For Quick Alerts
  ALLOW NOTIFICATIONS  
  For Daily Alerts

  ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!

  |

  ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ಬಗ್ಗೆ ಆಂಧ್ರ-ತೆಲಂಗಾಣದಲ್ಲಿ ಕಳೆದೊಂದು ವಾರದಿಂದ ಎಲ್ಲೆಡೆ ಗುಲ್ಲೆದ್ದಿತ್ತು. ಇನ್ನೊಂದು ಕಡೆ ಕರ್ನಾಟಕದಲ್ಲಿ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಪತಿ ಹಾಗೂ ಪವಿತ್ರಾ ಲೋಕೇಶ್ ವಿರುದ್ಧ ತಿರುಗಿಬಿದ್ದಿದ್ದರು. ಈ ಪ್ರಕರಣ ದಿನದಿಂದ ದಿನಕ್ಕೆ ಮತ್ತಷ್ಟು ರಾಡಿಯಾಗುತ್ತಲೇ ಇದೆ.

  ತೆಲುಗು ನಟ ನರೇಶ್ ಬಾಳಲ್ಲಿ ಪವಿತ್ರಾ ಲೋಕೇಶ್ ಎಂಟ್ರಿ ಆದ್ಮೇಲೆ ಈ ರಾಮಾಯಣ ಶುರುವಾಯಿತು. ನರೇಶ್ ತಮ್ಮ ಮೂರನೇ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಈ ಮಧ್ಯೆ ಯಾರಿಗೂ ಸಿಗದ ಸುಚೇಂದ್ರ ಪ್ರಸಾದ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

  ಸುಚೇಂದ್ರ ಪ್ರಸಾದ್ ಅವರಂತಹ ಪತಿಯನ್ನು ಪಡೆದ ನಾನು ತುಂಬಾ ಅದೃಷ್ಟಶಾಲಿ: ಪವಿತ್ರಾ ಲೋಕೇಶ್!ಸುಚೇಂದ್ರ ಪ್ರಸಾದ್ ಅವರಂತಹ ಪತಿಯನ್ನು ಪಡೆದ ನಾನು ತುಂಬಾ ಅದೃಷ್ಟಶಾಲಿ: ಪವಿತ್ರಾ ಲೋಕೇಶ್!

  ಸುಚೇಂದ್ರ ಪ್ರಸಾದ್ ಪತ್ನಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಂಬಂಧದ ಬಗ್ಗೆ ಎಲ್ಲೂ ಮಾತಾಡಿರಲಿಲ್ಲ. ಈಗ ಮಾಧ್ಯಮವೊಂದರ ಜೊತೆ ಮಾತಾಡಿದ್ದು, ಪವಿತ್ರಾ ಲೋಕೇಶ್ ಜೊತೆ ತಮ್ಮ ಸಂಬಂಧ ಹಾಗೂ ನರೇಶ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ. ಅದರ ಸಾರಾಂಶ ಹೀಗಿದೆ.

  ಎನೂ ಇಲ್ಲಾ ಅಂತಾನೇ ವಾದ!

  ಎನೂ ಇಲ್ಲಾ ಅಂತಾನೇ ವಾದ!

  ಸುಚೇಂದ್ರ ಪ್ರಸಾದ್ ಹಿರಿಯ ಪತ್ರಕರ್ತರೊಂದಿಗೆ ಮಾತಾಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಈ ಕ್ಲಿಕ್ ಅನ್ನು ಕನ್ನಡದ ನ್ಯೂಸ್ ಚಾನೆಲ್ ಪವರ್‌ ಟಿವಿ ಪ್ರಸಾರ ಮಾಡಿದೆ. ಈ ವೇಳೆ ಸುಚೇಂದ್ರ ಪ್ರಸಾದ್ ಪತ್ನಿ ಪವಿತ್ರಾ ಲೋಕೇಶ್ ಅವರಿಗೆ ಈಗ ಎದ್ದಿರುವ ಸುದ್ಧಿಯ ಬಗ್ಗೆ ವಿವರಣೆ ಹೇಳಲು ಮುಂದಾದಾಗಿದ್ದರು. ಆದರೆ ಅವರು ಅಂತಹದ್ದೇನೂ ಇಲ್ಲ ಎಂದು ವಾದ ಮಾಡಿದ್ದಾರೆ ಎಂದಿದ್ದಾರೆ. "ನಾನು ತುಂಬಾನೇ ಮಾತಾಡಿದೆ. ಎಲ್ಲಾ ವಿಚಾರವನ್ನೂ ಹೇಳಿದೆ. ಆದರೆ, ಇಲ್ಲವೇ ಇಲ್ಲ ಎಂದು ವಾದಿಸುತ್ತಾರೆ. ಅದೇನು ಎಂಬುದು ನನಗೆ ಗೊತ್ತೇ ಇಲ್ಲ. ಇಲ್ಲವೇ ಇಲ್ಲ ಎನ್ನುತ್ತಾರೆ." ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ.

  Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?

  ನನ್ನ ಕರುಳೆಲ್ಲಾ ಹಿಂಡುತ್ತೆ

  ನನ್ನ ಕರುಳೆಲ್ಲಾ ಹಿಂಡುತ್ತೆ

  "ಮೊದಲಿನಿಂದಲೂ ಆ ಅಧಿಕಾರದಲ್ಲಿ ನನಗೆ ದೊಡ್ಡ ಸೋಲು ನಡೆದೇ ಇದೆ. ಯಾರಿಗೋ ಅನ್ಯಾಯವಾಗುತ್ತಲ್ಲ ಅಂತ. ಅದು ತುಂಬಾ ಜನರಿಗೆ ಅಭ್ಯಾಸ ಆಗಿ ಹೋಗಿರುತ್ತೆ. ಅದು ರೂಢಿಯಾಗಿರಲೂ ಬೇಕು. ಅಂತಹವರಿಗೆ ನಾನು ಏನು ಹೇಳುವುದಕ್ಕೆ ಆಗುತ್ತೆ. ಆ ಹೆಣ್ಣು ಮಗಳ ಮೇಲೆ ನಾನು ಸಂತಾಪ ಸೂಚಿಸಬಹುದು. ನನ್ನ ಕರುಳೆಲ್ಲಾ ಹಿಂಡುತ್ತೆ. ಏನು ಮಾಡಲು ಸಾಧ್ಯ. ಆದರೆ ರಮ್ಯಾ ಅವರೊಂದಿಗೆ ನಾನು ಇದ್ದೇನೆ." ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ.

  ಮಕ್ಕಳ ಕಥೆ ಬಲು ಘೋರ

  ಮಕ್ಕಳ ಕಥೆ ಬಲು ಘೋರ

  "ಆ ಎರಡು ಮಕ್ಕಳ ಬಗ್ಗೆ ನಾನು ಯೋಚನೆ ಮಾಡಿದಾಗ, ಅದೆಷ್ಟು ಘೋರ ಅಂತ ಯೋಚನೆ ಮಾಡಿ ನೋಡೋಣ. ಅದೆಲ್ಲಾ ವಿವರಿಸಿ ಹೇಳಿದ್ದು ಆಗಿದೆ. ಇದೂ ಯಾರಿಗೂ ಒಳ್ಳೆಯದಲ್ಲ ಇದು ಎಂದು ಹೇಳಿದ್ದೆ. ಆದರೆ, ಲಾಲಸೆ ಇದೆಯಲ್ಲಾ ಮನುಷ್ಯನಿಗೆ ಅದು ನನಗೆ ಮೋಹದ ಹಾಗೆ ಕಾಣಿಸುವುದಿಲ್ಲ. ಆತ ಲಂಪಟ. ಇವರ ಲಪಟಾಯಿಸುವ ಬುದ್ಧಿಯವರು. ನಾನು ಅವರೊಂದಿಗೆ ಬದುಕು ನಡೆಸಿದ್ದೇನೆ. ಇದು ಮನೆಹಾಳು ಬುದ್ಧಿ ಇದು. ಸದ್ಯ ನನ್ನಮನಸ್ಥಿತಿಯಲ್ಲಿ ಮಡುವುಗಟ್ಟಿದ ಆಕ್ರೋಶ ಎಂದೋ ಇತ್ತು. ಇಂತಹ ವರ್ತನೆ ಶೋಭೆ ತರುವಂತಹದ್ದಲ್ಲ." ಎಂದಿದ್ದಾರೆ.

  ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!

  ಸಿಕ್ಕಿದ್ದು ಬಹಳ ಒಳ್ಳೆಯ ಸ್ವಾತಂತ್ರ್ಯ

  ಸಿಕ್ಕಿದ್ದು ಬಹಳ ಒಳ್ಳೆಯ ಸ್ವಾತಂತ್ರ್ಯ

  "ನಿಮ್ಮನ್ನು ದೂರ ಮಾಡಿದ ಮೇಲೆ ಅಲ್ಲಿ ನಿಮ್ಮ ಪಾದ ರಕ್ಷೆಗಳನ್ನೂ ಬಿಡಬಾರದು. ನಾನು ಸ್ವಲ್ಪ ತಟಸ್ಥ ಭಾವವಿದ್ದೇನೆ. ನನ್ನ ಓದು, ನಾನು ಕಲಿತು ಬಂದಿದ್ದು, ನನ್ನ ಸಾಹಿತ್ಯ ಇದೆಯಲ್ಲ. ಅವುನನ್ನು ಭೌತಿಕವಾಗಿ ಬೆಳೆಸಿದ್ದರಿಂದ ನನಗೆ ವಿಚಲಿತನಾಗಬೇಕು ಅಂತ ಅನಿಸುತ್ತಿಲ್ಲ. ಹೌದಾ ಇದು ಬಹಳ ಒಳ್ಳೆ ಸ್ವಾತಂತ್ರ್ಯ ಅಲ್ಲವಾ ಅಂತ ಅನಿಸಿತ್ತು.

  ಇನ್ನು ಆರು ತಿಂಗಳು ಅಷ್ಟೇ

  ಇನ್ನು ಆರು ತಿಂಗಳು ಅಷ್ಟೇ

  " ನಾನು ಅವರ ಬೇಕು ಬೇಡಿಕೆಗಳನ್ನು ಗಮನಿಸಿಕೊಳ್ಳುತ್ತಾ, ಅವರ ಚಿಂತನೆ ಹಾಗೂ ಆಲೋಚನಾ ಕ್ರಮಗಳನ್ನು ಓಲೈಸುತ್ತಾ ನೊಂದಿದ್ದೇನೆ. ಈಗ ಮತ್ತೊಬ್ಬ ಮಹಾನುಭಾವನ ಸರದಿಯೀಗ. ಇನ್ನು ಆ ಮಹಾನುಭಾವ ನಲುಗುತ್ತಾನೆ. ಅದೇನು ಬಹಳ ಕಾಲವಿಲ್ಲ. ನಾನು ಭವಿಷ್ಯ ನುಡಿಯುತ್ತೇನೆ. ಇನ್ನು ಆರು ತಿಂಗಳು." ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ."

  English summary
  Suchendra Prasad Reaction On Pavithra Lokesh and Naresh Marriage Rumour, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X