ಸ್ಟಂಟ್ ಮಾಸ್ಟರ್ ರವಿವರ್ಮಾಗೆ ಪೆಟ್ಟು: ಮ್ಯಾನೇಜರ್ ಮಂಜು ಪ್ರತಿಕ್ರಿಯೆ
ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸಿನಿಮಾ ಚಿತ್ರೀಕರಣದ ವೇಳೆ ಅವಘಡಗಳು ಸಂಭವಿಸುತ್ತಲೇ ಇದೆ. ಇದೀಗ ವಿಕ್ರಂ ರವಿಚಂದ್ರನ್ ನಟನೆಯ 'ಮುಧೋಳ್' ಸಿನಿಮಾ ಚಿತ್ರೀಕರಣದ ವೇಳೆ ಸ್ಟಂಟ್ ಮಾಸ್ಟರ್ ರವಿವರ್ಮಾಗೆ ಪೆಟ್ಟಾಗಿದೆ. ಮೈ ಜುಮ್ ಎನಿಸುವ ಸ್ಟಂಟ್ ಸೀಕ್ವೆನ್ಸ್ ಕಂಪೋಸ್ ಮಾಡುವುದರಲ್ಲಿ ರವಿವರ್ಮಾ ನಿಸ್ಸೀಮರು. ಅಂತದ್ದೇ ಸನ್ನಿವೇಶ ಸೆರೆ ಹಿಡಿಯುವ ವೇಳೆ ಈ ಅವಘಡ ಸಂಭವಿಸಿದೆ.
ರವಿವರ್ಮಾ ಅವರ ಬಲ ಭುಜಕ್ಕೆ ಪೆಟ್ಟಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ರವಿವರ್ಮಾ ಅವರ ಮ್ಯಾನೇಜರ್ ಮಂಜು ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಣ್ ಪೆಟ್ಟಾಗಿದೆ ಅಷ್ಟೇ. ಆತಂಕ ಪಡುವಂತದ್ದು ಏನು ಇಲ್ಲ. ಆಕ್ಷನ್ ಸನ್ನಿವೇಶವೊಂದರಲ್ಲಿ ರೋಪ್ ಕಟ್ಟಿ ಕ್ಯಾಮರಾ ಹಿಡಿದು ಸನ್ನಿವೇಶವನ್ನು ಸೆರೆಹಿಡಿಯುತ್ತಿದ್ದರು. ರೋಪ್ ಜಾರಿ ಬಿದ್ದು ಪೆಟ್ಟಾಗಿದೆ. ಈಗಾಗಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದಿದ್ದಾರೆ.

ಇನ್ನು ರವಿವರ್ಮಾ ಅವರ ಬಲ ಭುಜಕ್ಕೆ ಪೆಟ್ಟಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ರವಿವರ್ಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರವಿವರ್ಮಾ ರಿಸ್ಕಿ ಸ್ಟಂಟ್ ಅಂದಾಕ್ಷಣ 'ಮಾಸ್ತಿ ಗುಡಿ' ಸಿನಿಮಾ ದುರಂತ ನೆನಪಾಗುತ್ತದೆ. ಇನ್ನು ರವಿವರ್ಮಾ ಕನ್ನಡ ಮಾತ್ರವಲ್ಲದೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಶಾರುಕ್ ಖಾನ್, ಸಲ್ಮಾನ್ ಖಾನ್, ಪವನ್ ಕಲ್ಯಾಣ್‌ರಂತಹ ಸೂಪರ್ ಸ್ಟಾರ್‌ಗಳ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ.

ಇನ್ನು ವಿಕ್ರಂ ನಟನೆಯ 'ಮುಧೋಳ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಸಣ್ಣ ಟೈಟಲ್ ಟೀಸರ್‌ನಿಂದಲೇ ಸಿನಿಮಾ ಗಮನ ಸೆಳೆದಿದೆ. ವಿಕ್ರಂ ನಟನೆಯ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಆದರೆ ಈ ಸಿನಿಮಾ ಮೂಲಕ ಫೀನಿಕ್ಸ್ ರೀತಿ ಎದ್ದು ಬರುವ ಲೆಕ್ಕಾಚಾರದಲ್ಲಿದ್ದಾರೆ. ಬಹಳ ವಿಭಿನ್ನವಾದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೊಂದು ಗ್ಯಾಂಗ್‌ಸ್ಟರ್ ಸಬ್ಜೆಕ್ಟ್ ಸಿನಿಮಾ ಎನ್ನಲಾಗಿದೆ.
ಕಾರ್ತಿಕ್ ರಾಜನ್ 'ಮುಧೋಳ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಾಸ್ತಿ ಸಂಭಾಷಣೆ, ಯುವರಾಜ್ ಚಂದ್ರನ್ ಸಂಗೀತ, ಸಂದೀಪ್ ವೆಲ್ಲೂರಿ ಛಾಯಾಗ್ರಹಣ ಚಿತ್ರಕ್ಕಿದೆ. ತಂಡವ್ ಸ್ಟುಡಿಯೋಸ್ ಬ್ಯಾನರ್ ನಡಿ ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


Click it and Unblock the Notifications











