ಸಮಸ್ಯೆಗೆ ಪರಿಹಾರ ನೀಡದೆ, ಬರೀ ಟ್ವೀಟ್ ಮಾಡುವ ಸ್ಟಾರ್ಸ್ ಗಳ ಬಗ್ಗೆ ಅಕ್ಷಯ್ ಬೇಸರ
ಒಂದು ಸಮಸ್ಯೆ ಬಂತು ಅಂದ್ರೆ, ಅನೇಕ ಸಿನಿಮಾ ತಾರೆಯರು ಮೊದಲು ಮಾಡುವ ಕೆಲಸ ಟ್ವೀಟ್. ಏನೇ ಘಟನೆ ನಡೆದರೂ, ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಆ ಘಟನೆಯ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ.
ಯಾರೋ ಕಷ್ಟದಲ್ಲಿ ಇರಲಿ, ಎಲ್ಲೊ ಪ್ರಳಯ ಆಗಲಿ, ಒಂದು ಟ್ವೀಟ್ ಮಾಡಿ ತಮ್ಮ ಕೆಲಸ ಆಯ್ತು ಅಂತ ಕೈ ಕಟ್ಟಿ ಕೂರುತ್ತಾರೆ. ಇಂತಹ ಸ್ಟಾರ್ ಗಳ ಬಗ್ಗೆ ನಟ ಅಕ್ಷಯ್ ಕುಮಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗಷ್ಟೆ 'ಮಿಷನ್ ಮಂಗಲ್' ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ''ಇತ್ತೀಚಿಗೆ ಅಸ್ಸಾಂನಲ್ಲಿ ಪ್ರವಾಹ ಆಯ್ತು. ಅದಕ್ಕೆ ಕೆಲವರು ಟ್ವಿಟ್ಟರ್ ನಲ್ಲಿ ತಮಗೆ ನೊವಾಗಿದೆ ಎಂದು ಬರೆದುಕೊಂಡರು. ಆದರೆ, ಆ ರೀತಿ ಬರೆದರೆ ಏನು ಉಪಯೋಗ ಇಲ್ಲ. ಅದನ್ನು ಬಿಟ್ಟು ಏನಾದರೂ ಸಹಾಯ ಮಾಡಿ.'' ಎಂದು ಹೇಳಿದ್ದಾರೆ.

''ಟ್ವೀಟ್ ಮಾಡುವುದನ್ನು ನಿಲ್ಲಿಸಿ, ಎದ್ದು ಏನಾದರೂ ಮಾಡಿ. ಈ ರೀತಿಯ ಸಮಸ್ಯೆಗಳು ಬಂದಾಗ ಸಹಾಯಕ್ಕೆ ಮುಂದಾಗಿ'' ಎಂದು ಅಕ್ಷಯ್ ಕುಮಾರ್ ಸ್ಟಾರ್ ಗಳಿಗೆ ಹೇಳಿದ್ದಾರೆ.
ಅಸ್ಸಾಂ ನಲ್ಲಿ ಪ್ರವಾಹದಿಂದ ಅಲ್ಲಿನ ಜನ ಜೀವನ ಅಸ್ತವ್ಯಸ್ತ ಆಗಿದೆ. ಹೀಗಾಗಿ, ಅಕ್ಷಯ್ ಕುಮಾರ್ 2 ಕೋಟಿ ಹಣವನ್ನು ನೆರವು ನೀಡಿದ್ದರು.


Click it and Unblock the Notifications










