»   » 'ರಂಗಿತರಂಗ'ನೋಡಿ ಭೇಷ್ ಎಂದ ಅಲ್ಲು ಅರ್ಜುನ್

'ರಂಗಿತರಂಗ'ನೋಡಿ ಭೇಷ್ ಎಂದ ಅಲ್ಲು ಅರ್ಜುನ್

Posted By:
Subscribe to Filmibeat Kannada

ಗಾಂಧಿನಗರದಲ್ಲಿ 'ರಂಗಿತರಂಗ' ಹವಾ ಜೋರಾಗೆ ಇದೆ ಅನ್ನೋದಕ್ಕೆ ಉತ್ತಮ ನಿದರ್ಶನ ಅಂದ್ರೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಚಿತ್ರ ವೀಕ್ಷಿಸಿ ಹೊಸಬರಿಗೆ ಶಬಾಶ್ ಹೇಳಿದ್ದು, ಈ ಮೊದಲು ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಪುನೀತ್ ರಾಜ್ ಕುಮಾರ್, ಯಶ್, ಶ್ರೀಮುರಳಿ ಜೊತೆಗೆ ರಾಜಕೀಯ ನಾಯಕ ಜನಾರ್ಧನ ರೆಡ್ಡಿ ಚಿತ್ರ ವೀಕ್ಷಿಸಿ ಸುದ್ದಿ ಮಾಡಿದ್ದರು.

ಇದೀಗ ಗಾಂಧಿನಗರದ ಲೇಟೇಸ್ಟ್ ಸುದ್ದಿ ಅಂದ್ರೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ಸ್ಟಾರ್ ಗಳು ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರ 'ರಂಗಿತರಂಗ' ನೋಡಿ ಭೇಷ್ ಅಂದಿದ್ದಾರೆ. ಇದ್ಯಾರಪ್ಪಾ ಚಿತ್ರ ನೋಡಿದವರು ಅನ್ಕೊಂಡ್ರ, ಅವರೇ ನಮ್ಮ ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್.

Stylish Star Allu Arjun watches and well Appreciated movie 'RangiTaranga'

ಹೌದು ಟಾಲಿವುಡ್ ನ ಖ್ಯಾತ ನಟ, 'ಬನ್ನಿ' ಅಂತಾನೇ ಖ್ಯಾತಿ ಹೊಂದಿರುವ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಮ್ಮ ಬೆಂಗಳೂರಿನಲ್ಲಿ ಆಗಸ್ಟ್ 2 ರಂದು ಓರೆಯಾನ್ ಮಾಲ್ ನಲ್ಲಿ ಚಿತ್ರ ವೀಕ್ಷಿಸಿದ್ದಾರೆ.

ವೀಕೆಂಡ್ ಮಜಾ ಕಳೆಯಲು ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದ ತೆಲುಗು ಸ್ಟಾರ್ ಹೊಸಬರ ಚಿತ್ರ ಮಿಸ್ಟರಿ ಥ್ರಿಲ್ಲರ್ ಕಥೆ ಹೊಂದಿರುವ 'ರಂಗಿತರಂಗ' ನೊಡಿ ಫುಲ್ ಖುಷ್ ಆಗಿದ್ದಾರೆ. ನೋಡಿ ಹೊಸಬರ ಕಮಾಲ್ ಹೇಗಿದೆ ಅಂತ.

Stylish Star Allu Arjun watches and well Appreciated movie 'RangiTaranga'

ಈಗಾಗಲೇ ಕರ್ನಾಟಕದಾದ್ಯಂತ ಮಾತ್ರವಲ್ಲದೇ ವಿದೇಶದಲ್ಲೂ ತನ್ನ ಕಂಪನ್ನು ಬೀರುತ್ತಿರುವ ಅನುಪ್ ಭಂಡಾರಿ ನಿರ್ದೇಶನದ, ನಿರುಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ, 'ರಂಗಿತರಂಗ' ಪರಭಾಷೆಗೂ ರಿಮೇಕ್ ಆಗುತ್ತಿದೆ.

ಒಟ್ಟಿನಲ್ಲಿ ಪರಬಾಷಾ ನಟರನ್ನು ತನ್ನತ್ತ ಸೆಳೆಯುತ್ತಿರುವ ಹೊಸಬರ ಚಿತ್ರಕ್ಕೆ ನಾವು ಹ್ಯಾಟ್ಸಾಫ್ ಹೇಳಲೇ ಬೇಕು ಅಲ್ವಾ. ಅಂತೂ ಗಾಂಧಿನಗರದಲ್ಲಿ ಒಳ್ಳೊಳ್ಳೆ ಸಿನೆಮಾಗಳು ಬಂದ್ರೆ ಪ್ರೇಕ್ಷಕರು ಖಂಡಿತವಾಗಲೂ ಪ್ರೋತ್ಸಾಹ ನೀಡುತ್ತಾರೆ ಅನ್ನೋದಕ್ಕೆ 'ರಂಗಿತರಂಗ' ಉತ್ತಮ ಉದಾಹರಣೆಯಾಗಿದೆ.

English summary
Tollywood actor Stylish Star Allu Arjun watched and well Appreciated movie 'RangiTaranga', The movie features Nirup Bhandari, Radhika Chethan, Avanthika Shetty. The movie is directed by Anup Bhandari. The movie is released on July 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada