twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿಗೆ ಡಾಕ್ಟರೇಟ್ ಗೌರವ

    |

    ಕನ್ನಡ ಚಿತ್ರರಂಗದ ಸಾಧನೆ, ಯಶಸ್ಸು ಮತ್ತು ಒಳಿತಿಗೆ ಕಾರಣಕರ್ತರಾದ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ.ಪಾರ್ವತಮ್ಮ ರಾಜಕುಮಾರ್, ಡಾ.ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರಿಗೆ ವಿವಿಧ ವಿಶ್ವವಿದ್ಯಾನಿಲಯಗಳು ಡಾಕ್ಟರೇಟ್ ನೀಡಿ ಗೌರವ ಸಲ್ಲಿಸಿದೆ.

    ಇತ್ತೀಚಿಗಷ್ಟೇ ನಿರ್ಮಾಪಕ ಕೆ.ಮಂಜು ಅವರಿಗೆ ಡಾಕ್ಟರೇಟ್ ಲಭಿಸಿತ್ತು. ಇದೀಗ ಕನ್ನಡ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ.

    ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಮುಡಿಗೆ ಡಾಕ್ಟರೇಟ್ ಗರಿಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಮುಡಿಗೆ ಡಾಕ್ಟರೇಟ್ ಗರಿ

    ನ್ಯಾಷನಲ್ ವರ್ಚುವಲ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ವತಿಯಿಂದ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ಸಮರ್ಪಣೆ ಆಗಿದೆ.

    Stunt Master Different Danny gets Honorary Doctorate from National Virtual University for Peace and Education

    ಬೆಂಗಳೂರು ವಿವಿಯಿಂದ ಪಾರ್ವತಮ್ಮ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್ಬೆಂಗಳೂರು ವಿವಿಯಿಂದ ಪಾರ್ವತಮ್ಮ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್

    ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಮತ್ತು ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಪರಿಗಣಿಸಿ ಡಿಫರೆಂಟ್ ಡ್ಯಾನಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

    ನಿರ್ಮಾಪಕ ಕೆ.ಮಂಜುಗೆ ಡಾಕ್ಟರೇಟ್ ಗೌರವನಿರ್ಮಾಪಕ ಕೆ.ಮಂಜುಗೆ ಡಾಕ್ಟರೇಟ್ ಗೌರವ

    'ಜೋಗಿ', 'ದುನಿಯಾ', 'ಜಾಕಿ', 'ದೊಡ್ಮನೆ ಹುಡುಗ', 'ಮಫ್ತಿ' ಸೇರಿದಂತೆ 600 ಹೆಚ್ಚು ಚಿತ್ರಗಳಿಗೆ ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜಿಸಿದ್ದಾರೆ. ನ್ಯಾಚುರಲ್ ಮತ್ತು ದಿಫರೆಂಟ್ ಸ್ಟಂಟ್ ಗಳಿಗೆ ಡ್ಯಾನಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಈಗಲೂ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಾಹಸ ನಿರ್ದೇಶಕರಲ್ಲಿ ಡಿಫರೆಂಟ್ ಡ್ಯಾನಿ ಒಬ್ಬರು.

    English summary
    Stunt Master Different Danny gets Honorary Doctorate from National Virtual University for Peace and Education.
    Tuesday, January 29, 2019, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X