twitter
    For Quick Alerts
    ALLOW NOTIFICATIONS  
    For Daily Alerts

    ಆಟೋ ಓಡಿಸುತ್ತಿದ್ದ ರವಿ ವರ್ಮ ಇಂದು 1.50 ಕೋಟಿ ರು ಕಾರಿನ ಒಡೆಯ!

    |

    ಹಿಂದೊಮ್ಮೆ ಆಟೋ ಚಲಾಯಿಸಿ ಜೀವನ ಸಾಧಿಸುತ್ತಿದ್ದ ವ್ಯಕ್ತಿ ಇಂದು ಕೋಟ್ಯಂತರ ಬೆಲೆ ಬಾಳುವ ದುಬಾರಿ ಕಾರಿನ ಒಡೆಯ. ಆದರೆ ಈ ಯಶಸ್ಸು ಸುಮ್ಮನೆ ಬಂದಿದ್ದಲ್ಲ. ಬೆವರು, ರಕ್ತ ಹರಿಸಿ ವರ್ಷಾನುಗಟ್ಟಲೆ ಪಟ್ಟ ಪರಿಶ್ರಮಕ್ಕೆ ಸಿಕ್ಕ ಫಲವಿದು.

    ಯಾವುದೇ ಕಮರ್ಶಿಯಲ್ ಸಿನಿಮಾಗಳ ಜೀವಾಳ ಆ ಸಿನಿಮಾದ ಫೈಟ್ ದೃಶ್ಯಗಳು. ನಾಯಕ ನಟನ ಏಟುಗಳಿಗೆ ವಿಲನ್‌ಗಳು ಹಾರಿ ಬೀಳುತ್ತಿದ್ದರೆ ಚಿತ್ರಮಂದಿರದಲ್ಲಿ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಜೋರಿರುತ್ತದೆ. ಆದರೆ ಆ ಫೈಟ್ ದೃಶ್ಯಗಳನ್ನು ಕಂಪೋಸ್ ಮಾಡುವ ಸ್ಟಂಟ್ ಮಾಸ್ಟರ್, ಹೊಡೆತ ತಿನ್ನುವ ಸ್ಟಂಟ್ ಕಲಾವಿದರು ತೆರೆ ಮರೆಯಲ್ಲಿಯೇ ಉಳಿಯುತ್ತಾರೆ. ಆದರೆ ತೆರೆ ಮರೆಯಲ್ಲಿದ್ದೇ ಅವರು ಸಾಧನೆಯ ಮೆಟ್ಟಿಲು ಏರುತ್ತಿರುತ್ತಾರೆ. ಅಂಥಹವರಲ್ಲಿ ಒಬ್ಬರು ಕನ್ನಡಿಗ ರವಿ ವರ್ಮಾ.

    ರವಿ ವರ್ಮಾ ಇಂದು ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಫೈಟ್ ಮಾಸ್ಟರ್. ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳ ಸ್ಟಾರ್ ನಟರು ರವಿವರ್ಮಾ ಅವರೇ ಫೈಟ್ ದೃಶ್ಯ ನಿರ್ದೇಶನ ಮಾಡಬೇಕು ಎಂದು ಬೇಡಿಕೆ ಇಟ್ಟು ಕರೆಸಿಕೊಳ್ಳುತ್ತಾರೆ. ಇಂದು ಈ ಎತ್ತರಕ್ಕೆ ಏರಿರುವ ರವಿವರ್ಮಾ ಆರಂಭದ ಸಮಯದಲ್ಲಿ ಜೀವನ ನಡೆಸಲು ಆಟೋ ಓಡಿಸುತ್ತಿದ್ದರು.

    ಆಟೋ ಚಾಲಕನಾಗಿ ವೃತ್ತಿ ಆರಂಭ ಮಾಡಿದ್ದೆ: ರವಿವರ್ಮಾ

    ಆಟೋ ಚಾಲಕನಾಗಿ ವೃತ್ತಿ ಆರಂಭ ಮಾಡಿದ್ದೆ: ರವಿವರ್ಮಾ

    ಈ ಬಗ್ಗೆ ಟ್ವೀಟ್ ಮಾಡಿರುವ ರವಿವರ್ಮಾ, ''ಆಟೋ ಚಾಲಕನಾಗಿ ವೃತ್ತಿ ಆರಂಭ ಮಾಡಿದೆ. ಆ ಮೂರು ಚಕ್ರದ ವಾಹನ ನನಗೆ ಜೀವನ ಪಾಠ ಕಲಿಸಿತು. ಇಂದು ಅದೇ ಜೀವನ ಪಾಠ ಈ ಹಂತದ ವರೆಗೆ ಕರೆದುಕೊಂಡು ಬಂದಿದೆ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ, ಜೀವನ ನಿಮಗೆ ಸರಿಯಾದ ತೋರಿಯೇ ತೀರುತ್ತದೆ'' ಎಂದಿದ್ದಾರೆ ರವಿವರ್ಮಾ. ತಾವು ದುಬಾರಿ ಬೆಂಜ್ ಕಾರು ಖರೀದಿಸಿದ ಸಂದರ್ಭ ಈ ವಿಷಯ ಹಂಚಿಕೊಂಡಿದ್ದಾರೆ ರವಿವರ್ಮಾ.

    ಮರ್ಸಿಡೀಸ್ ಬೆಂಜ್ ಜಿಎಲ್‌ಎಸ್‌4 400 ಡಿ ಕಾರು ಖರೀದಿ

    ಮರ್ಸಿಡೀಸ್ ಬೆಂಜ್ ಜಿಎಲ್‌ಎಸ್‌4 400 ಡಿ ಕಾರು ಖರೀದಿ

    ರವಿ ವರ್ಮಾ ಮರ್ಸಿಡೀಸ್ ಬೆಂಜ್ ಜಿಎಲ್‌ಎಸ್‌4 400 ಡಿ ಕಾರನ್ನು ಖರೀದಿಸಿದ್ದಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 1.15 ಕೋಟಿ ಇದೆ. ವಾಹನ ನೊಂದಣಿ, ವಿಮೆ, ಇತರೆ ಶುಲ್ಕಗಳನ್ನು ಸೇರಿಸಿದರೆ ಕಾರಿನ ಬೆಲೆ 1.50 ಕೋಟಿ ದಾಟುತ್ತದೆ. ಕಾರನ್ನು ಖರೀದಿ ಮಾಡಿರುವ ಸಂದರ್ಭದ ವಿಡಿಯೋವನ್ನು ರವಿವರ್ಮ ಹಂಚಿಕೊಂಡಿದ್ದಾರೆ. ತಂದೆ ತಾಯಿಯ ಚಿತ್ರವನ್ನು ಕಾರಿನ ಮೇಲಿಟ್ಟು ಪೂಜೆ ಮಾಡಿ, ಚಕ್ರಗಳಿಗೆ ನಿಂಬೆ ಹಣ್ಣು ಇಟ್ಟು ಕಾರು ಚಲಾಯಿಸುವ ಮೂಲಕ ಕಾರು ಖರೀದಿಸಿದ್ದಾರೆ ಸ್ಟಂಟ್ ಮಾಸ್ಟರ್ ರವಿ ವರ್ಮಾ.

    ಆಟೋ ಓಡಿಸುತ್ತಿದ್ದ ರವಿವರ್ಮಾ

    ಆಟೋ ಓಡಿಸುತ್ತಿದ್ದ ರವಿವರ್ಮಾ

    ರವಿವರ್ಮಾ ಹತ್ತನೇ ತರಗತಿ ಪಾಸಾದ ಬಳಿಕ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಾಲೇಜಿಗೆ ಹೋಗಲಿಲ್ಲ. ಬದಲಿಗೆ ಕುಟುಂಬಕ್ಕೆ ಸಹಾಯ ಮಾಡಲೆಂದು ಬಾಡಿಗೆ ಆಟೋ ಓಡಿಸಲು ಆರಂಭಿಸಿದರು. ಕೆಲ ಕಾಲ ಆಟೊ ಓಡಿಸಿದ ಬಳಿಕ ಅವರ ಹಿರಿಯಣ್ಣ ಹಾಗೂ ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ಸ್ಟಂಟ್ ಕಲಾವಿದನಾಗಿ ಸೇರಿಕೊಂಡರು. ದಿನಕ್ಕೆ 250 ರುಪಾಯಿಯಂತೆ ಗಳಿಸಲು ಆರಂಭಿಸಿದರು. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ನಟರ ಸಿನಿಮಾಗಳಲ್ಲಿ ಸ್ಟಂಟ್ ಕಲಾವಿದನಾಗಿ ಕೆಲಸ ಮಾಡಿರುವ ರವಿವರ್ಮಾ, ಸ್ಟಂಟ್ ಕಲಾವಿದನಾಗಿಯೇ ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಿಗೆ ದುಡಿದಿದ್ದಾರೆ.

    ಭಾರತ ಬಹುತೇಕ ಸ್ಟಾರ್ ನಟರೊಟ್ಟಿಗೆ ಕೆಲಸ

    ಭಾರತ ಬಹುತೇಕ ಸ್ಟಾರ್ ನಟರೊಟ್ಟಿಗೆ ಕೆಲಸ

    ಸ್ಟಂಟ್ ಮಾಸ್ಟರ್ ಆದ ತಮ್ಮ ವಿನೂತನ ಮಾದರಿ ಸ್ಟಂಟ್‌ಗಳು, ಫೈಟ್‌ಗಳಿಂದ ಬೇಡಿಕೆ ಹೆಚ್ಚಿಸಿಕೊಂಡ ರವಿವರ್ಮಾ, ಕನ್ನಡದ ಎಲ್ಲ ಸ್ಟಾರ್ ನಟರ ಸಿನಿಮಾಗಳಿಗೆ ಫೈಟ್ ನಿರ್ದೇಶನ ಮಾಡಿದ್ದಾರೆ. ಬಳಿಕ ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್, ಮಹೇಶ್ ಬಾಬು, ನಿತಿನ್, ಪ್ರಭಾಸ್, ತಮಿಳಿನಲ್ಲಿ ವಿಶಾಲ್, ಹಿಂದಿಯಲ್ಲಿ ಅಕ್ಷಯ್ ಕುಮಾರ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಶಾಹಿದ್ ಕಪೂರ್, ಮಲಯಾಳಂನ ಮೋಹನ್‌ಲಾಲ್ ಇನ್ನೂ ಹಲವು ಸ್ಟಾರ್ ನಿರ್ದೇಶಕರಿಗಾಗಿ ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ.

    English summary
    Stunt master Ravi Varma purchased Mercedes Benz gl4 400d 4matic car worth Rs 1.50 crore. He tweeted that he started his journey with Auto now life took him to this level.
    Monday, January 24, 2022, 17:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X