For Quick Alerts
  ALLOW NOTIFICATIONS  
  For Daily Alerts

  ಸ್ಟಂಟ್ ಮಾಸ್ಟರ್ ರವಿವರ್ಮಾ ಆದ್ರು, ಡಾ.ರವಿವರ್ಮಾ

  By Suneetha
  |

  ಕನ್ನಡ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮಾ ಅವರಿಗೆ ಅಮೇರಿಕ ದೇಶದ 'ಅಕಾಡೆಮಿ ಆಫ್ ಯೂನಿವರ್ಸಲ್ ಗ್ಲೋಬಲ್ ಪೀಸ್' ಸಂಸ್ಥೆ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದೆ. ದೇಸಿ ಕಲೆಯಲ್ಲಿ ಮಾಸ್ಟರ್ ರವಿವರ್ಮಾ ಅವರು ಮಾಡಿರುವ ಸಾಧನೆಗೆ ಸಂದ ಗೌರವ ಇದಾಗಿದೆ.

  ಕೋಲಾರದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಸಂತಸಗೊಂಡ ರವಿವರ್ಮಾ 'ಈ ಗೌರವ ಸ್ವೀಕರಿಸಿ ವಿನೀತನಾಗಿದ್ದೇನೆ. ನನ್ನ ವೃತ್ತಿಯಲ್ಲಿ ಡಾಕ್ಟರೇಟ್ ದೂರದ ಮಾತು ಎಂದುಕೊಂಡಿದ್ದೆ. ಇದು 'ನನಸಾದ ಕನಸು' ಎನ್ನಲಾರೆ, ನನ್ನ ವೃತ್ತಿಯ ಜವಾಬ್ದಾರಿ ಹೆಚ್ಚಿಸಿರುವ ಗೌರವ' ಎಂದು ಸಂಭ್ರಮದ ಮಾತುಗಳನ್ನಾಡಿದ್ದಾರೆ.[ಅಲ್ಲು ಅರ್ಜುನ್ ಚಿತ್ರಕ್ಕೆ ಕನ್ನಡಿಗ ರವಿವರ್ಮಾ ಸಾಹಸ]

  ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣ ಭಾರತ ಮತ್ತು ಬಾಲಿವುಡ್ ಕ್ಷೇತ್ರಗಳಲ್ಲಿಯೂ ಫೈಟ್ ಮಾಸ್ಟರ್ ಆಗಿ ತಮ್ಮದೇ ಆದ ಛಾಪು ಮೂಡಿಸಿರುವುದಕ್ಕೆ ಸ್ಟಂಟ್ ಮಾಸ್ಟರ್ ರವಿವರ್ಮಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

  'ನನ್ನ ಕಷ್ಟದ ದುಡಿಮೆಗೆ ಹಾಗೂ ಹಲವಾರು ಕಡೆಗಳಲ್ಲಿ ನಾನು ಹೆಸರು ಮಾಡಿರುವುದಕ್ಕೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ' ಎಂದು ರವಿವರ್ಮಾ ಅವರು ತಿಳಿಸುತ್ತಾರೆ.[ಪುನೀತ್-ಶಿವಣ್ಣ-ರಾಘಣ್ಣ ಚಿತ್ರಕ್ಕೆ ಮುಹೂರ್ತ ಫಿಕ್ಸ್..!]

  ಭಾರತದ ಒಟ್ಟು 17 ಸಾಧಕರಿಗೆ ಈ ಗೌರವ ನೀಡಲಾಗಿದೆ. 'ಅಕಾಡೆಮಿ ಆಫ್ ಯೂನಿವರ್ಸಲ್ ಗ್ಲೋಬಲ್ ಪೀಸ್' ಸಂಸ್ಥೆಯ ಜೊತೆ ಕೆಲಸ ಮಾಡುವ 'ಗಿವಿಂಗ್ ಹ್ಯಾಂಡ್ಸ್ ಇಂಡಿಯಾ ಟ್ರಸ್ಟ್' ಮೂಲಕ ರವಿವರ್ಮಾ ಅವರ ಆಯ್ಕೆ ಮಾಡಲಾಗಿತ್ತು.

  ತೆಲುಗು ನಟ ಬಾಲಕೃಷ್ಣ, ಹಿಂದಿ ನಟ ಸಲ್ಮಾನ್ ಖಾನ್, ಹಿಂದಿ ನಟ ಶಾರುಖ್ ಖಾನ್, ಮುಂತಾದ ದೊಡ್ಡ ದೊಡ್ಡ ನಟರೊಂದಿಗೆ ಕೆಲಸ ಮಾಡಿರುವ ರವಿವರ್ಮಾ ಚಿತ್ರೋದ್ಯಮದಲ್ಲಿರುವ ತೀವ್ರ ಸ್ಪರ್ಧೆಯ ಬಗ್ಗೆ ತಮ್ಮ ಅಭಿಪ್ರಾಯನ್ನು ಹಂಚಿಕೊಂಡಿದ್ದಾರೆ.[ಸಲ್ಲು, ಶಾರುಖ್ ಗೆ ಸ್ಟಂಟ್ ಮಾಡಿಸೋ ಮಂಡ್ಯ ಹೈದ]

  ಸದ್ಯಕ್ಕೆ ರಾಜ್ ವಂಶದ ಸಹೋದರರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರುಗಳನ್ನು ಒಟ್ಟಾಗಿಸಿ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಹೊತ್ತಿರುವ ರವಿವರ್ಮಾ ಅವರು ಅದಕ್ಕಾಗಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  English summary
  Sandalwood's ace stunt choreographer Ravi Verma is the first technician to be given a honorary doctorate by the Academy of Universal Global Peace University.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X