ಹೊಸ ಪ್ರತಿಭೆಗಳ 'ಶಕ್ತಿ'ಯಿಂದ ಸಿದ್ಧವಾಗಿರುವ 'ಅಸತೋಮ ಸದ್ಗಮಯ'
ಟೈಟಲ್ ನಿಂದಲೇ ಹೊಸ ರೀತಿಯ ಸಿನಿಮಾ ಎಂದು ಗುರುತಿಸಿಕೊಂಡಿರುವ 'ಅಸತೋಮ ಸದ್ಗಮಯ' ಹಲವು ವಿಷ್ಯಗಳಿಗೆ ವಿಶೇಷವೆನಿಸಿಕೊಂಡಿದೆ. ಬಹುತೇಕ ಈ ಚಿತ್ರವನ್ನ ತಯಾರು ಮಾಡಿರುವವರೆಲ್ಲ ಹೊಸಬರೇ. ಆದ್ರೆ, ಒಂದು ಕಮರ್ಷಿಯಲ್ ಚಿತ್ರವನ್ನ ಯಾವುದೇ ಕೊರತೆಯಿಲ್ಲದೇ ಯಶಸ್ವಿಯಾಗಿ ಮುಗಿಸಿ, ಜನರ ಮುಂದೆ ತಂದಿದ್ದಾರೆ.
'ಅಸತೋಮ ಸದ್ಗಮಯ'.....ಈ ಹೆಸರೇ ಒಂದು ಶಕ್ತಿ. ಈ ಹೆಸರಿನ ಹಿಂದೆ ಒಂದು ಸಸ್ಪೆನ್ಸ್ ಇದೆ, ಕಾಮಿಡಿ ಇದೆ, ಗಂಭೀರತೆ ಇದೆ, ಮನರಂಜನೆ ಇದೆ, ಒಂದೊಳ್ಳೆ ಸಂದೇಶವಿದೆ. ಈ ಎಲ್ಲವನ್ನ ಒಟ್ಟಗೂಡಿಸಿ ತೆರೆ ಮೇಲೆ ತರಲಾಗುತ್ತಿದೆ. ಇದಕ್ಕೆ ಕಾರಣ ಹಲವು.
ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿ, ಎಲ್ಲರಿಂದಲೂ ಮೆಚ್ಚುಗೆಗಳಿಸಿಕೊಂಡಿದೆ. ಹಾಗಿದ್ರೆ, 'ಅಸತೋಮ ಸದ್ಗಮಯ' ಚಿತ್ರದ ಹಿಂದಿರುವ ಪ್ರತಿಭೆಗಳು ಮತ್ತು ಶಕ್ತಿ ಯಾವುದು ಎಂದು ತಿಳಿಯಲು ಮುಂದೆ ಓದಿ.....

ರಾಜೇಶ್ ವೇಣೂರು
ಈ ಚಿತ್ರವನ್ನ ನಿರ್ದೇಶನ ಮಾಡಿರುವುದು ರಾಜೇಶ್ ವೇಣೂರು. ಇದು ಇವರಿಗೆ ಚೊಚ್ಚಲ ಸಿನಿಮಾ. ಹೀಗಾಗಿ, ಇವರಿಗೆ ಈ ಚಿತ್ರ ಬಹಳ ಮುಖ್ಯ. ಜಾಹೀರಾತು, ಕಿರುಚಿತ್ರ, ಸಾಕ್ಷ್ಯಚಿತ್ರ ತಯಾರಿಸಿರುವ ಅನುಭವದಿಂದಲೇ ಮೊದಲ ಸಿನಿಮಾವನ್ನ ಮಾಡಿದ್ದಾರೆ. ಅಂದುಕೊಂಡಂತೆ ಸಿನಿಮಾ ಮಾಡಿ ಮುಗಿಸಿದ್ದಾರೆ. ಹೀಗಾಗಿ, 'ಅಸತೋಮ ಸದ್ಗಮಯ' ಚಿತ್ರದ ಹಿಂದಿರುವ ದೊಡ್ಡ ಶಕ್ತಿ ಅಂದ್ರೆ ನಿರ್ದೇಶಕ.
In pics: ಅಸತೋಮ ಸದ್ಗಮಯ' ಮೇಕಿಂಗ್ ಚಿತ್ರಗಳು

ಅಶ್ವಿನ್ ಜೆ ಪಿರೇರಾ
ನಿರ್ದೇಶಕರ ಕನಸಿಗೆ, ಅವರ ಕಲ್ಪನೆಗೆ ಬಂಡವಾಳ ಹಾಕಿ ಒಂದು ಸಿನಿಮಾ ರೂಪ ನೀಡಿರುವುದು ನಿರ್ಮಾಪಕ ಅಶ್ವಿನ್ ಜೆ ಪಿರೇರಾ. ಉದ್ಯಮಿ ಮತ್ತು ರಾಜಕಾರಣಿಯಾಗಿರುವ ಇವರು, ಚಿತ್ರದ ಮೇಕಿಂಗ್ ಅದ್ಭುತವಾಗಿ ಬರಲು ಕಾರಣ ಅಂದ್ರೆ ತಪ್ಪಾಗಲಾರದು.

ಚಿತ್ರದ ಕಥೆ - ಬುದ್ಧಿ ಮತ್ತು ಭಾವನೆ
'ಅಸತೋಮ ಸದ್ಗಮಯ' ಚಿತ್ರದ ಬಹುದೊಡ್ಡ ಶಕ್ತಿ ಅಂದ್ರೆ ಕಥೆ ಮತ್ತು ಚಿತ್ರಕಥೆ. ಇಂದಿನ ಯುವ ಜನತೆ ಬುದ್ಧಿವಂತಿಕೆಯ ಹಿಂದೆ ಬಿದ್ದು ಭಾವನೆಗಳ ಬೆಲೆ ಕೊಡುತ್ತಿಲ್ಲ ಎಂಬ ಅಂಶವನ್ನಿಟ್ಟು ಚಿತ್ರಕಥೆ ಮಾಡಲಾಗಿದೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಯ ಬಗ್ಗೆ ಚರ್ಚಿಸಲಾಗಿದೆ. ಇವುಗಳ ಜೊತೆ ಪ್ರೀತಿ, ಪ್ರೇಮ, ಕುಟುಂಬ, ಸಮಾಜ ಎಂಬ ಅಂಶಗಳನ್ನ ಸೇರಿಸಿ ರಂಜಿಸಲು ಸಿದ್ಧವಾಗಿದೆ.

ತಾಂತ್ರಿಕ ವರ್ಗ
ನಿರ್ದೇಶಕರು ಅಂದುಕೊಂಡಂತೆ ತೆರೆಮೇಲೆ ಅದ್ಭುತವಾಗಿ ಸಿನಿಮಾ ಮೂಡಿಬರಲು ಕಾರಣ ಚಿತ್ರದ ತಾಂತ್ರಿಕವರ್ಗ. ವಹಾಬ್ ಸಲೀಂ ಅವರ ಸಂಗೀತದ ಹಾಡುಗಳು ಮತ್ತು ಹಿನ್ನಲೆ ಸಂಗೀತ ಇಂಟ್ರೆಸ್ಟಿಂಗ್ ಆಗಿದೆ. ಕಿಶೋರ್ ಕುಮಾರ್ ಅವರ ಛಾಯಾಗ್ರಾಹಣ ಕಣ್ಮನ ಸೆಳೆಯುವಂತಿದೆ. ರವಿಚಂದ್ರನ್ ಅವರ ಸಂಕಲನ ಕುತೂಹಲ ಹೆಚ್ಚಿಸುವಂತಿದೆ.

ರಾಧಿಕಾ ಚೇತನ್, ಕಿರಣ್ ರಾಜ್, ಲಾಸ್ಯ, ಚಿತ್ರಾಲಿ
ಇನ್ನು ನಟನೆ ವಿಚಾರಕ್ಕೆ ಬಂದ್ರೆ, ನಿರ್ದೇಶಕರ ಹೇಳಿದ ಕಥೆ ಇಷ್ಟವಾಗಿ ರಾಧಿಕಾ ಚೇತನ್ ಈ ಸಿನಿಮಾ ಒಪ್ಪಿಕೊಂಡಿದ್ದಾರೆ. ಫಿನ್ ಲ್ಯಾಂಡ್ ದೇಶದ ಭಾರತೀಯ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 22' ಚಿತ್ರದಲ್ಲಿ ನಟಿಸಿದ್ದ ಕಿರಣ್ ರಾಜ್ ಈ ಚಿತ್ರದ ನಾಯಕನಾಗಿದ್ದು, ಇದು ಅವರಿಗೆ ಎರಡನೇ ಸಿನಿಮಾ. 'ಬಿಗ್ ಬಾಸ್' ಖ್ಯಾತಿ ಲಾಸ್ಯ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದು, ಚಿತ್ರಕ್ಕೆ ಗ್ಲಾಮರ್ ಹೆಚ್ಚಿಸಿದ್ದಾರೆ. 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಚಿತ್ರಾಲಿ ಕೂಡ ಕಾಣಿಸಿಕೊಂಡಿದ್ದು, ಚಿತ್ರದ ಹೈಲೆಟ್ ಆಗಿದ್ದಾರೆ.


Click it and Unblock the Notifications











