ಸೀರಿಯಲ್ ನಟಿ ಮನೆಗೆ ನುಗ್ಗಿ ಮದುವೆ ಆಗುವಂತೆ ಒತ್ತಾಯಿಸಿದ ಯುವಕ

ತಮಿಳು ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ರಿತಿಕಾ ಅವರ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ತನ್ನನ್ನು ಮದುವೆ ಆಗುವಂತೆ ಒತ್ತಾಯ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ಮೇಲೆ ಆಕರ್ಷಿತನಾದ ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಮನೆವರೆಗೂ ಬಂದು ತಂದೆಯ ಮುಂದೆಯೇ ಮದುವೆ ಆಗುವಂತೆ ಒತ್ತಾಯಿಸಿದ್ದಾನೆ.

ತಮಿಳಿನ 'ರಾಜಾರಾಣಿ' ಧಾರಾವಾಹಿಯಲ್ಲಿ ರಿತಿಕಾ ಅಭಿನಯಿಸುತ್ತಿದ್ದು, ಟಿಕ್ ಟಾಕ್ ಹಾಗೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಪ್ ಲೋಡ್ ಮಾಡಿ ಖ್ಯಾತಿ ಗಳಿಸಿಕೊಂಡಿದ್ದರು. ಎಂಜಿನಿಯರಿಂಗ್ ಮುಗಿಸಿ ಉದ್ಯೋಗ ಹುಡುಕುತ್ತಿರುವ ಭರತ್, ಗುರುವಾರ ಬೆಳಿಗ್ಗೆ ರಿತಿಕಾ ಅವರ ಮನೆ ಬಳಿ ಬಂದು, ಬಾಗಿಲು ತಟ್ಟಿದ್ದಾನೆ.

ಈ ವೇಳೆ ಮನೆಯಲ್ಲಿ ರಿತಿಕಾ ಅವರ ತಂದೆ ಇದ್ದರು. ಬಾಗಿಲು ಬಡಿದ ಸದ್ದು ಕೇಳಿ ಬಾಗಿಲು ತೆಗೆದ ತಂದೆಗೆ ಅಚ್ಚರಿ ಕಾದಿತ್ತು. ಬಾಗಿಲು ತೆಗೆದೊಡನೆ ಏಕಾಏಕಿ ಒಳಗೆ ನುಗ್ಗಿದ ಭರತ್, ರಿತಿಕಾ ಅವರನ್ನ ಮದುವೆ ಮಾಡಿಕೊಡುವಂತೆ ಪೀಡಿಸಿದ್ದಾನೆ. ಈ ವಿಷ್ಯ ಅಕ್ಕಪಕ್ಕದವರಿಗೆ ತಿಳಿಯುತ್ತಿದ್ದಂತೆ ಸ್ಥಳಿಯ ಪೊಲೀಸರಿಗೆ ಕರೆ ಮಾಡಿದ್ದಾರೆ.

Student forced to marry tv actress rithika

ನಂತರ ರಿತಿಕಾ ಅವರ ಮನೆಗೆ ಬಂದ ಪೊಲೀಸರು ವಿದ್ಯಾರ್ಥಿ ಯುವಕ ಭರತ್ ನನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ರಿತಿಕಾ ಅಂದ್ರೆ ನನಗೆ ತುಂಬಾ ಇಷ್ಟ. ನಾನು ಆಕೆಯನ್ನ ಪ್ರತಿಸುತ್ತಿದ್ದೇನೆ. ನನಗೆ ಮದುವೆ ಮಾಡಿಸಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾನಂತೆ.

More from Filmibeat

English summary
Engineering student bharath came to actress rithika home and he asks her father to get him married to rithika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X