Su From So; 'ಕಾಟೇರ', 'ಮ್ಯಾಕ್ಸ್' ದಾಖಲೆ ಉಡೀಸ್; 'ಸು ಫ್ರಂ ಸೋ' ಟೀಂ ಬಿಂದಾಸ್ ಡ್ಯಾನ್ಸ್

ಬಾಕ್ಸಾಫೀಸ್‌ನಲ್ಲಿ 'ಸು ಫ್ರಂ ಸೋ' ಆರ್ಭಟ ಮುಂದುವರೆದಿದೆ. ಬೇರೆ ಸಿನಿಮಾಗಳ ಆರ್ಭಟದ ನಡುವೆ ಸಿನಿಮಾ ಜಗ್ಗದೇ ಮುನ್ನುಗ್ಗುತ್ತಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಕಲೆಕ್ಷನ್ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತದೆ. ಆದರೆ ರಾಜ್ ಬಿ ಶೆಟ್ಟಿ ನಿರ್ಮಾಣದ ಈ ಕಾಮಿಡಿ ಎಂಟರ್‌ಟೈನರ್ ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸಿಕೊಳ್ಳುತ್ತಿದೆ.

ಮೊದಲ ದಿನಕ್ಕಿಂತ 7ನೇ ದಿನ 'ಸು ಫ್ರಂ ಸೋ' ಕಲೆಕ್ಷನ್ ಜಾಸ್ತಿಯಾಗಿದೆ. ಸಿನಿಮಾ ಯಾವ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ. ಆರಂಭದಲ್ಲಿ ಮಲ್ಟಿಪೆಕ್ಸ್‌ಗಳಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಕೂಡ ಸಿನಿಮಾ ಸದ್ದು ಮಾಡ್ತಿದೆ. ತಮಿಳು, ತೆಲುಗು ಸಿನಿಮಾಗಳು ಪ್ರದರ್ಶನಗೊಳ್ಳುವ ಚಿತ್ರಮಂದಿರಗಳಲ್ಲಿ ಕೂಡ 'ಸು ಫ್ರಂ ಸೋ' ಸಿನಿಮಾ ಪ್ರದರ್ಶಿಸುವಂತಾಗಿದೆ. ಅಷ್ಟರಮಟ್ಟಿಗೆ ಸಿನಿಮಾ ಕ್ರೇಜ್ ಹುಟ್ಟಾಕ್ಕಿದೆ.

Su From So Smashes BookMyShow Records Beats Katera amp amp Max in 7-Day Ticket Sales

ಮುಂದೆ ಓದಿ...

1. 'ಸು ಫ್ರಂ ಸೋ' 7ನೇ ದಿನದ ದಾಖಲೆ

2. ಬುಕ್‌ಮೈಶೋನಲ್ಲಿ 'ಕಾಟೇರ', 'ಮ್ಯಾಕ್ಸ್' ದಾಖಲೆ ಉಡೀಸ್

3. ಪರಭಾಷೆಗಳಿಗೆ ಡಬ್ ಆಗಿ ಸಿನಿಮಾ ರಿಲೀಸ್

4. ರಾಜ್‌ ಬಿ ಶೆಟ್ಟಿ ಬಿಂದಾಸ್ ಡ್ಯಾನ್ಸ್

5. ಎರಡನೇ ವಾರವೂ ನಿಲ್ಲದ ಆರ್ಭಟ

ಜೆಪಿ ತಮ್ಮಿನಾಡ್ ಮತ್ತವರ ತಂಡ ಅಕ್ಷರಶಃ ಮ್ಯಾಜಿಕ್ ಮಾಡಿದೆ. ಸ್ಟಾರ್ ನಟರಿಲ್ಲದೇ, ಭಾರೀ ಪ್ರಚಾರ ಇಲ್ಲದೇ ಬಂದ ಸಿನಿಮಾ ಹಲವು ದಾಖಲೆ ಬರೆದಿದೆ. ಕೆಲ ವಿಚಾರಗಳಲ್ಲಿ ಇತ್ತೀಚೆಗೆ ಬಂದ 'ಕಾಟೇರ' ಹಾಗೂ 'ಮ್ಯಾಕ್ಸ್' ಸಿನಿಮಾಗಳನ್ನು ಹಿಂದಿಕ್ಕಿದೆ. ಬಹುತೇಕರು ಬುಕ್‌ಮೈಶೋನಲ್ಲೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಹಾಗಾಗಿ ದಿನದಿಂದ ದಿನಕ್ಕೆ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಹೆಚ್ಚಾಗುತ್ತಿದೆ. ಇಂದಿನಿಂದ(ಆಗಸ್ಟ್ 01) ಸಿನಿಮಾ ಮಲಯಾಳಂ ಭಾಷೆಗೆ ಡಬ್ ಆಗಿ ಕೇರಳದಲ್ಲಿ ಬಿಡುಗಡೆಯಾಗಿದೆ.

ನಿಧಾನವಾಗಿ ತೆಲುಗು, ಹಿಂದಿ ಭಾಷೆಗೂ ಡಬ್ ಆಗಿ 'ಸು ಫ್ರಂ ಸೋ' ಸದ್ದು ಮಾಡಲು ಮುಂದಾಗಿದೆ. ಇಂಗ್ಲೀಷ್ ಸಬ್ ಟೈಟಲ್ಸ್ ಜೊತೆಗೆ ಪರಭಾಷಿಕರು ಕನ್ನಡದಲ್ಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತೆಲುಗು, ಹಿಂದಿ ಸಿನಿಮಾ ವಿಮರ್ಶಕರು ಕನ್ನಡ ಚಿತ್ರವನ್ನು ಹಾಡಿ ಹೊಗಳಿದಿದ್ದಾರೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮುಂದೆ ಸದ್ದು ಮಾಡುವ ಅಂದಾಜಿದೆ.

7ನೇ ದಿನ ಮ್ಯಾಜಿಕ್

ಅಧಿಕೃತವಾಗಿ ಚಿತ್ರತಂಡ 'ಸು ಫ್ರಂ ಸೋ' ಚಿತ್ರದ ಕಲೆಕ್ಷನ್ ಲೆಕ್ಕ ಕೊಟ್ಟಿಲ್ಲ. ಆದರೆ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವುದು, ಬುಕ್‌ಮೈ ಶೋ ಬುಕ್ಕಿಂಗ್‌ನಲ್ಲಿ ಗಳಿಕೆ ಹೇಗಿದೆ ಎನ್ನುವುದನ್ನು ಅಂದಾಜಿಸಬಹುದು. Sacnilk.com ವೆಬ್‌ಸೈಟ್ ವರದಿ ಪ್ರಕಾರ ಸಿನಿಮಾ ಮೊದಲ 7 ದಿನಕ್ಕೆ 23.6 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ನಿನ್ನೆ(ಗುರುವಾರ) ಅತಿ ಹೆಚ್ಚು ಅಂದರೆ 4.26 ಕೋಟಿ ರೂ. ಗಳಿಕೆ ಮಾಡಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ.

ಬುಕ್‌ಮೈ ಶೋ ದಾಖಲೆ

'ಸು ಫ್ರಂ ಸೋ' ಚಿತ್ರದ ಪ್ರೀಮಿಯರ್‌ ಶೋಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ ಮೊದಲ ಶುಕ್ರವಾರವೂ ನಿಧಾನವಾಗಿ ಸಿನಿಮಾ ಸದ್ದು ಮಾಡಲು ಆರಂಭಿಸಿತು. ಶನಿವಾರ ಹಾಗೂ ಭಾನುವಾರ ಶೋಗಳ ಸಂಖ್ಯೆ ಹೆಚ್ಚಾಗಿ ಕಲೆಕ್ಷನ್ ಡಬಲ್ ಆಗಿತ್ತು. ಸೋಮವಾರದ ಬಳಿಕ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಯಿತು. ಇಂದು ಕೂಡ ಗಂಟೆಗೆ 6 ಸಾವಿರ ಟಿಕೆಟ್ ಬುಕ್‌ಮೈ ಶೋನಲ್ಲಿ ಬುಕ್ ಆಗ್ತಿದೆ. ಮೊದಲ 7 ದಿನಕ್ಕೆ 7 ಲಕ್ಷದ 74 ಸಾವಿರ ಟಿಕೆಟ್ ಆನ್‌ಲೈನ್‌ನಲ್ಲಿ ಬುಕ್ ಆಗಿ ದಾಖಲೆ ಬರೆದಿದೆ.

ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಮೊದಲ 7 ದಿನದಲ್ಲಿ 6 ಲಕ್ಷದ 53 ಸಾವಿರ ಟಿಕೆಟ್ ಬುಕ್ ಆಗಿದ್ದರೆ, 'ಮ್ಯಾಕ್ಸ್' ಚಿತ್ರಕ್ಕೆ 5 ಲಕ್ಷದ 85 ಸಾವಿರ ಟಿಕೆಟ್ ಬುಕ್ ಆಗಿತ್ತು. ನಿನ್ನೆ 7ನೇ ದಿನ 1ಲಕ್ಷದ 47 ಸಾವಿರ ಟಿಕೆಟ್ ಬುಕ್ ಆಗಿದ್ದು ಹೊಸ ದಾಖಲೆ. ಒಂದೂವರೆ ವರ್ಷದಿಂದ ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಲೆಕ್ಕ ಕೊಡುತ್ತಿದೆ. ಆ ಬಳಿ ಒಂದೇ ದಿನದಲ್ಲಿ ಅತಿಹೆಚ್ಚು ಟಿಕೆಟ್ ಬುಕ್ ಆಗಿದ್ದ ಸಿನಿಮಾ ಎನ್ನುವ ದಾಖಲೆ 'ಸು ಫ್ರಂ ಸೋ' ಪಾಲಾಗಿದೆ. 'ಮ್ಯಾಕ್ಸ್' ಹಾಗೂ 'ಕಾಟೇರ' ಚಿತ್ರವನ್ನು ಹೆಚ್ಚು ಜನ ಥಿಯೇಟರ್‌ನಲ್ಲೇ ಟಿಕೆಟ್ ಖರೀದಿಸಿ ನೋಡಿದ್ದರು. ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾಗಳು ತೆರೆಗೆ ಬಂದಿದ್ದವು. ಸ್ಟಾರ್ ನಟರ ಸಿನಿಮಾ ಆಗಿದ್ದರಿಂದ ಕಲೆಕ್ಷನ್ ಕೂಡ ಜಾಸ್ತಿ ಆಗಿತ್ತು.

ಟೀಂ ಡ್ಯಾನ್ಸ್

ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ಚಿತ್ರತಂಡ ಖುಷಿಯಾಗಿದೆ. ನಿರ್ದೇಶಕ ಜೆಪಿ ತುಮ್ಮಿನಾಡ್, ನಿರ್ಮಾಪಕ ರಾಜ್‌ ಬಿ ಶೆಟ್ಟಿ ಹಾಗೂ ರವಿಯಣ್ಣ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಆ ವೀಡಿಯೋಸ ಸಖತ್ ವೈರಲ್ ಆಗ್ತಿದೆ.

2ನೇ ವಾರವೂ ಹವಾ

'ಹರಿಹರ ವೀರಮಲ್ಲು', 'ಸಯ್ಯಾರ', 'ಎಕ್ಕ', 'ಮಹಾವತಾರ್ ನರಸಿಂಹ', 'ತಲೈವಾ ತಲೈವಿ' ಹೀಗೆ ದೊಡ್ಡ ದೊಡ್ಡ ಸಿನಿಮಾಗಳ ನಡುವೆ 'ಸು ಫ್ರಂ ಸೋ' ಆರ್ಭಟ ಮುಂದುವರೆದಿದೆ. ಈ ವಾರ ವಿಜಯ್ ದೇವರಕೊಂಡ ನಟನೆಯ 'ಕಿಂಗ್‌ಡಮ್' ಸಿನಿಮಾ ತೆರೆಗೆ ಬಂದಿದೆ. ಆದರೂ 'ಸು ಫ್ರಂ ಸೋ' ದರ್ಬಾರ್ ತಡೆಯೋಕೆ ಸಾಧ್ಯವಾಗಲಿಲ್ಲ.

More from Filmibeat

English summary
‘Su From So’ dominates the box office with 7.74 lakh online tickets in 7 days, surpassing ‘Katera’ (6.53 lakh) and ‘Max’ (5.85 lakh). The Raj B Shetty production also grossed ₹23.6 crore.
Read more about: raj b shetty sandalwood kaatera
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X