ಚಿತ್ರಮಂದಿರಗಳಿಗೆ ಹೊಸ ಮಾರ್ಗಸೂಚಿ: 2 ಬಾರಿ ಮಧ್ಯಂತರಕ್ಕೆ ಸೂಚನೆ

ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಆಸನ ಭರ್ತಿಯೊಂದಿಗೆ ಪ್ರದರ್ಶನ ಮಾಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದ್ದು, ಗುರುವಾರ ಸಂಜೆ (ಫೆಬ್ರವರಿ 4) ನೂತನ ಮಾರ್ಗಸೂಚಿ ಪ್ರಕಟಿಸಿದೆ.

ಆರೋಗ್ಯ ಇಲಾಖೆ ಹೊರಡಿಸಿರುವ ನೂತನ ಮಾರ್ಗಸೂಚಿ ಪ್ರತಿ ಬಾರಿ ಸಿನಿಮಾ ಪ್ರದರ್ಶನ ವೇಳೆ ಎರಡು ಸಲ ಇಂಟರ್‌ವಲ್ ನೀಡಬೇಕು ಎಂದು ಸೂಚಿಸಿದೆ. ಇನ್ನುಳಿದಂತೆ ರಾಜ್ಯ ಸರ್ಕಾರ ಘೋಷಿಸಿರುವ ಮಾರ್ಗಸೂಚಿಯಲ್ಲಿ ಯಾವೆಲ್ಲ ಅಂಶಗಳಿವೆ ಎಂಬ ಮಾಹಿತಿ ಇಲ್ಲಿದೆ.

State Govt Announced New Guidelines for Film theaters in Karnataka

* ಸಿನಿಮಾ ವೀಕ್ಷಿಸುವ ಸಮಯವೂ ಸೇರಿದಂತೆ, ಎಲ್ಲಾ ಸಮಯದಲ್ಲೂ ಪ್ರೇಕ್ಷಕರು ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಮೇಲ್ವಿಚಾರಣೆ ನಡೆಸುವುದು.

* ಗ್ರಾಹಕರು ಸಿನಿಮಾ ಟಿಕೆಟ್ ಬುಕ್ಕಿಂಗ್/ ಖರೀದಿಸುವ ಸಮಯದಲ್ಲಿ, ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಬೇಕು. ಇದರಿಂದ ಸಂಪರ್ಕಿತರ ಮಾಹಿತಿ ಪಡೆಯುವುದು ಹಾಗೂ ಕೊವಿಡ್ 19 ಪರೀಕ್ಷೆ ನಡೆಸಲು ಸಹಾಯವಾಗುವುದು.

* ಹವಾ ನಿಯಂತ್ರಕಗಳು/ಯಾವುದೇ ಕೂಲಿಂಗ್ ವ್ಯವಸ್ಥೆಯ ಬಳಕೆಯಲ್ಲಿ CPWD ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

* ಅನಾವರಣದ ಸಮಯವನ್ನು ಕಡಿಮೆಗೊಳಿಸಲು (to reduce exposure time) ಹಾಗೂ ವಾತಾಯನವನ್ನು (ventiation) ಉತ್ತಮಗೊಳಿಸಲು ಪ್ರತಿ ಪ್ರದರ್ಶನದಲ್ಲಿ ಎರಡು ಮಧ್ಯಂತರ ವಿರಾಮಗಳನ್ನು ನೀಡುವುದು.

* ಪ್ರಮುಖ/ಆಯಕಟ್ಟಿನ ಸ್ಥಳಗಳಲ್ಲಿ ಕೊವಿಡ್ 19 ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಡಬೇಕಾದ್ದು/ಮಾಡಬಾರದಾದ ವಿವರಗಳನ್ನು (Dos and Don'st) ಪ್ರದರ್ಶಿಸುವುದು.

ಈ ಶಿಫಾರಸ್ಸುಗಳನ್ನು 2021ರ ಮಾರ್ಚ್ ಮೊದಲನೇ ವಾರದಲ್ಲಿ ಮತ್ತೆ ಪರಿಶೀಲಿಸಲಾಗುವುದು.

More from Filmibeat

English summary
Karnataka state Govt allow full occupancy in cinema halls from February 4th and issues new guidelines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X