ಈ ವರ್ಷ ಸಪ್ತಪದಿ ತುಳಿದ ಪರಭಾಷಾ ಕಲಾವಿದರು ಯಾರು?

By Bharath Kumar

ಈ ವರ್ಷ ಹಲವು ಸಿನಿಮಾ ತಾರೆಯರಿಗೆ ಕಂಕಣ ಭಾಗ್ಯ ಸಿಕ್ಕಿತ್ತು. ಕನ್ನಡದಲ್ಲಿ ಸುಮಾರು 15 ಜೋಡಿಗಳು 2017 ರಲ್ಲಿ ವಿವಾಹವಾಗಿದ್ದರು. ಆದ್ರೆ, ಪರಭಾಷೆಯಲ್ಲಿ ಮದುವೆ ಆದವರ ಸಂಖ್ಯೆ ತೀರಾ ಕಡಿಮೆ ಇದೆ. ಸಿನಿಮಾ, ಗಾಸಿಪ್, ಅಫೇರ್, ಹೀಗೆ ಬೇರೆ ಬೇರೆ ವಿಚಾರಗಳ ಮಧ್ಯೆ ಶಾಸ್ತ್ರೋಸ್ತ್ರವಾಗಿ ಸಪ್ತಪದಿ ತುಳಿದವರು ಕೆಲವೇ ಜೋಡಿ.

ತಮಿಳಿನಲ್ಲಿ ಒಬ್ಬರು, ತೆಲುಗಿನಲ್ಲಿ ಒಬ್ಬರು, ಹಿಂದಿ ಇಂಡಸ್ಟ್ರಿಯಲ್ಲಿ ಒಬ್ಬರು ಹಾಗೂ ಬಹುಭಾಷಾ ನಟಿಯೊಬ್ಬರು ಈ ವರ್ಷ ದಾಂಪತ್ಯ ಆರಂಭಿಸಿದ್ದಾರೆ.

ಈಗಾಗಲೇ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್‌ ಸ್ಟಾರ್ ನಟ ನಟಿಯರು ಯಾರು ಎಂದು ಹೇಳಿದ್ವಿ. ಈಗ ಪರಭಾಷೆಯ ಯಾವೆಲ್ಲಾ ಕಲಾವಿದರು ಸಪ್ತಪದಿ ತುಳಿದ್ರು ಎನ್ನುವ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅವರ ಪಟ್ಟಿ ಇಲ್ಲಿದೆ ನೋಡಿ.

ವಿಕ್ರಮ್ ಮಗಳ ಮದುವೆ

ವಿಕ್ರಮ್ ಮಗಳ ಮದುವೆ

ತಮಿಳು ಸ್ಟಾರ್ ನಟ ವಿಕ್ರಮ್ ಅವರ ಮಗಳ ಮದುವೆ ಅಕ್ಟೋಬರ್ 30 ರಂದು ಬೆಳಿಗ್ಗೆ ಸಂಪ್ರದಾಯವಾಗಿ ನೆರವೇರಿತ್ತು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿ.ಎಂ.ಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರ ಮರಿ ಮೊಮ್ಮಗ ಮನು ರಂಜಿತ್ ಜೊತೆ ವಿಕ್ರಮ್ ಮಗಳು ಅಕ್ಷಿತಾ ಸಪ್ತಪದಿ ತುಳಿದು ಹೊಸ ಜೀವನ ಆರಂಭಿಸಿದ್ದಾರೆ.

ಸಮಂತಾ-ನಾಗಚೈತನ್ಯ ವಿವಾಹ

ಸಮಂತಾ-ನಾಗಚೈತನ್ಯ ವಿವಾಹ

ಟಾಲಿವುಡ್ ತಾರಾಜೋಡಿ ಅಕ್ಕಿನೇನಿ ನಾಗಚೈತನ್ಯ ಮತ್ತು ಸಮಂತಾ ಮದುವೆಗೆ 2017 ಸಾಕ್ಷಿಯಾಗಿತ್ತು. ಅಕ್ಟೋಬರ್ 7 ರಂದು ಗೋವಾದ ಕಡಲತೀರಾದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಇವರಿಬ್ಬರ ಮದುವೆ ಜರುಗಿತು.

ರಿಯಾ ಸೇನ್ ಕಲ್ಯಾಣ

ರಿಯಾ ಸೇನ್ ಕಲ್ಯಾಣ

ಬಾಲಿವುಡ್ ನಟಿ ರಿಯಾ ಸೇನ್ ತಮ್ಮ ಗೆಳೆಯ ಶಿವಂ ತೆವಾರಿ ಅವರೊಂದಿಗೆ ಆಗಸ್ಟ್ ತಿಂಗಳಲ್ಲಿ ಮದುವೆಯಾದರು.

ಸಪ್ತಪದಿ ತುಳಿದ ನಮಿತಾ

ಸಪ್ತಪದಿ ತುಳಿದ ನಮಿತಾ

ಬಹುಭಾಷಾ ತಾರೆ ನಮಿತಾ ನವೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುಪತಿ ತಿಮ್ಮಪ್ಪನ ಆಶೀರ್ವಾದದೊಂದಿಗೆ ನಟಿ ನಮಿತಾ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದು, ತಮ್ಮ ಗೆಳೆಯ ವೀರೇಂದ್ರ ಜೊತೆ ಹಸೆಮಣೆ ಏರಿದ್ದಾರೆ.

More from Filmibeat

English summary
stars marriage in hindi, telugu, tamil and malayalam industry at 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X