'ಸ್ಟ್ರೈಕರ್' ಆಟಕ್ಕೆ ಸ್ಟ್ರೈಟ್ ಆಗಿ ಬಂದ ಪ್ರವೀಣ್
ನಟ ಪ್ರವೀಣ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 'ಸ್ಟ್ರೈಕರ್' ಜೊತೆಗೆ ಆಟ ಆಡುವುದಕ್ಕೆ ಪ್ರವೀಣ್ ಸಿದ್ಧವಾಗಿದ್ದು, ಈಗ ತಮ್ಮ ಒಂದು ಜಲಕ್ ತೋರಿಸಿದ್ದಾರೆ.
''ಈ ಸೃಷ್ಟಿಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಯಾವುದೋ ಒಂದು ವೀಕ್‌ನೆಸ್ ಇದ್ದೇ ಇರುತ್ತೆ. ಒಬ್ಬನ ವೀಕ್‌ನೆಸ್ ಇನ್ನೊಬ್ಬನಿಗೆ ಬಲವಾದ್ರೆ, ಇನ್ನೊಬ್ಬನ ವೀಕ್‌ನೆಸ್ ಮತ್ತೊಬ್ಬನಿಗೆ ಬಲವಾಗುತ್ತೆ. ಪ್ರತಿಯೊಬ್ಬ ಮನುಷ್ಯ ಯಾವುದೋ ಒಂದು ಕ್ಷಣ ತನ್ನ ವೀಕ್‌ನೆಸ್ ಗೆ ಬಲಿಯಾಗಲೇಬೇಕು. ನನಗೆ ಆ ಕ್ಷಣ ಈಗ ಪರಿಚಯವಾಗಿದೆ''. ಎಂದು ಪ್ರವೀಣ್ ಮಾಸ್ ಡೈಲಾಗ್ ಹೊಡೆದಿದ್ದಾರೆ.
ಅಂದಹಾಗೆ, ಈ ಚಿತ್ರದಲ್ಲಿ ಪ್ರವೀಣ್ ತೇಜ್, ಭಜರಂಗಿ ಖ್ಯಾತಿಯ ಸೌರವ್ ಲೋಕಿ, ಶಿಲ್ಪ ಮಂಜುನಾಥ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ', 'ಚೂರಿ ಕಟ್ಟೆ' ಬಳಿಕ ಮತ್ತೆ ಪ್ರವೀಣ್ ಪ್ರವೇಶ ಆಗಿದೆ.

ಸಿನಿಮಾ ಟೀಸರ್ ಕುತೂಹಲ ಮೂಡಿಸುತ್ತದೆ. ಲವರ್‌ಬಾಯ್ ಪ್ರವೀಣ್ ಇಲ್ಲಿ ಮಾಸ್ ಹೀರೋ ಆಗಿ ಬದಲಾಗಿದ್ದಾರೆ. ಸಿನಿಮಾ ನವೆಂಬರ್ ನಲ್ಲಿ ಬಿಡುಗಡೆ ಆಗಲಿದೆ.
ಗುಡ್ಡಿತಿ ಶಂಕರಪ್ಪ, ಸಿ. ರಮೇಶ್ ಬಾಬು ಮತ್ತು ಸಿ. ಸುರೇಶ್ ಬಾಬು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪವನ್ ತ್ರಿವಿಕ್ರಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಭರತ್ ಬಿ.ಜೆ ಸಂಗೀತ ನೀಡಿದ್ದಾರೆ.


Click it and Unblock the Notifications











