twitter
    For Quick Alerts
    ALLOW NOTIFICATIONS  
    For Daily Alerts

    ಮುಂದಿನ ವರ್ಷ 'ಇವರೆಲ್ಲ'ರೂ ಮದುವೆ ಊಟ ಹಾಕಿಸೋದು ಗ್ಯಾರೆಂಟಿ.!

    |

    ಕಣ್ಮುಚ್ಚಿ ಕಣ್ತೆರೆಯುವುದರೊಳಗೆ 2018ರ ಅಂತ್ಯಕ್ಕೆ ಬಂದೇ ಬಿಟ್ಟಿದ್ದೇವೆ. 2019ರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ, 2018ರಲ್ಲಿ ಏನೇನಾಯಿತು ಎಂಬುದರ ಬಗ್ಗೆ ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ನೋಡಿದರೇನೇ ಚೆನ್ನ.

    ಈ ವರ್ಷವನ್ನು ರಿವೈಂಡ್ ಮಾಡಿದಾಗ, ಹಲವು ಹಿಟ್ ಸಿನಿಮಾಗಳು ನಿಮ್ಮ ಕಣ್ಣ ಮುಂದೆ ಬರುತ್ತೆ. ಹಾಗೇ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ನಿಮಗೆ ಥಟ್ ಅಂತ ನೆನಪಾಗುತ್ತಾರೆ.

    ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್, ಸೋನಂ ಕಪೂರ್-ಆನಂದ್ ಅಹುಜಾ, ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್, ಚಿರಂಜೀವಿ ಸರ್ಜಾ-ಮೇಘನಾ, ದಿಗಂತ್-ಐಂದ್ರಿತಾ ರೇ ಸೇರಿದಂತೆ ಹಲವು ತಾರೆಯರು ಈ ವರ್ಷ ಮದುವೆ ಆದರು. ಇನ್ನೂ ಈ ವರ್ಷ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡು ಗೃಹಸ್ಥಾಶ್ರಮಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ತಾರೆಯರ ಪಟ್ಟಿಯೇನೂ ಕಮ್ಮಿ ಇಲ್ಲ.

    2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ವೇಯ್ಟಿಂಗ್ ಲಿಸ್ಟ್ ನಲ್ಲಿರುವ ತಾರೆಯರು ಇವರುಗಳೇ ನೋಡಿರಿ...

    ಪ್ರತೀಕ್ ಬಬ್ಬರ್

    ಪ್ರತೀಕ್ ಬಬ್ಬರ್

    ಬಾಲಿವುಡ್ ನ ಖ್ಯಾತ ನಟ ರಾಜ್ ಬಬ್ಬರ್ ಹಾಗೂ ಖ್ಯಾತ ನಟಿ ಸ್ಮಿತಾ ಪಾಟೀಲ್ ರವರ ಪುತ್ರ ಪ್ರತೀಕ್ ಬಬ್ಬರ್ ನಿಶ್ಚಿತಾರ್ಥ ಲಕ್ನೋದಲ್ಲಿ ನಡೆಯಿತು. ತಮ್ಮ ದೀರ್ಘ ಕಾಲದ ಗೆಳತಿ ಸಾನ್ಯ ಸಾಗರ್ ಜೊತೆ ಪ್ರತೀಕ್ ಬಬ್ಬರ್ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡರು.

    ಉಂಗುರ ಬದಲಿಸಿಕೊಂಡ ಬಾಲಿವುಡ್ ನಟ ಪ್ರತೀಕ್ ಬಬ್ಬರ್ಉಂಗುರ ಬದಲಿಸಿಕೊಂಡ ಬಾಲಿವುಡ್ ನಟ ಪ್ರತೀಕ್ ಬಬ್ಬರ್

    ರೇಣು ದೇಸಾಯಿ

    ರೇಣು ದೇಸಾಯಿ

    ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೇ ವರ್ಷ. ತಮ್ಮ ನಿಶ್ಚಿತಾರ್ಥದ ಫೋಟೋವನ್ನ ರೇಣು ದೇಸಾಯಿ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

    ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಎರಡನೇ ಮದುವೆ.! ಫೋಟೋ ವೈರಲ್ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಎರಡನೇ ಮದುವೆ.! ಫೋಟೋ ವೈರಲ್

    ಯುವರಾಜ್ ಕುಮಾರ್

    ಯುವರಾಜ್ ಕುಮಾರ್

    ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಅವರ ನಿಶ್ಚಿತಾರ್ಥ ಜುಲೈ ತಿಂಗಳಲ್ಲಿ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನಡೆದಿದ್ದು, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ಡಾ.ರಾಜ್ ಕುಟುಂಬ ನಿಶ್ಚಿತಾರ್ಥಕ್ಕೆ ಸಾಕ್ಷಿ ಆದರು. ಯುವರಾಜ್ ಕುಮಾರ್-ಶ್ರೀದೇವಿ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

    ಉಂಗುರ ಬದಲಾಯಿಸಿಕೊಂಡ ಯುವರಾಜ್ ಕುಮಾರ್-ಶ್ರೀದೇವಿಉಂಗುರ ಬದಲಾಯಿಸಿಕೊಂಡ ಯುವರಾಜ್ ಕುಮಾರ್-ಶ್ರೀದೇವಿ

    ನೇಹಾ ಪಾಟೀಲ್

    ನೇಹಾ ಪಾಟೀಲ್

    ಅಕ್ಟೋಬರ್ 19 ರಂದು ಕನ್ನಡ ನಟಿ ಹುಬ್ಬಳ್ಳಿ ಮೂಲದ ನೇಹಾ ಪಾಟೀಲ್ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಬೆಂಗಳೂರಿನ ಎಂಜಿನಿಯರ್ ಪ್ರಣವ್ ಜೊತೆಗೆ ನೇಹಾ ಪಾಟೀಲ್ ಮದುವೆ ನಿಶ್ಚಯ ಆಗಿದೆ. 2019 ರ ಫೆಬ್ರವರಿಯಲ್ಲಿ ನೇಹಾ ಪಾಟೀಲ್-ಪ್ರಣವ್ ಸಪ್ತಪದಿ ತುಳಿಯಲಿದ್ದಾರೆ.

    ನಟಿ ನೇಹಾ ಪಾಟೀಲ್ ಗೆ ಕೂಡಿ ಬಂತು ಕಂಕಣ ಬಲನಟಿ ನೇಹಾ ಪಾಟೀಲ್ ಗೆ ಕೂಡಿ ಬಂತು ಕಂಕಣ ಬಲ

    'ಬಹದ್ದೂರ್' ಹುಡುಗ ಧ್ರುವ ಸರ್ಜಾ

    'ಬಹದ್ದೂರ್' ಹುಡುಗ ಧ್ರುವ ಸರ್ಜಾ

    ನಟ ಅರ್ಜುನ್ ಸರ್ಜಾ ರವರ ಸೋದರಳಿಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ನಿಶ್ಚಿತಾರ್ಥ ಡಿಸೆಂಬರ್ 9 ರಂದು ಸಂಪ್ರದಾಯ ಬದ್ಧವಾಗಿ ನೆರವೇರಿತು. ಬನಶಂಕರಿಯ ಧರ್ಮಗಿರಿ ದೇವಸ್ಥಾನದಲ್ಲಿ ಕುಟುಂಬ, ಬಂಧು-ಮಿತ್ರರ ಸುಮ್ಮಖದಲ್ಲಿ ಬಾಲ್ಯದ ಗೆಳತಿ ಪ್ರೇರಣಾಗೆ ಧ್ರುವ ಸರ್ಜಾ ಉಂಗುರ ತೊಡಿಸಿದರು. ಇನ್ನೊಂದು ವರ್ಷದಲ್ಲಿ ಧ್ರುವ ಸರ್ಜಾ-ಪ್ರೇರಣಾ ಮದುವೆ ನಡೆಯಲಿದೆ.

    'ಅದ್ಧೂರಿ'ಯಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಭರ್ಜರಿ' ಹುಡುಗ'ಅದ್ಧೂರಿ'ಯಾಗಿ ನಿಶ್ಚಿತಾರ್ಥ ಮಾಡಿಕೊಂಡ 'ಭರ್ಜರಿ' ಹುಡುಗ

    ಸಿಸಿಎಲ್ ಆಟಗಾರ ರಾಜೀವ್

    ಸಿಸಿಎಲ್ ಆಟಗಾರ ರಾಜೀವ್

    ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟೂರ್ನಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಆಟಗಾರ ಹಾಗೂ ನಟ ರಾಜೀವ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬೆಂಗಳೂರು ಮೂಲದ ರೇಷ್ಮಾ ಎಂಬುವರ ಜೊತೆ ರಾಜೀವ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸ್ಯಾಂಡಲ್ ವುಡ್ ಇಂಡಸ್ಟ್ರಿಯ ತಾರೆಯರು ವಿಶ್ ಮಾಡಿದ್ದಾರೆ.

    ದಾಂಪತ್ಯ ಜೀವನಕ್ಕೆ ಸಜ್ಜಾದ ಸಿಸಿಎಲ್ ಆಟಗಾರ ರಾಜೀವ್, ನಿಶ್ಚಿತಾರ್ಥ ಆಯ್ತು.!ದಾಂಪತ್ಯ ಜೀವನಕ್ಕೆ ಸಜ್ಜಾದ ಸಿಸಿಎಲ್ ಆಟಗಾರ ರಾಜೀವ್, ನಿಶ್ಚಿತಾರ್ಥ ಆಯ್ತು.!

    ರಾಜಮೌಳಿ ಪುತ್ರ ಕಾರ್ತಿಕೇಯ

    ರಾಜಮೌಳಿ ಪುತ್ರ ಕಾರ್ತಿಕೇಯ

    ಟಾಲಿವುಡ್ ನಿರ್ದೇಶಕ ಎಸ್.ಎಸ್.ರಾಜಮೌಳಿ ಪುತ್ರ ಕಾರ್ತಿಕೇಯ ಸ್ಟಾರ್ ನಟನ ಕುಟುಂಬಕ್ಕೆ ಅಳಿಯನಾಗುತ್ತಿದ್ದಾರೆ. ನಟ ಜಗಪತಿ ಬಾಬು ಅವರ ಸಹೋದರನ ಪುತ್ರಿ ಪೂಜಾ ಪ್ರಸಾದ್ ಜೊತೆಗೆ ಕಾರ್ತಿಕೇಯ ನಿಶ್ಚಿತಾರ್ಥ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಿತು.

    ಸ್ಟಾರ್ ನಟನ ಮಗಳ ಜೊತೆ ರಾಜಮೌಳಿ ಮಗನ ಮದುವೆಸ್ಟಾರ್ ನಟನ ಮಗಳ ಜೊತೆ ರಾಜಮೌಳಿ ಮಗನ ಮದುವೆ

    English summary
    Here, is the detailed report of the Stars of Indian Cinema who got engaged in 2018.
    Monday, December 17, 2018, 18:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X