»   » ರೀಮೇಕ್‌ ಚಿತ್ರಗಳಿಗೆ ಸಬ್ಸಿಡಿ ಕೂಡದು- ಕೃಷ್ಣಗೆ ನಿರ್ದೇಶಕರ ಮನವಿ ಪತ್ರ

ರೀಮೇಕ್‌ ಚಿತ್ರಗಳಿಗೆ ಸಬ್ಸಿಡಿ ಕೂಡದು- ಕೃಷ್ಣಗೆ ನಿರ್ದೇಶಕರ ಮನವಿ ಪತ್ರ

Subscribe to Filmibeat Kannada

ಬೆಂಗಳೂರು : ರೀಮೇಕ್‌ ಕನ್ನಡ ಚಿತ್ರಗಳಿಗೆ ಕೊಡುತ್ತಿರುವ ಸಬ್ಸಿಡಿಯನ್ನು ರದ್ದು ಮಾಡುವಂತೆ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಬುಧವಾರ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ರೀಮೇಕ್‌ ಚಿತ್ರಗಳಿಗೆ ಸಬ್ಸಿಡಿ ಕೊಟ್ಟು, ಬೆನ್ನು ತಟ್ಟುತ್ತಿರುವುದರಿಂದ, ನಮ್ಮೂರಿನ ಕನ್ನಡ ಕಲಾವಿದರು ಹಾಗೂ ತಂತ್ರಜ್ಞರು ಮೂಲೆಗುಂಪಾಗುವುದರ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಈವರೆಗೆ ಸರಿ ಸುಮಾರು 100 ಕೋಟಿ ರುಪಾಯಿ ನಷ್ಟವಾಗಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ಸ್ಯಾಂಡಲ್‌ವುಡ್‌ ಕನ್ನಡ ಬಾರದ 25 ನಿರ್ದೇಶಕರನ್ನು ಕಂಡಿದೆ! ಅವರನ್ನು ಕರೆ ತಂದ ನಿರ್ಮಾಪಕರಿಗೆ ಧನ್ಯವಾದಗಳು. ರೀಮೇಕ್‌ ಚಿತ್ರಗಳಿಗೆ ಸರ್ಕಾರ ಹೀಗೇ ಸಹಾಯಧನ ನೀಡುತ್ತಾ ಹೋದರೆ ಬೊಕ್ಕಸ ಇನ್ನಷ್ಟು ಕಳೆದುಕೊಳ್ಳಲಿದೆ ಎಂದು ಸಂಘದ ಪದಾಧಿಕಾರಿಗಳಲ್ಲೊಬ್ಬರಾದ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಎಚ್ಚರಿಕೆಯ ಮಾತುಗಳನ್ನಾಡಿದರು.

ಬಾಬು ಜೊತೆಗೆ ನಿರ್ದೇಶಕರಾದ ಕೂಡ್ಲು ರಾಮಕೃಷ್ಣ, ಭಾರ್ಗವ, ತಿಪಟೂರು ರಘು, ಬಿ.ವಿ.ರಾಜಾರಾಂ ಹಾಗೂ ಬೂದಾಳ್‌ ಕೃಷ್ಣಮೂರ್ತಿ ಮೊದಲಾದವರು ಮುಖ್ಯಮಂತ್ರಿ ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada