Su From So records; ಒಂದೇ ವಾರದಲ್ಲಿ 'ಸು ಫ್ರಂ ಸೋ' ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ

ಬಾಕ್ಸಾಫೀಸ್‌ನಲ್ಲಿ 'ಸು ಫ್ರಂ ಸೋ' ಸಿನಿಮಾ ಹೊಸ ದಾಖಲೆ ಬರೆದಿದೆ. 2ನೇ ವಾರಾಂತ್ಯದಲ್ಲಿ ಸಿನಿಮಾ ಮತ್ತಷ್ಟು ಸದ್ದು ಮಾಡುವ ಸುಳಿವು ಸಿಕ್ಕಿದೆ. ಕೇವಲ 10 ದಿನಗಳಲ್ಲಿ 10 ಲಕ್ಕಕ್ಕೂ ಅಧಿಕ ಟಿಕೆಟ್ ಬುಕ್‌ಮೈ ಶೋನಲ್ಲೇ ಬುಕ್ ಆಗಿದೆ. ಪ್ರೀಮಿಯರ್ ಶೋನಿಂದ ಶುರುವಾದ ಸಿನಿಮಾ ಕ್ರೇಜ್ ಎರಡನೇ ವಾರಕ್ಕೂ ಕಮ್ಮಿ ಆಗಿಲ್ಲ.

ಈಗಾಗಲೇ ಕಾಮಿಡಿ ಎಂಟರ್‌ಟೈನರ್ ಸಿನಿಮಾ 30 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಶೀಘ್ರದಲ್ಲೇ 50 ಕೋಟಿ ರೂ. ಗಡಿ ದಾಟುವ ಸುಳಿವು ಸಿಕ್ಕಿದೆ. ದೊಡ್ಡ ದೊಡ್ಡ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ಈ ಹೊಸಬರ ಸಿನಿಮಾ ಸದ್ದು ಮಾಡ್ತಿದೆ. ಪರಭಾಷೆಗಳಿಂದಲೂ ಸಿನಿಮಾ ಡಬ್ ಮಾಡುವಂತೆ ಬೇಡಿಕೆ ಶುರುವಾಗಿದೆ. ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ತೆಲುಗಿಗೆ ಶೀಘ್ರದಲ್ಲೇ ಡಬ್ ಆಗುತ್ತಿದೆ.

Su From So Breaks Records Fastest 10 Lakh BookMyShow Tickets amp amp Kannada Box Office Milestone

ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಕೂಡ 'ಸು ಫ್ರಂ ಸೋ' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಡಬ್ ಮಾಡಿ ಬಿಡುಗಡೆ ಮಾಡಿದರೆ ಮತ್ತಷ್ಟು ಜನರನ್ನು ತಲುಪುತ್ತಿದೆ. ಕೇರಳದಲ್ಲಿ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಚಿತ್ರತಂಡ ಖುಷಿಯಾಗಿದೆ. 2ನೇ ವಾರ ಟಿಕೆಟ್ ಸಿಗುತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುವ ಮಟ್ಟಕ್ಕೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸೆಕೆಂಡ್ ವೀಕೆಂಡ್‌ನಲ್ಲಿ ಭಾರೀ ಕಲೆಕ್ಷನ್ ಲೆಕ್ಕಾಚಾರ ನಡೀತಿದೆ.

ಬುಕ್‌ಮೈ ಶೋನಲ್ಲಿ 'ಸು ಫ್ರಂ ಸೋ' ಸಿನಿಮಾ ಕಲೆಕ್ಷನ್ ಹೇಗಿದೆ? ಎನ್ನುವ ಲೆಕ್ಕಾ ಸಿಗುತ್ತಿದೆ. 9 ದಿನಕ್ಕೆ 10 ಲಕ್ಷದ 10 ಸಾವಿರ ಟಿಕೆಟ್ ಬುಕ್‌ಮೈಶೋನಲ್ಲಿ ಬುಕ್ ಆಗಿರುವುದು ದಾಖಲೆಯೇ ಸರಿ. ಇಂದು(ಆಗಸ್ಟ್ 3) ಕೂಡ ಗಂಟೆಗೆ 9 ಸಾವಿರಕ್ಕೂ ಅಧಿಕ ಟಿಕೆಟ್‌ ಆನ್ಲೈನ್‌ನಲ್ಲಿ ಬುಕ್ ಆಗ್ತಿದೆ. ಎರಡು ದಿನದ ಹಿಂದೆ ಬಿಡುಗಡೆ ಆಗಿರುವ ವಿಜಯ್ ದೇವರಕೊಂಡ ನಟನೆಯ 'ಕಿಂಗ್‌ಡಮ್' ಚಿತ್ರಕ್ಕೆ ಗಂಟೆಗೆ 5 ಸಾವಿರ ಟಿಕೆಟ್ ಮಾತ್ರ ಬುಕ್ ಆಗ್ತಿದೆ.

ಕಳೆದ ಒಂದೂವರೆ ವರ್ಷದಿಂದ ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಲೆಕ್ಕ ಕೊಡುತ್ತಿದೆ. ಈವರೆಗೆ ಕನ್ನಡದಲ್ಲಿ 'ಕಾಟೇರ' ಸಿನಿಮಾ ಟಿಕೆಟ್ ಆನ್ಲೈನ್‌ನಲ್ಲಿ ಹೆಚ್ಚು ಬುಕ್ ಆಗಿದ್ದ ದಾಖಲೆ ಹೊಂದಿತ್ತು. ಆ ದಾಖಲೆಯನ್ನು ಈಗ 'ಸು ಫ್ರಂ ಸೋ' ಸಿನಿಮಾ ಹಿಂದಿಕ್ಕಿದೆ. ಆದರೆ ಆಫ್‌ಲೈನ್‌ನಲ್ಲಿ ಹೆಚ್ಚು ಜನ ಟಿಕೆಟ್ ಖರೀದಿಸಿ 'ಕಾಟೇರ' ಸಿನಿಮಾ ವೀಕ್ಷಿಸಿದ್ದರು. ಈ ಲಿಸ್ಟ್‌ನಲ್ಲಿ ಸುದೀಪ್ ನಟನೆಯ 'ಮ್ಯಾಕ್ಸ್' 3ನೇ ಸ್ಥಾನದಲ್ಲಿದ್ದರೆ ಉಪ್ಪಿ ನಿರ್ದೇಶಿಸಿ ನಟಿಸಿದ 'ಯುಐ' 4ನೇ ಸ್ಥಾನದಲ್ಲಿದೆ.

Su From So Breaks Records Fastest 10 Lakh BookMyShow Tickets amp amp Kannada Box Office Milestone

ಆರಂಭದಲ್ಲಿ ಕಡಿಮೆ ಸ್ಕ್ರೀನ್‌ಗಳಲ್ಲಿ ಕಡಿಮೆ ಶೋಗಳೊಂದಿಗೆ 'ಸು ಫ್ರಂ ಸೋ' ಸಿನಿಮಾ ಬಿಡುಗಡೆ ಆಗಿತ್ತು. ಬಳಿಕ ರೆಸ್ಪಾನ್ಸ್‌ಗೆ ತಕ್ಕಂತೆ ಶೋಗಳ ಸಂಖ್ಯೆ ಹೆಚ್ಚಿಸುತ್ತಾ ಹೋಗಲಾಯಿತು. ಇದೀಗ ಸಿಂಗಲ್ ಸ್ಕ್ರೀನ್‌ಗಳಲ್ಲಿ ಸಾಕಷ್ಟು ಕಡೆ ಸಿನಿಮಾ ತೆರೆಕಂಡಿದೆ. ಹಾಗಾಗಿ ಸಹಜವಾಗಿಯೇ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದೆ. ಅಚ್ಚರಿ ಎಂದರೆ 2ನೇ ಶುಕ್ರವಾರ ಹಾಗೂ ಶನಿವಾರ ಒಂದೂವರೆ ಲಕ್ಷಕ್ಕೂ ಅಧಿಕ ಟಿಕೆಟ್ ಆನ್ಲೈನ್‌ನಲ್ಲಿ ಬುಕ್ ಆಗಿದೆ.

ಮೊದಲ ವಾರ ಬುಕ್‌ಮೈ ಶೋನಲ್ಲಿ ಅತಿಹೆಚ್ಚು ಟಿಕೆಟ್(7 ಲಕ್ಷದ 75 ಸಾವಿರ) ಬುಕ್ ಆದ ಸಿನಿಮಾ 'ಸು ಫ್ರಂ ಸೋ' ಎನಿಸಿಕೊಂಡಿದೆ. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಎನ್ನುವ ದಾಖಲೆ 'ಸು ಫ್ರಂ ಸೋ' ಪಾಲಾಗಿದೆ. 'ಎಕ್ಕ' ಚಿತ್ರದ ಕಲೆಕ್ಷನ್ ಹಿಂದಿಕ್ಕಿದೆ. ಪೀಕ್ ಅವರ್‌ಗಳಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ ಆಗಿದ್ದ ಸಿನಿಮಾ, 24 ಗಂಟೆಗಳಲ್ಲಿ ಅತಿಹೆಚ್ಚು ಟಿಕೆಟ್(ಆಗಸ್ಟ್ 1ರಂದು 1 ಲಕ್ಷದ 68 ಸಾವಿರ) ಬುಕ್ ಆಗಿದ್ದ ಸಿನಿಮಾ, ಈ ವರ್ಷ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಸಿನಿಮಾ ಹೀಗೆ ಸಾಕಷ್ಟು ದಾಖಲೆಗಳನ್ನು 'ಸು ಫ್ರಂ ಸೋ' ಸ್ವಂತ ಮಾಡಿಕೊಂಡಿದೆ.

More from Filmibeat

English summary
‘Su From So’ Smashes Kannada Box Office Records with 10 Lakh Tickets in 10 Days
Read more about: raj b shetty sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X