For Quick Alerts
  ALLOW NOTIFICATIONS  
  For Daily Alerts

  2015 ರಾಜ್ಯ ಪ್ರಶಸ್ತಿ; ವಿಜಯ್ ರಾಘವೇಂದ್ರ ಮತ್ತು ಮಾಲಾಶ್ರೀ 'ಬೆಸ್ಟ್'.!

  By Harshitha
  |

  2015ನೇ ಸಾಲಿನ ಪ್ರತಿಷ್ಟಿತ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು (ಮೇ 17) ಘೋಷಣೆಯಾಗಿದೆ. ನಟ ವಿಜಯ್ ರಾಘವೇಂದ್ರ ಶ್ರೇಷ್ಠ ನಟ ಹಾಗೂ 'ಕನಸಿನ ರಾಣಿ' ಮಾಲಾಶ್ರೀ ಶ್ರೇಷ್ಠ ನಟಿ ಪ್ರಶಸ್ತಿ ಗೆದ್ದಿದ್ದಾರೆ.

  ಸುಮಾರು 50ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿದ ನಿರ್ದೇಶಕ ನಾಗಣ್ಣ ನೇತೃತ್ವದ ಆಯ್ಕೆದಾರರ ಸಮಿತಿ ತನ್ನ ಶಿಫಾರಸ್ಸನ್ನು ವಾರ್ತಾ ಸಚಿವ ರೋಷನ್ ಬೇಗ್ ಅವರಿಗೆ ಹಸ್ತಾಂತರಿಸಿದ ಬಳಿಕ ಇವತ್ತು ರಾಜ್ಯ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದೆ.

  ಪ್ರಶಸ್ತಿ ವಿಜೇತರ ಪಟ್ಟಿ:

  * ಪ್ರಥಮ ಅತ್ಯುತ್ತಮ ಚಿತ್ರ - ತಿಥಿ
  * ದ್ವಿತೀಯ ಅತ್ಯುತ್ತಮ ಚಿತ್ರ - ಮಾರಿಕೊಂಡವರು
  * ತೃತೀಯ ಅತ್ಯುತ್ತಮ ಚಿತ್ರ - ಮೈತ್ರಿ

  * ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಶಿವಯೋಗಿ ಶ್ರೀ ಪುಟ್ಟಯ್ಯಜ್ಜ
  * ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ಕೃಷ್ಣಲೀಲಾ
  * ಅತ್ಯುತ್ತಮ ಮಕ್ಕಳ ಚಿತ್ರ - ಮನೆ ಮೊದಲ ಪಾಠಶಾಲೆ

  * ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ - ರಂಗಿತರಂಗ
  * ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಪ್ರಶಸ್ತಿ - ತಳಂಗ ನೀರ್ (ಕೊಡವ ಭಾಷೆ)

  * ಅತ್ಯುತ್ತಮ ನಟ - ವಿಜಯ ರಾಘವೇಂದ್ರ (ಚಿತ್ರ: ಶಿವಯೋಗಿ ಶ್ರೀ ಪುಟ್ಟಯ್ಯಜ್ಜ)
  * ಅತ್ಯುತ್ತಮ ನಟಿ - ಮಾಲಾಶ್ರೀ (ಚಿತ್ರ: ಗಂಗಾ)
  * ಅತ್ಯುತ್ತಮ ಪೋಷಕ ನಟ - ರಮೇಶ್ ಭಟ್ (ಚಿತ್ರ: ಮನ ಮಂಥನ)
  * ಅತ್ಯುತ್ತಮ ಪೋಷಕ ನಟಿ - ಪೂಜಾ.ಎಸ್.ಎಂ (ಚಿತ್ರ: ತಿಥಿ)
  * ಅತ್ಯುತ್ತಮ ಬಾಲನಟ - ಮಾಸ್ಟರ್ ಲಿಖಿತ್ ಶರ್ಮ (ಚಿತ್ರ: ಅಷ್ಟಾವಕ್ರ)
  * ಅತ್ಯುತ್ತಮ ಬಾಲ ನಟಿ - ಬೇಬಿ ಮೇವಿಷ್ (ಚಿತ್ರ: ಸವಿ ನಿಲಯ)

  * ಅತ್ಯುತ್ತಮ ಕತೆ - ಸರಜೂ ಕಾಟ್ಕರ್ (ಚಿತ್ರ: ಜುಲೈ 22, 1947)
  * ಅತ್ಯುತ್ತಮ ಚಿತ್ರಕತೆ - ಶಶಾಂಕ್, ರಘುಕೋವಿ (ಚಿತ್ರ: ಕೃಷ್ಣಲೀಲಾ)
  * ಅತ್ಯುತ್ತಮ ಸಂಭಾಷಣೆ - ಈರೇಗೌಡ (ಚಿತ್ರ: ತಿಥಿ)
  * ಅತ್ಯುತ್ತಮ ಛಾಯಾಗ್ರಹಣ - ಅನಂತ ಅರಸು (ಚಿತ್ರ: ಲಾಸ್ಟ್ ಬಸ್)

  * ಅತ್ಯುತ್ತಮ ಸಂಗೀತ ನಿರ್ದೇಶನ - ಶ್ರೀಧರ್.ವಿ.ಸಂಭ್ರಮ್ (ಚಿತ್ರ: ಕೃಷ್ಣಲೀಲಾ)
  * ಅತ್ಯುತ್ತಮ ಗೀತ ರಚನೆ - ನಾಗೇಂದ್ರ ಪ್ರಸಾದ್ (ಹಾಡು : ಎದೆಯಲ್ಲಿ ಯಾರೋ ಗಜಲ್..) (ಚಿತ್ರ: ಮುದ್ದು ಮನಸೇ)
  * ಅತ್ಯುತ್ತಮ ಹಿನ್ನಲೆ ಗಾಯಕ - ಸಂತೋಷ್ ವೆಂಕಿ (ಹಾಡು : ಸುಂದರಾಂಗಿಯೇ..) (ಚಿತ್ರ: ಪ್ರೀತಿಯಲ್ಲಿ ಸಹಜ)
  * ಅತ್ಯುತ್ತಮ ಹಿನ್ನಲೆ ಗಾಯಕಿ - ಡಾ.ಶಮಿತಾ ಮಲ್ನಾಡ್ (ಹಾಡು : ತಳಮಳದ ಮಳೆಯಲ್ಲಿ..) (ಚಿತ್ರ: ಬೆಕ್ಕು)

  * ಅತ್ಯುತ್ತಮ ಸಂಕಲನ - ಸೃಜಿತ್ ನಾಯಕ್ (ಚಿತ್ರ: ಚಂಡಿಕೋರಿ)
  * ಅತ್ಯುತ್ತಮ ಕಲಾ ನಿರ್ದೇಶನ - ಅವಿನಾಶ್ ನರಸಿಂಹರಾಜ್ (ಚಿತ್ರ: ಲಾಸ್ಟ್ ಬಸ್)
  * ತೀರ್ಪುಗಾರರ ವಿಶೇಷ ಪ್ರಶಸ್ತಿ - ಮೆ.ಜ್ಯೂಪಿಟರ್ ಅನಿಮೇಷನ್ (ವಿಭಾಗ : ಕಂಪ್ಯೂಟರ್ ಗ್ರಾಫಿಕ್ಸ್) (ಚಿತ್ರ: ಶಿವಲಿಂಗ)

  English summary
  State Film Awards 2015 were announced today (May 17th). Kannada Actress Malashri wins Best Actress for 'Ganga' and Kannada Actor Vijay Raghavendra gets Best Actor Award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X