ಕೇಂದ್ರ ಕೊಟ್ಟರು ರಾಜ್ಯ ಕೊಡಲಿಲ್ಲ: ತಿಂಗಳಾಂತ್ಯದವರೆಗೆ ಚಿತ್ರಮಂದಿರಗಳು ತುಂಬುವಂತಿಲ್ಲ
'ಕೇಂದ್ರ ಸರ್ಕಾರ ಕೊಟ್ಟರೂ ರಾಜ್ಯ ಸರ್ಕಾರ ಕೊಡಲಿಲ್ಲ' ಎಂದು ಬೇಸರಪಟ್ಟುಕೊಳ್ಳುವ ಪರಿಸ್ಥಿತಿ ರಾಜ್ಯದ ಚಿತ್ರಮಂದಿರ ಮಾಲೀಕರದ್ದು.
ಫೆಬ್ರವರಿ 1 ರಿಂದ ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದಷ್ಟು ಪ್ರೇಕ್ಷಕರಿಗೆ ಸಿನಿಮಾ ನೋಡಲು ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಹೊಸದೊಂದು ಆದೇಶ ಹೊರಡಿಸಿ, ಈ ತಿಂಗಳ ಅಂತ್ಯದವರೆಗೆ 50% ಪ್ರೇಕ್ಷಕರಿಗಷ್ಟೆ ಸಿನಿಮಾ ಮಂದಿರದೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದಿದೆ.
ರಾಜ್ಯ ಸರ್ಕಾರದ ಹೊಸ ಆದೇಶವು ಇಂದಷ್ಟೆ (ಜನವರಿ 02) ಹೊರಬಿದ್ದಿದ್ದು , ರಾಜ್ಯದಲ್ಲಿ ಕೊರೊನಾ ಪೂರ್ಣವಾಗಿ ಕಡಿಮೆಯಾಗಿಲ್ಲ, ಜೊತೆಗೆ ಕೊರೊನಾ ಎರಡನೇ ಅಲೆ ಸಹ ಬರುವ ಸಾಧ್ಯತೆ ಇರುವ ಕಾರಣ ಚಿತ್ರಮಂದಿರಗಳು ಯಥಾಸ್ಥಿತಿ ಮುಂದುವರೆಸಬೇಕು ಎಂದು ಆದೇಶ ಮಾಡಿದೆ.

ಹೋಟೆಲ್, ರೆಸ್ಟೊರೆಂಟ್, ಮೆಟ್ರೋಗಳೂ ಸಹ ಪೂರ್ಣ ಪ್ರಮಾಣದ ಸೀಟಿಂಗ್ ಸಾಮರ್ಥ್ಯದಷ್ಟು ಜನರಿಗೆ ಅವಕಾಶ ನೀಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
Recommended Video
ಫೆಬ್ರವರಿ ತಿಂಗಳಲ್ಲಿ ಕನ್ನಡದ ಕೆಲವು ದೊಡ್ಡ ನಟರ ಸಿನಿಮಾಗಳ ತೆರೆಗೆ ಬರುತ್ತಿವೆ. ಈ ನಡುವೆ ಕೇಂದ್ರ ಸರ್ಕಾರದ ಆದೇಶ ನಿರ್ಮಾಪಕರಿಗೆ, ಸಿನಿ ಪ್ರೇಕ್ಷಕರಿಗೆ ಖುಷಿ ನೀಡಿತ್ತು. ಆದರೆ ರಾಜ್ಯ ಸರ್ಕಾರದ ಹೊಸ ಆದೇಶ ನಿರ್ಮಾಪಕರಿಗೆ ಆತಂಕ ತಂದಿದೆ.


Click it and Unblock the Notifications











