲ್ಲಿ ಕರೆದಿದ್ದು ಶಾಕಿಂಗ್ ಆಗಿತ್ತು. ಆಗಲೇ ಇವರ ನಡುವಿನ ಕೋಲ್ಡ್‌ವಾರ್ ಬಗ್ಗೆ ಜಗತ್ತಿಗೆ ಗೊತ್ತಾಗಿದ್ದು. ಇನ್ನು ಯಾವುದೇ ವಿಚಾರ ಬಂದರು ಕೂಡ ಇಬ್ಬರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಾರ್‌ಗೆ ಇಳಿದು ಬಿಡುತ್ತಾರೆ. ಯಶ್ ಹುಟ್ಟು ಹಬ್ಬದಂದು ಕೂಡ ಯಾರು ಹೆಚ್ಚು, ಯಾರು ಕಡಿಮೆ ಎನ್ನುವ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಕಾಳಗಕ್ಕೆ ಇಳಿದು ಬಿಟ್ಟಿದ್ದರು.

ಅಪ್ಪು ನಿಧನದ ಬಳಿಕ ಬದಲಾದಂತೆ ಕಾಣುತ್ತಿದ್ದ ಚಿತ್ರಣ!
ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಜಾತ ಶತ್ರು. ಆತನನ್ನು ದ್ವೇಷ ಮಾಡುವವರು ಸಿಗುವುದು ಕಷ್ಟ ಎನಿಸುತ್ತೆ. ಅಪ್ಪು ಅವರ ಅಚಾನಕ್ ನಿಧನ ಚಿತ್ರರಂಗದ ಮಂದಿಗೆ ದೊಡ್ಡ ಪಾಠ ಕಲಿಸಿದಂತೆ ಕಾಣುತ್ತಿತ್ತು. ಅಂದರೆ ಯಾವುದು ಶಾಶ್ವತ ಅಲ್ಲ. ಮಾಡಿದ ಒಳ್ಳೆಯ ಕೆಲಸಗಳು, ಗಳಿಸಿದ ಪ್ರೀತಿ, ವಿಶ್ವಾಸ ಮಾತ್ರ ಜೊತೆಯಲ್ಲಿ ಬರುತ್ತವೆ ಎನ್ನುವುದನ್ನು ಅಪ್ಪು ಸಾಬೀತು ಮಾಡಿದರು. ಹಾಗಾಗಿ ಇನ್ನು ಈ ಇನ್ನು ಸ್ಟಾರ್ ವಾರ್, ಕೋಲ್ಡ್ ವಾರ್, ಫ್ಯಾನ್ ವಾರ್ ಎಲ್ಲ ಇರುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಆದರೆ ಅದು ಸಾಧ್ಯವಾದಂತೆ ಕಾಣುತ್ತಿಲ್ಲ.

ದರ್ಶನ್, ಸುದೀಪ್, ಯಶ್ ಯಾವಾಗ ಒಟ್ಟಿಗೆ ನಿಲ್ಲುತ್ತಾರೆ?
ಇನ್ನು ಇತ್ತೀಚೆಗೆ ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಸಾಥ್ ನೀಡುವುದು. ಚಿತ್ರಗಳ ಪರವಾಗಿ ಪ್ರಚಾರ ಮಾಡುವುದು, ರಿಲೀಸ್ ವೇಳೆ ಜೊತೆಯಲ್ಲಿ ನಿಲ್ಲುವುದು ಹೆಚ್ಚಾಗಿ ಕಂಡು ಬರುತ್ತಿದೆ. ಬಹುತೇಕ ಚಿತ್ರ ಕಾರ್ಯಕ್ರಮಗಳಲ್ಲಿ ನಟ ಶಿವರಾಜ್‌ಕುಮಾರ್ ಅವರು ಹಾಜರಿರುತ್ತಾರೆ. ಅವರು ಎಲ್ಲರಿಗೂ ದೊಡ್ಡಣ್ಣನಂತೆ. ದರ್ಶನ್, ಯಶ್, ಸುದೀಪ್ ಜೊತೆಯಲ್ಲಿ ಶಿವರಾಜ್‌ಕುಮಾರ್ ಸದಾ ಕಾಣಿಸಿಕೊಳ್ಳುತ್ತಾರೆ. ಆದರೆ ಸದ್ಯಕ್ಕೆ ಆಗ ಬೇಕಿರುವುದು ಒಂದೆ. ನಟ ದರ್ಶನ್, ಸುದೀಪ್ ಮತ್ತು ಯಶ್ ಮೂವರು ಒಂದಾಗಿ ಒಟ್ಟಿಗೆ ಬರುವುದು. ಇದು ಸಾಧ್ಯವಾದರೆ ಸ್ಯಾಂಡಲ್‌ವುಡ್ ಸಾಧನೆಯಲ್ಲಿ ಮತ್ತೊಂದು ಹಂತ ತಲುಪಲಿದೆ. ಇದು ಅವರವರ ವೈಯಕ್ತಿಕ ಆದರೂ ಕೂಡ, ತಮ್ಮನ್ನು ಫಾಲೋ ಮಾಡುವವರಿಗೆ ಆದರ್ಶ ವ್ಯಕ್ತಿತ್ವಗಳಾಗಿ ನಿಲ್ಲುವುದು ಅಷ್ಟೇ ಮುಖ್ಯ.