twitter
    For Quick Alerts
    ALLOW NOTIFICATIONS  
    For Daily Alerts

    ಇದಕ್ಕೆ ವಿಚಿತ್ರ ಅಂತೀರೋ.. ಕಾಕತಾಳೀಯ ಅಂತೀರೋ.. ನಿಮಗೆ ಬಿಟ್ಟಿದ್ದು.!

    By Harshitha
    |

    ಮುತ್ತುರಾಜ್ ರವರನ್ನ ಕನ್ನಡ ಚಿತ್ರರಂಗದ 'ರಾಜಕುಮಾರ'ನನ್ನಾಗಿ ಮಾಡುವಲ್ಲಿ ದುಡಿದ ದೊಡ್ಡ ಶಕ್ತಿ ಪಾರ್ವತಮ್ಮ ರಾಜ್ ಕುಮಾರ್. ಸದಾ ಕಾಲ ಒಂದಾಗಿ, ಒಗ್ಗಟ್ಟಾಗಿ ಬಾಳಿ ಬದುಕಿದ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ದಂಪತಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.

    ಬ್ರೆಸ್ಟ್ ಕ್ಯಾನ್ಸರ್ ಹಾಗೂ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ರಾಜ್ ಕುಮಾರ್ ಇಂದು (ಬುಧವಾರ, ಮೇ 31) ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಕಾಕತಾಳೀಯ ಅಂದ್ರೆ, ಪಾರ್ವತಮ್ಮ ರವರ ಪತಿ ಡಾ.ರಾಜ್ ಕುಮಾರ್ ಕೂಡ ಕಣ್ಮರೆ ಆಗಿದ್ದು ಬುಧವಾರವೇ (ಏಪ್ರಿಲ್, 12, 2006).[ಆರಿದ 'ದೊಡ್ಮನೆ' ದೀಪ: ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಇನ್ನಿಲ್ಲ]

    ಡಾ.ರಾಜ್ ಕುಮಾರ್ ಯಶಸ್ಸಿನ ಹಿಂದಿನ ರೂವಾರಿ ವರದಪ್ಪ ಕೂಡ ಇಹಲೋಕ ತ್ಯಜಿಸಿದ್ದು ಬುಧವಾರವೇ. ಇದಕ್ಕೆ ವಿಚಿತ್ರ ಅಂತಿರೋ... ಕಾಕತಾಳೀಯ ಅಂತೀರೋ... ನಿಮಗೆ ಬಿಟ್ಟಿದ್ದು.! ಮುಂದೆ ಓದಿರಿ....

    ಹುಟ್ಟಿದ ಐದನೇ ದಿನಕ್ಕೆ ಮದುವೆ ನಿಶ್ಚಯ

    ಹುಟ್ಟಿದ ಐದನೇ ದಿನಕ್ಕೆ ಮದುವೆ ನಿಶ್ಚಯ

    'ಮೈಸೂರಿನ ಮಗಳು' ಪಾರ್ವತಮ್ಮ ರಾಜ್ ಕುಮಾರ್ ಡಿಸೆಂಬರ್ 6, 1939 ರಂದು ಮೈಸೂರಿನ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಎಂಬ ಪುಟ್ಟ ಗ್ರಾಮದಲ್ಲಿ ಜನಸಿದರು. ಪಾರ್ವತಮ್ಮ ಹುಟ್ಟಿದ ಐದನೇ ದಿನಕ್ಕೆ 'ಮುತ್ತುರಾಜ'ನೊಂದಿಗೆ ಮದುವೆ ಮಾಡಲು ಕುಟುಂಬಸ್ಥರು ನಿಶ್ಚಯಿಸಿದರಂತೆ.

    ಕನ್ನಡ ಚಿತ್ರರಂಗದ ದೊಡ್ಡ ಶಕ್ತಿ

    ಕನ್ನಡ ಚಿತ್ರರಂಗದ ದೊಡ್ಡ ಶಕ್ತಿ

    ಭೂಮಿ ಮೇಲೆ ಕಣ್ಣು ಬಿಡುತ್ತಿದ್ದಂತೆಯೇ, 'ಮುತ್ತುರಾಜ'ನ ಮನದೊಡತಿ ಆಗಿ ಬೆಳೆದ ಪಾರ್ವತಮ್ಮ, ಕನ್ನಡ ಚಿತ್ರರಂಗದ ಪಾಲಿಗೂ ದೊಡ್ಡ ಶಕ್ತಿ. ಡಾ.ರಾಜ್ ರವರ ಮುದ್ದಿನ ಮಡದಿಯಾಗಿ, ಕನ್ನಡ ಚಿತ್ರ ನಿರ್ಮಾಪಕಿ ಆಗಿ, ವಿತರಕಿಯಾಗಿ ಪಾರ್ವತಮ್ಮ ರಾಜ್ ಕುಮಾರ್ ಸಲ್ಲಿಸಿರುವ ಸೇವೆ ಅಪಾರ.

    ಡಾ.ರಾಜ್ ಬೆನ್ನೆಲುಬು ವರದಪ್ಪ

    ಡಾ.ರಾಜ್ ಬೆನ್ನೆಲುಬು ವರದಪ್ಪ

    ಇನ್ನೂ ವಜ್ರೇಶ್ವರಿ ಕಂಬೈನ್ಸ್ ಹಾಗೂ ಡಾ.ರಾಜ್ ಕುಮಾರ್ ಏಳಿಗೆಗೆ ವರದಪ್ಪ ಕೂಡ ಕಾರಣಕರ್ತರು ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಬದುಕಿನ ಕೊನೆ ಕ್ಷಣದವರೆಗೂ ಡಾ.ರಾಜ್ ಕುಮಾರ್ ರವರ ಸಿನಿಮಾ ಕಥೆಗಳನ್ನು ಓಕೆ ಮಾಡುತ್ತಿದ್ದವರೇ ವರದಪ್ಪ. ಡಾ.ರಾಜ್ ಜೊತೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ರವರ ಸಿನಿ ಜೀವನದ ಆರಂಭದಲ್ಲಿ ಭದ್ರ ಬುನಾದಿ ಹಾಕಿ ಕೊಟ್ಟವರು ಇದೇ ವರದಪ್ಪ.!

    ಕಾಕತಾಳೀಯ ನೋಡಿ...

    ಕಾಕತಾಳೀಯ ನೋಡಿ...

    ಫೆಬ್ರವರಿ 8, 2006 ರಂದು ವರದಪ್ಪ ನಿಧನರಾದರು. ಏಪ್ರಿಲ್ 12, 2006 ರಂದು ಡಾ.ರಾಜ್ ಕುಮಾರ್ ಇಹಲೋಕ ತ್ಯಜಿಸಿದರು. ಇವತ್ತು (ಮೇ 31, 2017) ಪಾರ್ವತಮ್ಮ ರಾಜ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಕಾಕತಾಳೀಯ ಅಂದ್ರೆ, ಮೂವರೂ ಕಣ್ಮರೆ ಆಗಿರುವುದು ಬುಧವಾರ ಎಂದು ಚಿತ್ರಲೋಕ.ಕಾಂ ವರದಿ ಮಾಡಿದೆ.

    ಪತಿಯ ಹಾದಿಯಲ್ಲೇ ಪತ್ನಿ

    ಪತಿಯ ಹಾದಿಯಲ್ಲೇ ಪತ್ನಿ

    'ನೇತ್ರದಾನ ಮಹಾದಾನ' ಎಂದು ನಂಬಿದ್ದ ಡಾ.ರಾಜ್ ಕುಮಾರ್, ದೇಹಾಂತ್ಯದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಪತಿಯ ಆದರ್ಶವನ್ನು ಪಾಲಿಸಿರುವ ಪತ್ನಿ ಪಾರ್ವತಮ್ಮ, ಸಾವಿನ ನಂತರವೂ ಅದೇ ಮಾರ್ಗವನ್ನು ಅನುಸರಿಸಿ, ನೇತ್ರದಾನ ಮಾಡಿದ್ದಾರೆ.[ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

    ಪತಿ ಪಕ್ಕದಲ್ಲಿಯೇ ಪತ್ನಿ ಅಂತ್ಯಕ್ರಿಯೆ

    ಪತಿ ಪಕ್ಕದಲ್ಲಿಯೇ ಪತ್ನಿ ಅಂತ್ಯಕ್ರಿಯೆ

    ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇರುವ ಡಾ.ರಾಜ್ ಕುಮಾರ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ರವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ.[ಡಾ.ರಾಜ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ಅಂತ್ಯಕ್ರಿಯೆ]

    ಸಾವಿನಲ್ಲೂ ಸಾರ್ಥಕತೆ ಮೆರೆದ ದಂಪತಿ

    ಸಾವಿನಲ್ಲೂ ಸಾರ್ಥಕತೆ ಮೆರೆದ ದಂಪತಿ

    ಕನ್ನಡ ಚಿತ್ರರಂಗದ ಏಳಿಗೆಗೆ ದುಡಿದಿರುವ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ದಂಪತಿಗಳಿಬ್ಬರೂ ನೇತ್ರದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

    English summary
    Parvathamma Rajkumar, wife of Dr.Rajkumar, Kannada Movie Producer, passes away in Bengaluru today (May 31st). There is a Strange Coincidence on the day of Parvathamma Rajkumar's Death.
    Wednesday, May 31, 2017, 13:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X