'KGF-2', 'ಕಾಂತಾರ' ರೀತಿ 'ಸು ಫ್ರಂ ಸೋ' ಆರ್ಭಟ; ಬಾಕ್ಸಾಫೀಸ್‌ನಲ್ಲಿ 'ಸು'ಪರ್ 'ಸೋ'ಮವಾರ
ಹೊಸಬರ 'ಸು ಫ್ರಂ ಸೋ' ಸಿನಿಮಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಮುಂದುವರೆಸಿದೆ. ಮೊದಲ ವೀಕೆಂಡ್ ಭರ್ಜರಿ ಪ್ರದರ್ಶನ ಕಂಡಿದ್ದ ಸಿನಿಮಾ ಸೋಮವಾರ ಕೂಡ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳನ್ನು ಮೀರಿಸಿ ಈ ಸಿನಿಮಾ ಸದ್ದು ಮಾಡ್ತಿದೆ.
ಬಾಕ್ಸಾಫೀಸ್‌ನಲ್ಲಿ 'ಸು ಫ್ರಂ ಸೋ' ದರ್ಬಾರ್ ಹೇಗಿದೆ ಎನ್ನುವುದನ್ನು ಬುಕ್‌ಮೈ ಶೋ ಬುಕ್ಕಿಂಗ್ ಸಾರಿ ಸಾರಿ ಹೇಳ್ತಿದೆ. ತೆಲುಗಿನ 'ಹರಿಹರ ವೀರಮಲ್ಲು', ಹಿಂದಿಯ 'ಸಯ್ಯಾರ', ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಹಾಗೂ ಕನ್ನಡದ 'ಎಕ್ಕ' ಸಿನಿಮಾಗಳ ನಡುವೆಯೂ 'ಸು ಫ್ರಂ ಸೋ' ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸೋಮವಾರ ಕೂಡ ಸಿನಿಮಾ ಸಾಕಷ್ಟು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಸಾಮಾನ್ಯವಾಗಿ ಯಾವುದೇ ದೊಡ್ಡ ಸಿನಿಮಾ ಬಂದರೂ ಫಸ್ಟ್ ವೀಕೆಂಡ್ ಬಳಿಕ ಸೋಮವಾರ ಸಹಜವಾಗಿಯೇ ರೆಸ್ಪಾನ್ಸ್ ಕಮ್ಮಿ ಆಗುತ್ತದೆ. ಅದಾಗಲೇ ಅಭಿಮಾನಿಗಳೆಲ್ಲಾ ಸಿನಿಮಾ ನೋಡಿರುತ್ತಾರೆ. ಹೆಚ್ಚು ಸಂಖ್ಯೆಯಲ್ಲಿ ಸ್ಕ್ರೀನ್‌ಗಳು, ಶೋಗಳು ಇರುವುದರಿಂದ ಮೊದಲ 3 ದಿನಗಳಲ್ಲಿ ಬಹುತೇಕರು ಸಿನಿಮಾ ನೋಡಿ ಮುಗಿಸುತ್ತಾರೆ. ಮತ್ತೆ ಕೆಲವರು 2ನೇ ವೀಕೆಂಡ್‌ವರೆಗೆ ಕಾಯುತ್ತಾರೆ. ಆದರೆ ಕೆಲವು ಸಿನಿಮಾಗಳು ಮಾತ್ರ ಈ ಮಾತನ್ನು ಸುಳ್ಳಾಗಿಸುತ್ತದೆ, ಕನ್ನಡದಲ್ಲಿ ಈ ಹಿಂದೆ 'KGF- 2' ಹಾಗೂ 'ಕಾಂತಾರ' ಚಿತ್ರಗಳಿಗೆ ಈ ರೀತಿ ಸೋಮವಾರ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದರು. ಇದೀಗ 'ಸು ಫ್ರಂ ಸೋ' ಸಿನಿಮಾ ಕೂಡ ಅದೇ ರೀತಿ ಕ್ರೇಜ್ ಹುಟ್ಟಾಕ್ಕಿದೆ.
ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಸಹ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಮಲಯಾಳಂ ಭಾಷೆಗೆ ಡಬ್ ಆಗಿ ಸಿನಿಮಾ ಬಿಡುಗಡೆ ಆಗಲಿದೆ. ಎಎ ಫಿಲ್ಮ್ಸ್ ಸಂಸ್ಥೆ ಉತ್ತರಭಾರತದಲ್ಲಿ 'ಸು ಫ್ರಂ ಸೋ' ಸಿನಿಮಾ ಬಿಡುಗಡೆಗೆ ಮುಂದಾಗಿದೆ. ಹಾಗಾಗಿ ಸದ್ಯಕ್ಕೆ ಈ ಸಿನಿಮಾ ಹವಾ ಕಮ್ಮಿ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದೆ ಮತ್ತಷ್ಟು ದೊಡ್ಡದಾಗಿ ಸಿನಿಮಾ ಗೆಲ್ಲುವ ಲೆಕ್ಕಾಚಾರ ಶುರುವಾಗಿದೆ.

ಭಾನುವಾರ ಮ್ಯಾಜಿಕ್
ಮೊದಲ ಎರಡು ದಿನ 'ಸು ಫ್ರಂ ಸೋ' ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಭಾನುವಾರ ಶೋಗಳ ಸಂಖ್ಯೆ ಹೆಚ್ಚಿಸಲಾಗಿತ್ತು. ಅಚ್ಚರಿ ಎನ್ನುವಂತೆ 3ನೇ ದಿನ ಕೆಲವೆಡೆ ಚಿತ್ರಕ್ಕೆ ಅರ್ಲಿ ಮಾರ್ನಿಂಗ್ ಶೋಗಳನ್ನು ಏರ್ಪಡಿಸಲಾಗಿತ್ತು. ಎಲ್ಲವೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಭಾನುವಾರ ಬರೀ ಬುಕ್‌ಮೈ ಶೋನಲ್ಲಿ 95 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿತ್ತು.
ಸೋಮವಾರದ ರೆಸ್ಪಾನ್ಸ್
ಸ್ಟಾರ್ ನಟರಿಲ್ಲದೇ, ಯಾವುದೇ ಸಾಂಗ್ ಹಿಟ್ ಆಗದೇ, ದೊಡ್ಡದಾಗಿ ಪ್ರಚಾರ ಮಾಡದೇ 'ಸು ಫ್ರಂ ಸೋ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವ ಅಚ್ಚರಿ ಮೂಡಿಸಿದೆ. ಕಂಟೆಂಟ್ ಕಿಂಗ್, ಒಳ್ಳೆ ಸಿನಿಮಾ ಮಾಡಿದರೆ ಪ್ರೇಕ್ಷಕರು ಖಂಡಿತ ಚಿತ್ರಮಂದಿರಗಳಿಗೆ ಬರ್ತಾರೆ ಎನ್ನುವ ಮಾತುಗಳು ಮತ್ತೆ ಸಾಬೀತಾಗಿದೆ. ಸೋಮವಾರ ಚಿತ್ರಕ್ಕೆ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಗಂಟೆಗೆ 6 ಸಾವಿರ, 7 ಸಾವಿರ ಟಿಕೆಟ್ ಬುಕ್ ಆಗುತ್ತಿದೆ. ಸೋಮವಾರ 1 ಲಕ್ಷ ಟಿಕೆಟ್ ಬುಕ್ ಆಗುವ ಅಂದಾಜಿದೆ.
ಚಿತ್ರಮಂದಿರಕ್ಕೆ ಹೋಗಿ ಟಿಕೆಟ್ ಖರೀದಿಸಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಟಿಕೆಟ್ ಸಿಗುತ್ತೋ ಇಲ್ಲವೋ ಎನ್ನುವ ಆತಂಕ. ಹಾಗಾಗಿ ಬಹುತೇಕರು ಬುಕ್‌ಮೈ ಶೋನಲ್ಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಇನ್ನು ಕೆಲವರು ಟಿಕೆಟ್ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಚಿತ್ರಮಂದಿರಗಳ ಮುಂದೆ ಹೌಸ್‌ಫುಲ್ ಬೋರ್ಡ್‌ಗಳು ಹಾಕಲಾಗುತ್ತಿದೆ. ನಿಜಕ್ಕೂ ಕನ್ನಡ ಸಿನಿಮಾವೊಂದು ತೆರೆಮೇಲೆ ಮ್ಯಾಜಿಕ್ ಮಾಡಿದೆ.
3 ದಿನದ ಕಲೆಕ್ಷನ್
'ಸು ಫ್ರಂ ಸೋ' ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಬಿಎಂಎಸ್ ಟಿಕೆಟ್ ಬುಕ್ಕಿಂಗ್ ಆಧಾರದಲ್ಲೇ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿರಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಪ್ರೀಮಿಯರ್ ಶೋಗಳು ಸೇರಿ ಮೊದಲ 3 ದಿನಕ್ಕೆ 3 ಲಕ್ಷ 11 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿತ್ತು. ಒಂದು ಟಿಕೆಟ್ ಸರಾಸರಿ 200 ರೂ. ಎಂದುಕೊಂಡರೂ 6 ಕೋಟಿ ರೂ. ಕಲೆಕ್ಷನ್ 6 ಕೋಟಿ ದಾಟಿದೆ.


Click it and Unblock the Notifications











