ದರ್ಶನ್ ಮನೆ ಮೇಲೆ ಕಲ್ಲು ತೂರಾಟ: 'ಚಾಲೆಂಜ್ ಆಗಿ ಸ್ವೀಕರಿಸ್ತಾರೆ' ಎಂದ ಸುಮಲತಾ
Recommended Video

ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿರುವ ಹಿನ್ನೆಲೆ ನಟ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ನಿವಾಸ ಹಾಗೂ ಕಾರಿನ ಮೇಲೆ ಕಲ್ಲು ಎಸೆದು ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದು, ಇದನ್ನ ನಟ ದರ್ಶನ್ ಚಾಲೆಂಜಿಂಗ್ ಆಗಿ ಸ್ವೀಕರಿಸ್ತಾರೆ ಎಂದು ಹೇಳಿದ್ದಾರೆ. ಈ ಘಟನೆ ಪೂರ್ತಿ ವಿವರ ಮುಂದೆ ಓದಿ......

ರಾತ್ರಿ 3 ಗಂಟೆಗೆ ಘಟನೆ
ರಾತ್ರಿ 3 ಗಂಟೆಗೆ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ದರ್ಶನ್ ನಿವಾಸದ ಕಿಟಕಿ ಗಾಜುಗಳು ಪುಡಿ ಪುಡಿ ಆಗಿದೆ. ಕಾರಿನ ಮೇಲೂ ಜಖಂ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದರ್ಶನ್ ಮನೆಯಲ್ಲಿ ಇರಲಿಲ್ಲ
ದರ್ಶನ್ ಅವರ ನಿವಾಸದ ಮುಂದೆ ಮೂರು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ದುಷ್ಕರ್ಮಿಗಳು ಬಂದಿದ್ದರ ಬಗ್ಗೆ ಸೆರೆಯಾಗಿಲ್ಲ ಎನ್ನಲಾಗಿದೆ. ಯಾಕಂದ್ರೆ, ಸಿಸಿಟಿವಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಗೊತ್ತಾಗಿದೆ. ಇನ್ನು ನಟ ದರ್ಶನ್ ಕೂಡ ಮನೆಯಲ್ಲಿ ಇರಲಿಲ್ಲ. ಶೂಟಿಂಗ್ ನಿಮಿತ್ತ ಹೊರಗಡೆ ಹೋಗಿದ್ದರು. ದರ್ಶನ್ ಸ್ನೇಹಿತರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ.

ಸುಮಲತಾ ಪ್ರತಿಕ್ರಿಯೆ
ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಸುಮಲತಾ ''ದರ್ಶನ್ ಅವರನ್ನ ಪ್ರಚಾರದಿಂದ ಹಿಂದೆ ಸರಿಸಲು ಸಾಧ್ಯವಿಲ್ಲ. ಈ ರೀತಿ ಹೆದರಿಸೋಕೆ ಸಾಧ್ಯವಿಲ್ಲ. ಇದರಿಂದ ಅಭಿಮಾನಿಗಳು ಪ್ರಚೋದನೆಗೆ ಒಳಗಾಗಬಾರದು. ದರ್ಶನ್ ಇದನ್ನ ಚಾಲೆಂಜ್ ಆಗಿ ಸ್ವೀಕರಿಸ್ತಾರೆ'' ಎಂದು ಸುಮಲತಾ ಹೇಳಿದ್ದಾರೆ.

ನಿಖಿಲ್ ಕುಮಾರ್ ಕಾರಿನ ಮೇಲೂ ದಾಳಿ
ಮತ್ತೊಂದೆಡೆ ಶುಕ್ರವಾರ ರಾತ್ರಿ ಮಂಡ್ಯ ಲೋಕಸಭೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಅವರ ಕಾರಿನ ಮೇಲೂ ಕೆಲವರು ಕಲ್ಲು ತೂರಾಟ ಮಾಡಿದ್ದರು. ಒಂದು ದಿನದ ಬಳಿಕ ದರ್ಶನ್ ಮನೆ ಮೇಲೂ ಕಲ್ಲು ತೂರಾಟ ಆಗಿರುವುದು ನಿಜಕ್ಕೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.


Click it and Unblock the Notifications











