For Quick Alerts
  ALLOW NOTIFICATIONS  
  For Daily Alerts

  ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿಗೆ ಡಾಕ್ಟರೇಟ್ ಗೌರವ

  |

  ಕನ್ನಡ ಚಿತ್ರರಂಗದ ಸಾಧನೆ, ಯಶಸ್ಸು ಮತ್ತು ಒಳಿತಿಗೆ ಕಾರಣಕರ್ತರಾದ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ.ಪಾರ್ವತಮ್ಮ ರಾಜಕುಮಾರ್, ಡಾ.ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರಿಗೆ ವಿವಿಧ ವಿಶ್ವವಿದ್ಯಾನಿಲಯಗಳು ಡಾಕ್ಟರೇಟ್ ನೀಡಿ ಗೌರವ ಸಲ್ಲಿಸಿದೆ.

  ಇತ್ತೀಚಿಗಷ್ಟೇ ನಿರ್ಮಾಪಕ ಕೆ.ಮಂಜು ಅವರಿಗೆ ಡಾಕ್ಟರೇಟ್ ಲಭಿಸಿತ್ತು. ಇದೀಗ ಕನ್ನಡ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ.

  ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಮುಡಿಗೆ ಡಾಕ್ಟರೇಟ್ ಗರಿ

  ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ವತಿಯಿಂದ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ಸಮರ್ಪಣೆ ಆಗಿದೆ.

  ಬೆಂಗಳೂರು ವಿವಿಯಿಂದ ಪಾರ್ವತಮ್ಮ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್

  ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಮತ್ತು ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

  ನಿರ್ಮಾಪಕ ಕೆ.ಮಂಜುಗೆ ಡಾಕ್ಟರೇಟ್ ಗೌರವ

  'ಜೋಗಿ', 'ದುನಿಯಾ', 'ಜಾಕಿ', 'ದೊಡ್ಮನೆ ಹುಡುಗ', 'ಮಫ್ತಿ' ಸೇರಿದಂತೆ 600 ಹೆಚ್ಚು ಚಿತ್ರಗಳಿಗೆ ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜಿಸಿದ್ದಾರೆ. ನ್ಯಾಚುರಲ್ ಮತ್ತು ದಿಫರೆಂಟ್ ಸ್ಟಂಟ್ ಗಳಿಗೆ ಡ್ಯಾನಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಈಗಲೂ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಾಹಸ ನಿರ್ದೇಶಕರಲ್ಲಿ ಡಿಫರೆಂಟ್ ಡ್ಯಾನಿ ಒಬ್ಬರು.

  English summary
  Stunt Master Different Danny gets Honorary Doctorate from National Virtual University for Peace and Education.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X