»   » ಸಬ್ಸಿಡಿ ಅರಸಿ ಬಂದ 55 ಕನ್ನಡ ಚಿತ್ರಗಳ ಪೈಕಿ 35 ನಪಾಸು

ಸಬ್ಸಿಡಿ ಅರಸಿ ಬಂದ 55 ಕನ್ನಡ ಚಿತ್ರಗಳ ಪೈಕಿ 35 ನಪಾಸು

Posted By: Super
Subscribe to Filmibeat Kannada

ಬೆಂಗಳೂರು : 98-99ರ ಸಾಲಿನಲ್ಲಿ ಬಿಡುಗಡೆಯಾದ 20 ಕನ್ನಡ ಚಿತ್ರಗಳಿಗೆ ಬಿ.ವಿ. ಕಾರಂತ್‌ ನೇತೃತ್ವದ ಗುಣಮಟ್ಟ ನಿಯಂತ್ರಣ ಸಮಿತಿ ಸಬ್ಸಿಡಿಗೆ ಆಯ್ಕೆ ಮಾಡಿದೆ. ಈ ಸಬ್ಸಿಡಿಯ ಮೊತ್ತ ತಲಾ 10 ಲಕ್ಷ ರುಪಾಯಿ ಆಗಿದ್ದು, ಸರ್ಕಾರದ ಬೊಕ್ಕಸದಿಂದ 2 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ.

ಕಾರಂತ್‌ ನೇತೃತ್ವದ ಸಮಿತಿಯು ಸಬ್ಸಿಡಿಗೆ ಆಯ್ಕೆ ಮಾಡಿರುವ ಚಿತ್ರಗಳು : 1.ಭೂಮಿ ಗೀತ, 2. ನೋಡು ಬಾ ನಮ್ಮೂರ, 3. ವಿಮೋಚನೆ, 4. ಜೋಡಿ ಹಕ್ಕಿ, 5. ವೀರಪ್ಪ ನಾಯಕ, 6. ಟುವ್ವಿ ಟುವ್ವಿ, 7. ಅಂತರ್ಗಾಮಿ, 8. ಚಿಕ್ಕ, 9. ದೋಣಿ ಸಾಗಲಿ, 10. ನಿಶ್ಶಬ್ದ, 11. ಹೃದಯಾಂಜಲಿ, 12. ಭೂಮಿಯ ತಾಯಿಯ ಚೊಚ್ಚಲ ಮಗ, 13. ಸಿದ್ಧಾರೂಢ ಮಹಾತ್ಮೆ, 14. ಪ್ರತಿಭಟನೆ, 15. ನೀ ಮುಡಿದಾ ಮಲ್ಲಿಗೆ, 16. ಮೇಘ ಬಂತು ಮೇಘ, 17. ಅಂಡಮಾನ್‌, 18. ಆಡಿ ಬಾ ಅರಗಿಣಿಯೆ 19. ವಜ್ರ, 20. ಅಗ್ನಿ ಸಾಕ್ಷಿ.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ (ಜೋಡಿ ಹಕ್ಕಿ, ಅಂಡಮಾನ್‌, ಭೂಮಿಯ ತಾಯಿಯ ಚೊಚ್ಚಲ ಮಗ) ಮೂರು ಚಿತ್ರಗಳಿಗೆ ಹಾಗೂ ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯದ (ವೀರಪ್ಪ ನಾಯಕ, ನಿಶ್ಶಬ್ದ) ಎರಡು ಚಿತ್ರಗಳಿಗೆ ಸಬ್ಸಿಡಿ ದೊರಕಿದೆ. ಸಬ್ಸಿಡಿ ಬಯಸಿ 55 ಚಿತ್ರಗಳು ಬಂದಿದ್ದವು.

English summary
B.V. Karanth committee selects 20 films for government subsidy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada