»   » ಫೇರ್ ಅಂಡ್ ಲವ್ಲಿ ಸ್ಟಾರ್ ಪ್ರೇಮ್ ಈಗ 'ದಳಪತಿ'

ಫೇರ್ ಅಂಡ್ ಲವ್ಲಿ ಸ್ಟಾರ್ ಪ್ರೇಮ್ ಈಗ 'ದಳಪತಿ'

Posted By:
Subscribe to Filmibeat Kannada

ತಮ್ಮ ಸ್ವೀಟ್ ಮತ್ತು ಲವ್ಲಿ ಪಾತ್ರಗಳ ಮೂಲಕ ಕಾಲೇಜು ಕನ್ಯೆಯರ ನಿದ್ದೆ ಕೆಡಿಸಿರುವ ಲವ್ಲಿ ಸ್ಟಾರ್ ಪ್ರೇಮ್ ಈಗ ಮತ್ತೊಂದು ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಬಾರಿ ಅವರ ಚಿತ್ರಕ್ಕೆ ದಳಪತಿ ಎಂದು ಹೆಸರಿಡಲಾಗಿದೆ.

ಸ್ಟೈಲಿಶ್ ಸ್ಟಾರ್ ಪ್ರೇಮ್ ಅವರನ್ನು ಔಟ್ ಅಂಡ್ ಲವರ್ ಬಾಯ್ ಪಾತ್ರದಲ್ಲಿ ನೋಡಿ ತುಂಬ ದಿನಗಳಾಗಿವೆ. ಈಗವರು ದಳಪತಿ ಚಿತ್ರದಲ್ಲಿ ಅಂತಹದ್ದೇ ಹಸಿಬಿಸಿ ಪಾತ್ರವನ್ನು ಪೋಷಿಸಲಿದ್ದಾರೆ. ಇದೊಂದು ಪಕ್ಕಾ ಲವ್ ಸಬ್ಜೆಕ್ಟ್ ಎನ್ನುತ್ತದೆ ಚಿತ್ರತಂಡ. [ಎಂ.ಎಂ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಪ್ರೇಮ್]


ಸಾಕಷ್ಟು ಗ್ಯಾಪ್ ನ ಬಳಿಕ ಪ್ರಶಾಂತ್ ರಾಜ್ ಒಂದು ಪಕ್ಕಾ ಕಮರ್ಷಿಯ ಲವ್ ಸ್ಟೋರಿಯೊಂದಿಗೆ ಮರಳಿದ್ದಾರೆ. ಈ ಚಿತ್ರದಲ್ಲಿ ಪ್ರೇಮ್ ಎರಡು ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಮೊದಲರ್ಧದಲ್ಲಿ ಲವರ್ ಬಾಯ್ ಶೇಡ್, ದ್ವಿತೀಯಾರ್ಧದಲ್ಲಿ ಮಾಸ್ ಶೇಡ್ ನಲ್ಲಿ ಕಾಣಿಸಲಿದ್ದಾರೆ.

ಜೂನ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು ಬೆಂಗಳೂರು, ಜಮಖಂಡಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮನೆಬಿಟ್ಟು ಓಡಿಹೋಗುವ ಪ್ರೇಮಿಗಳ ಕಥೆ ಇದು. ಅವರು ಪಡುವ ಪಾಡು, ಹಾಡುಗಳೊಂದಿಗೆ ಚಿತ್ರವನ್ನು ಲವ್ಲಿಯಾಗಿ ಪ್ರೆಸೆಂಟ್ ಮಾಡಲಿದ್ದಾರೆ ಪ್ರಶಾಂತ್ ರಾಜ್.

ಚಿತ್ರದ ನಾಯಕಿ ಕೃತಿ ಕರಬಂಧ. ಚಿತ್ರದಲ್ಲಿ ಅವರದು ಕಾಲೇಜು ಹುಡುಗಿ ಪಾತ್ರ. ಇದೇ ಮೊದಲ ಬಾರಿಗೆ ಪ್ರೇಮ್ ಹಾಗೂ ಕೃತಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೊಂದು ಕಡೆ ಪ್ರೇಮ್ ಅವರು ಮಳೆ, ಫೇರ್ ಅಂಡ್ ಲವ್ಲಿ ಹಾಗೂ ಅತಿ ಅಪರೂಪ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)

English summary
Stylish Star Prem new movie titled as Dalapathi directed by Prashanth Raj. Glamour doll Kriti Karabanda plays a lady lead role. The movie is a out and out commercial love story. 
 
Please Wait while comments are loading...