ಮುಂದಿನ ವರ್ಷ 'ಇವರೆಲ್ಲ'ರೂ ಮದುವೆ ಊಟ ಹಾಕಿಸೋದು ಗ್ಯಾರೆಂಟಿ.!

ಕಣ್ಮುಚ್ಚಿ ಕಣ್ತೆರೆಯುವುದರೊಳಗೆ 2018ರ ಅಂತ್ಯಕ್ಕೆ ಬಂದೇ ಬಿಟ್ಟಿದ್ದೇವೆ. 2019ರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ, 2018ರಲ್ಲಿ ಏನೇನಾಯಿತು ಎಂಬುದರ ಬಗ್ಗೆ ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ನೋಡಿದರೇನೇ ಚೆನ್ನ.

ಈ ವರ್ಷವನ್ನು ರಿವೈಂಡ್ ಮಾಡಿದಾಗ, ಹಲವು ಹಿಟ್ ಸಿನಿಮಾಗಳು ನಿಮ್ಮ ಕಣ್ಣ ಮುಂದೆ ಬರುತ್ತೆ. ಹಾಗೇ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ನಿಮಗೆ ಥಟ್ ಅಂತ ನೆನಪಾಗುತ್ತಾರೆ.

ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್, ಸೋನಂ ಕಪೂರ್-ಆನಂದ್ ಅಹುಜಾ, ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್, ಚಿರಂಜೀವಿ ಸರ್ಜಾ-ಮೇಘನಾ, ದಿಗಂತ್-ಐಂದ್ರಿತಾ ರೇ ಸೇರಿದಂತೆ ಹಲವು ತಾರೆಯರು ಈ ವರ್ಷ ಮದುವೆ ಆದರು. ಇನ್ನೂ ಈ ವರ್ಷ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡು ಗೃಹಸ್ಥಾಶ್ರಮಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ತಾರೆಯರ ಪಟ್ಟಿಯೇನೂ ಕಮ್ಮಿ ಇಲ್ಲ.

2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ವೇಯ್ಟಿಂಗ್ ಲಿಸ್ಟ್ ನಲ್ಲಿರುವ ತಾರೆಯರು ಇವರುಗಳೇ ನೋಡಿರಿ...

ಪ್ರತೀಕ್ ಬಬ್ಬರ್

ಪ್ರತೀಕ್ ಬಬ್ಬರ್

ಬಾಲಿವುಡ್ ನ ಖ್ಯಾತ ನಟ ರಾಜ್ ಬಬ್ಬರ್ ಹಾಗೂ ಖ್ಯಾತ ನಟಿ ಸ್ಮಿತಾ ಪಾಟೀಲ್ ರವರ ಪುತ್ರ ಪ್ರತೀಕ್ ಬಬ್ಬರ್ ನಿಶ್ಚಿತಾರ್ಥ ಲಕ್ನೋದಲ್ಲಿ ನಡೆಯಿತು. ತಮ್ಮ ದೀರ್ಘ ಕಾಲದ ಗೆಳತಿ ಸಾನ್ಯ ಸಾಗರ್ ಜೊತೆ ಪ್ರತೀಕ್ ಬಬ್ಬರ್ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡರು.

ರೇಣು ದೇಸಾಯಿ

ರೇಣು ದೇಸಾಯಿ

ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೇ ವರ್ಷ. ತಮ್ಮ ನಿಶ್ಚಿತಾರ್ಥದ ಫೋಟೋವನ್ನ ರೇಣು ದೇಸಾಯಿ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

ಯುವರಾಜ್ ಕುಮಾರ್

ಯುವರಾಜ್ ಕುಮಾರ್

ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ನಿಶ್ಚಿತಾರ್ಥ ಜುಲೈ ತಿಂಗಳಲ್ಲಿ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನಡೆದಿದ್ದು, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ಡಾ.ರಾಜ್ ಕುಟುಂಬ ನಿಶ್ಚಿತಾರ್ಥಕ್ಕೆ ಸಾಕ್ಷಿ ಆದರು. ಯುವರಾಜ್ ಕುಮಾರ್-ಶ್ರೀದೇವಿ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

ನೇಹಾ ಪಾಟೀಲ್

ನೇಹಾ ಪಾಟೀಲ್

ಅಕ್ಟೋಬರ್ 19 ರಂದು ಕನ್ನಡ ನಟಿ ಹುಬ್ಬಳ್ಳಿ ಮೂಲದ ನೇಹಾ ಪಾಟೀಲ್ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಬೆಂಗಳೂರಿನ ಎಂಜಿನಿಯರ್ ಪ್ರಣವ್ ಜೊತೆಗೆ ನೇಹಾ ಪಾಟೀಲ್ ಮದುವೆ ನಿಶ್ಚಯ ಆಗಿದೆ. 2019 ರ ಫೆಬ್ರವರಿಯಲ್ಲಿ ನೇಹಾ ಪಾಟೀಲ್-ಪ್ರಣವ್ ಸಪ್ತಪದಿ ತುಳಿಯಲಿದ್ದಾರೆ.

'ಬಹದ್ದೂರ್' ಹುಡುಗ ಧ್ರುವ ಸರ್ಜಾ

'ಬಹದ್ದೂರ್' ಹುಡುಗ ಧ್ರುವ ಸರ್ಜಾ

ನಟ ಅರ್ಜುನ್ ಸರ್ಜಾ ರವರ ಸೋದರಳಿಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ನಿಶ್ಚಿತಾರ್ಥ ಡಿಸೆಂಬರ್ 9 ರಂದು ಸಂಪ್ರದಾಯ ಬದ್ಧವಾಗಿ ನೆರವೇರಿತು. ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಕುಟುಂಬ, ಬಂಧು-ಮಿತ್ರರ ಸುಮ್ಮಖದಲ್ಲಿ ಬಾಲ್ಯದ ಗೆಳತಿ ಪ್ರೇರಣಾಗೆ ಧ್ರುವ ಸರ್ಜಾ ಉಂಗುರ ತೊಡಿಸಿದರು. ಇನ್ನೊಂದು ವರ್ಷದಲ್ಲಿ ಧ್ರುವ ಸರ್ಜಾ-ಪ್ರೇರಣಾ ಮದುವೆ ನಡೆಯಲಿದೆ.

ಸಿಸಿಎಲ್ ಆಟಗಾರ ರಾಜೀವ್

ಸಿಸಿಎಲ್ ಆಟಗಾರ ರಾಜೀವ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟೂರ್ನಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಆಟಗಾರ ಹಾಗೂ ನಟ ರಾಜೀವ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬೆಂಗಳೂರು ಮೂಲದ ರೇಷ್ಮಾ ಎಂಬುವರ ಜೊತೆ ರಾಜೀವ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸ್ಯಾಂಡಲ್ ವುಡ್ ಇಂಡಸ್ಟ್ರಿಯ ತಾರೆಯರು ವಿಶ್ ಮಾಡಿದ್ದಾರೆ.

ರಾಜಮೌಳಿ ಪುತ್ರ ಕಾರ್ತಿಕೇಯ

ರಾಜಮೌಳಿ ಪುತ್ರ ಕಾರ್ತಿಕೇಯ

ಟಾಲಿವುಡ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಪುತ್ರ ಕಾರ್ತಿಕೇಯ ಸ್ಟಾರ್ ನಟನ ಕುಟುಂಬಕ್ಕೆ ಅಳಿಯನಾಗುತ್ತಿದ್ದಾರೆ. ನಟ ಜಗಪತಿ ಬಾಬು ಅವರ ಸಹೋದರನ ಪುತ್ರಿ ಪೂಜಾ ಪ್ರಸಾದ್ ಜೊತೆಗೆ ಕಾರ್ತಿಕೇಯ ನಿಶ್ಚಿತಾರ್ಥ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಿತು.

More from Filmibeat

English summary
Here, is the detailed report of the Stars of Indian Cinema who got engaged in 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X